'ಗುಜರಾತ್‌ ರೀತಿ ಕರ್ನಾಟಕದಲ್ಲೂ ಬಿಜೆಪಿ ಟಿಕೆಟ್‌: ಹಾಲಿ ಎಂಎಲ್‌ಎ, ಸಚಿವರಿಗೆ ಟಿಕೆಟ್‌ ಕೈ ತಪ್ಪುವ ಸಾಧ್ಯತೆ'

ರಾಜ್ಯದಲ್ಲಿ ಬಿಜೆಪಿ ಪರ ಅಲೆ ಸ್ಪಷ್ಟವಾಗಿದೆ. ಹೀಗಾಗಿ ಟಿಕೆಟ್‌ ಕಾಂಕ್ಷಿಗಳೆಲ್ಲರ ಚಾರಿತ್ರ್ಯ, ಅವರ ನಡೆ- ನುಡಿಗಳನ್ನೆಲ್ಲ ಪರಿಶೀಲಿಸಲಾಗುತ್ತಿದೆ. ಕೈ, ಬಾಯಿ ಶುದ್ಧ ಇದ್ದವರಿಗೆ ಈ ಬಾರಿ ಹೆಚ್ಚಿನ ಆದ್ಯತೆ. ಹೀಗಾಗಿ ಈ ಮಾನದಂಡದಡಿಯಲ್ಲಿ ಹೊಂದದೆ ಇದ್ದವರು ಹಾಲಿ ಶಾಸಕರಾಗಿರಲೀ, ಸಚಿವರಾಗಿರಲಿ ಅಂತಹವರಿಗೆ ಟಿಕೆಟ್‌ ಕೈ ತಪ್ಪೋದು ನಿಶ್ಚಿತ ಎಂದು ಖಚಿತಪಡಿಸಿದ ಮಾಲೀಕಯ್ಯ ಗುತ್ತೇದಾರ್‌

Like Gujarat Karnataka is also BJP Ticket Says Malikayya Guttedar grg

ಕಲಬುರಗಿ(ಫೆ.22):  ರಾಜ್ಯದಲ್ಲಿ ಈ ಬಾರಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲುವ ತಂತ್ರಗಾರಿಕೆ ಮಾಡುತ್ತಿದೆ. ಜನಪ್ರತಿನಿಧಿಗಳ ಚಾರಿತ್ರ್ಯ, ಜನರೊಂದಿಗಿನ ಸಂಬಂಧಗಳ ಬಗ್ಗೆ ಹೈಕಮಾಂಡ್‌ ಗಮನಿಸ್ತಾ ಇದೆ. ಗುಜರಾತ್‌ ಮಾದರಿಯಂತೆಯೇ ರಾಜ್ಯದಲ್ಲೂ ಟಿಕೆಟ್‌ ಹಂಚಿಕೆಯಾಗಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್‌ ಹೇಳಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಪರ ಅಲೆ ಸ್ಪಷ್ಟವಾಗಿದೆ. ಹೀಗಾಗಿ ಟಿಕೆಟ್‌ ಕಾಂಕ್ಷಿಗಳೆಲ್ಲರ ಚಾರಿತ್ರ್ಯ, ಅವರ ನಡೆ- ನುಡಿಗಳನ್ನೆಲ್ಲ ಪರಿಶೀಲಿಸಲಾಗುತ್ತಿದೆ. ಕೈ, ಬಾಯಿ ಶುದ್ಧ ಇದ್ದವರಿಗೆ ಈ ಬಾರಿ ಹೆಚ್ಚಿನ ಆದ್ಯತೆ. ಹೀಗಾಗಿ ಈ ಮಾನದಂಡದಡಿಯಲ್ಲಿ ಹೊಂದದೆ ಇದ್ದವರು ಹಾಲಿ ಶಾಸಕರಾಗಿರಲೀ, ಸಚಿವರಾಗಿರಲಿ ಅಂತಹವರಿಗೆ ಟಿಕೆಟ್‌ ಕೈ ತಪ್ಪೋದು ನಿಶ್ಚಿತ ಎಂದು ಖಚಿತಪಡಿಸಿದರು.

ಚುನಾ​ವಣೆಯಲ್ಲಿ ಸ್ಪರ್ಧೆಸಲು ಜಡ್ಜ್‌ ಹುದ್ದೆಗೆ ರಾಜೀನಾಮೆ ನೀಡಿದ ರಾಠೋಡ್‌

ಜನನಾಯಕರಾದವರು ಜನರೊಂದಿಗೆ ಅನ್ಯೋನ್ಯ ಬಾಂಧವ್ಯ ಹೊಂದಿರಬೇಕು ಎಂಬುದು ಪಕ್ಷದ ನಾಯಕರ ಮುಖ್ಯ ಮಾನದಂಡ. ಹಾಲಿ ಇರುವ ಶಾಸಕರು, ಸಚಿವರು ಅದ್ಹೇಗೆ ಆಡಳಿತ ನೀಡಿದ್ದಾರೆ. ಜನರೊಂದಿಗೆ ಹೇಗಿದ್ದಾರೆ ಎಲ್ಲದರ ಮಾಹಿತಿ ಸಂಗ್ರಹ ಮಾಡಿಯೇ ಟಿಕೆಟ್‌ ಅಂತಿಮಗೊಳಿಸಲು ಹೈಕಮಾಂಡ್‌ ಮುಂದಾಗಿದೆ ಎಂದರು.

Latest Videos
Follow Us:
Download App:
  • android
  • ios