Asianet Suvarna News Asianet Suvarna News

Karnataka Politics: ಬಿಜೆಪಿಯಲ್ಲಿ ಶಿಸ್ತಿದ್ದರೆ ತೋರಿಸಲಿ: ಡಿ.ಕೆ.ಶಿವಕುಮಾರ

*  ಬಹಿರಂಗ ಚರ್ಚೆಗೆ ನಾನು ಸಿದ್ಧ, ಸಮಯವನ್ನು ಈಶ್ವರಪ್ಪ ಅವರೇ ಹೇಳಲಿ 
*  ಗ್ರಾಮ ಪಂಚಾಯಿತಿಗೆ ಶಕ್ತಿ ಬಂದಿರುವುದೇ ಕಾಂಗ್ರೆಸ್‌ನಿಂದ
*  ಬಿಟ್‌ ಕಾಯಿನ್‌ ವಿಚಾರ ನಾವು ಬಿಡುವುದಿಲ್ಲ

Let The Show If Discipline in BJP Says DK Shivakumar grg
Author
Bengaluru, First Published Nov 29, 2021, 1:29 PM IST
  • Facebook
  • Twitter
  • Whatsapp

ಹುಬ್ಬಳ್ಳಿ(ನ.29):  ಬಿಜೆಪಿಯವರು(BJP) ತಮ್ಮದು ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುತ್ತಾರೆ. ಶಿಸ್ತು ಇರುವುದು ಹೌದಾದರೆ ತೋರಿಸಲಿ ನೋಡೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ(DK Shivakumar) ಸವಾಲು ಹಾಕಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಡಿಯೂರಪ್ಪ(BS Yediyurappa) ಮುಖ್ಯಮಂತ್ರಿ ಆಗಿದ್ದಾಗ ಅವರ ವಿರುದ್ಧ ರಾಜ್ಯಪಾಲರಿಗೆ(Governor) ಈಶ್ವರಪ್ಪ(KS Eshwarappa) ಪತ್ರ ಬರೆದು ತಮ್ಮ ನೋವು ತೋಡಿಕೊಂಡಿದ್ದರು. ಅವರು ದೊಡ್ಡ ಮಾತು ಆಡುವ ಮೊದಲು ಬೆಳಗಾವಿಯಲ್ಲಿ(Belagavi) ತಮ್ಮ ಪಕ್ಷದಲ್ಲಿ ಏನಾಗುತ್ತಿದೆ ಎಂಬುದು ನೋಡಿಕೊಳ್ಳಲಿ. ಬೆಳಗಾವಿಯಲ್ಲಿ ಲಖನ್‌ ಜಾರಕಿಹೊಳಿ(Lakhan Jarkiholi) ಪಕ್ಷೇತರರಾಗಿ ಸ್ಪರ್ಧಿಸಿರುವ ಬಗ್ಗೆ ಶಿಸ್ತನ್ನು ತೋರಿಸಲಿ ನೋಡೋಣ. ಇನ್ನು, ಈಶ್ವರಪ್ಪ ದಲಿತರು(Dalit), ಹಿಂದುಳಿದವರ ಅಭಿವೃದ್ಧಿಗೆ ಕಾಂಗ್ರೆಸ್‌(Congress) ಯಾವ ಕೊಡುಗೆ ನೀಡಿದೆ ಎಂಬ ವಿಚಾರಕ್ಕೆ ಸಂಬಂಧಿಸಿ ಬಹಿರಂಗ ಚರ್ಚೆಗೆ ನಾನು ಸಿದ್ಧ, ಸಮಯವನ್ನು ಈಶ್ವರಪ್ಪ ಅವರೇ ಹೇಳಲಿ ಎಂದರು.

Assembly Election Karnataka: 2023ಕ್ಕೆ ಜೆಡಿಎಸ್‌ ಅಧಿಕಾರಕ್ಕೆ ತರಲು ತಯಾರಿ

ರಾಜ್ಯದಲ್ಲಿ ಜನತೆ ಬದಲಾವಣೆ ಬಯಸಿದ್ದು, ವಿಧಾನ ಪರಿಷತ್‌ಗೆ(Vidhan Parishat) ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಳುಹಿಸಲಿದ್ದಾರೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಆಗಿರುವುದೇ ಕಾಂಗ್ರೆಸ್‌ನಿಂದ ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರಿಗೆ ನರೇಗಾ ತಂದಿದ್ದು ಕಾಂಗ್ರೆಸ್‌ ಎಂಬುದು ಗೊತ್ತಿದೆ. ನರೇಗಾ ಇಲ್ಲದಿದ್ದರೆ ಗ್ರಾಮ ಪಂಚಾಯಿತಿಗಳಿಗೆ ಜೀವವೇ ಇಲ್ಲ. ಆ ಕಾರಣಕ್ಕೆ ಪಂಚಾಯಿತಿಗಳಿಗೆ ಕೋಟ್ಯಂತರ ರು. ಆದಾಯ ಬರುತ್ತಿದೆ.

ಗ್ರಾಮ ಪಂಚಾಯಿತಿಗೆ ಶಕ್ತಿ ಬಂದಿರುವುದೇ ಕಾಂಗ್ರೆಸ್‌ನಿಂದ. ಎಸ್‌.ಎಂ. ಕೃಷ್ಣ(SM Krishna) ಅವಧಿಯಲ್ಲಿ ಧಾರವಾಡದಲ್ಲಿ(Dharwad) ‘ಬೇಲೂರು ಘೋಷಣೆ’ ಹೆಸರಿನಲ್ಲಿ ಸರ್ಕಾರದ 27 ಇಲಾಖೆಯನ್ನು ಗ್ರಾಪಂ ಅಡಿ ತಂದೆವು. ಜೆ.ಎಚ್‌. ಪಟೇಲರ(JH Patel) ಅವಧಿಯಲ್ಲಿ ಗ್ರಾಪಂಗೆ ಕೇವಲ 1 ಲಕ್ಷ ಅನುದಾನ ಇತ್ತು. ಅದನ್ನು ಹೆಚ್ಚು ಮಾಡಿದ್ದೆ ನಾವು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ(Reservations for Women) ಸೇರಿ ಸಾಕಷ್ಟು ಕೊಡುಗೆಯನ್ನು ಕಾಂಗ್ರೆಸ್‌ ನೀಡಿದೆ. ಅದರ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಟ್‌ ಕಾಯಿನ್‌(Bitcoin) ವಿಚಾರವನ್ನು ನಾವು ಬಿಡುವುದಿಲ್ಲ. ವಿಪ ಎಲೆಕ್ಷನ್‌ ಮುಗಿಯಲಿ ಪುನಃ ನಾವು ಆ ವಿಚಾರ ಎತ್ತುತ್ತೇವೆ ಎಂದರು.

ವಿದೇಶಿ ಪ್ರಯಾಣಿಕರಿಗೆ ಕ್ವಾರಂಟೈನ್‌ ಮಾಡಿ

ಬೆಂಗಳೂರು: ಕೊರೋನಾ(Coronavirus) ಹೊಸ ತಳಿ ಕಂಡುಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ(Government of Karnataka) ನಿರ್ಲಕ್ಷ್ಯ ವಹಿಸದೆ ಕಟ್ಟೆಚ್ಚರ ವಹಿಸಬೇಕು. ಅಂತಾರಾಷ್ಟ್ರೀಯ ಪ್ರಯಾಣಿಕರನ್ನು(International Passengers) ಪರೀಕ್ಷೆಗೆ ಒಳಪಡಿಸಿ ಸೋಂಕು ದೃಢಪಟ್ಟರೆ ಗುಣವಾಗಿ ಕ್ವಾರಂಟೈನ್‌(Quarantine) ಅವಧಿ ಪೂರ್ಣಗೊಂಡ ಬಳಿಕವಷ್ಟೇ ಜನವಸತಿ ಪ್ರದೇಶಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಲಹೆ ನೀಡಿದ್ದಾರೆ.

Council Election Karnataka : ಮೈಸೂರಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತವೆಂಬ ವಿಶ್ವಾಸ

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ ರೀತಿಯಲ್ಲಿ ಈ ಹಿಂದೆ ರಾಜ್ಯ ಸರ್ಕಾರ ತಡವಾಗಿ ಕ್ರಮ ಕೈಗೊಂಡ ಕಾರಣ ಜನರು ಆಕ್ಸಿಜನ್‌(Oxygen), ಕೋವಿಡ್‌ ಔಷಧಗಳು ಸಿಗದೆ ಪರದಾಡಿದರು. ಕೊರೋನಾ ಹೊಸ ತಳಿ ಒಮಿಕ್ರೋನ್‌(Omicron) ಭೀತಿ ಜಗತ್ತಿನಾದ್ಯಂತ ಹೆಚ್ಚಾಗಿದೆ. ಬೆಂಗಳೂರು(Bengaluru) ಪ್ರವೇಶಿಸುವ ದಿನಗಳು ದೂರವಿಲ್ಲ. ಈ ಬಾರಿಯಾದರೂ ಸರ್ಕಾರ ಎಚ್ಚರದಿಂದ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ದಕ್ಷಿಣ ಆಫ್ರಿಕಾದಿಂದ(South Africa) ಬೆಂಗಳೂರಿಗೆ ಬಂದ ಇಬ್ಬರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹೊಸ ರೂಪಾಂತರಿ ಕೊರೋನಾ ವೈರಸ್‌ ನಿರ್ಲಕ್ಷಿಸದೆ ಹೊರದೇಶದಿಂದ ಬರುವ ಪ್ರಯಾಣಿಕರಿಗೆ ತೊಂದರೆಯಾಗದಂತೆ ಪರೀಕ್ಷೆಗೆ ಒಳಪಡಿಸಬೇಕು ಎಂದು ತಿಳಿಸಿದ್ದಾರೆ.
 

Follow Us:
Download App:
  • android
  • ios