ರಾಜಕೀಯ ಅಸ್ಥಿತ್ವಕ್ಕೆ ಶೋಷಿತ ಸಮುದಾಯಗಳು ಒಗ್ಗಟ್ಟಾಗಲಿ: ಮಾಜಿ ಸಚಿವ ಎಚ್.ಆಂಜನೇಯ
ರಾಜಕೀಯ ಅಸ್ಥಿತ್ವಕ್ಕೆ ಶೋಷಿತ ಸಮುದಾಯಗಳು ಒಂದಾಗಬೇಕಾದ ತುರ್ತು ಅನಿವಾರ್ಯತೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಅಭಿಪ್ರಾಯಪಟ್ಟರು.
ಚಿತ್ರದುರ್ಗ (ಮಾ.01): ರಾಜಕೀಯ ಅಸ್ಥಿತ್ವಕ್ಕೆ ಶೋಷಿತ ಸಮುದಾಯಗಳು ಒಂದಾಗಬೇಕಾದ ತುರ್ತು ಅನಿವಾರ್ಯತೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಅಭಿಪ್ರಾಯಪಟ್ಟರು. ತರಾಸು ರಂಗಮಂದಿರದಲ್ಲಿ ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿವತಿಯಿಂದ ಹಮ್ಮಿಕೊಳ್ಳಲಾಗಿದ್ದ, ಸಂತ ಸೇವಲಾಲ್‍ರ 285ನೇ ಜಯಂತ್ಯುತ್ಸವ ಹಾಗೂ ಗಣ್ಯರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಲಂಬಾಣಿ ಸಮುದಾಯ ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಶೋಷಿತ ಸಮುದಾಯಗಳು ಜೊತೆಯಾಗಿ ಬದುಕುವಂತಹ ವಾತಾವರಣ ನಿರ್ಮಾಣವಾಗಬೇಕೆಂದರು.
ಲಂಬಾಣಿ ಸಮುದಾಯದ ಹಿರಿಯ ಮುಖಂಡ ಎನ್.ಜಯದೇವನಾಯ್ಕ್ ಮತ್ತು ರಾಘವೇಂದ್ರ ನಾಯ್ಕ್ ಇವರಿಗೆ ರಾಜಕೀಯದಲ್ಲಿ ಸ್ಥಾನ ಮಾನಗಳ ಅಗತ್ಯವಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಜೊತೆಗೆ ಮಾತನಾಡಿ ನಿಗಮ ಮಂಡಳಿಗಳಿಗೆ ನೇಮಕ ಮಾಡಿಕೊಳ್ಳುವಂತೆ ಗಮನ ಸೆಳೆಯುವುದಾಗಿ ಎಚ್.ಆಂಜನೇಯ ಭರವಸೆ ನೀಡಿದರು. ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ವರ್ಗದ ಜನರು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಒಂದಾಗಬೇಕಾಗಿದೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ನನ್ನ ಮಗನೂ ಪ್ರಬಲ ಆಕಾಂಕ್ಷಿ: ಶಾಸಕ ಎಸ್.ಆರ್.ವಿಶ್ವನಾಥ್
ಪರಿಶಿಷ್ಟ ಪಟ್ಟಿಯಲ್ಲಿರುವ 101 ಜಾತಿ ಜನರು ಶಿಕ್ಷಣ ಪಡೆದುಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಪರಿಶಿಷ್ಟ ಜಾತಿ ಜನರು ರಾಜಕೀಯವಾಗಿ ಒಗ್ಗಟ್ಟಾಗಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕಾದ ದಿನಗಳು ಸನಿಹದಲ್ಲಿವೆ. ಇಂತಹ ಸಂದರ್ಭದಲ್ಲಿ ಶೋಷಿತ ಜನಾಂಗಗಳೆಲ್ಲ ಒಂದಾಗಬೇಕೆಂದು ಮನವಿ ಮಾಡಿದರು. ಸಮಾರಂಭದಲ್ಲಿ ಟಿ.ಕೆ.ಬಸವರಾಜ್, ತಿಪ್ಪೇಸ್ವಾಮಿ ಸಂಪಿಗೆ, ಎಚ್.ಲಕ್ಷ್ಮಣ್, ಮಹಮ್ಮದ್ ಹನೀಫ್, ಮಹಮ್ಮದಿ ಇವರುಗಳನ್ನು ಸನ್ಮಾನಿಸಲಾಯಿತು. ವಿಮುಕ್ತಿ ವಿದ್ಯಾಸಂಸ್ಥೆಯ ನಿರ್ದೇಶಕ ಅರ್.ವಿಶ್ವಸಾಗರ್, ಸಂತ ಸೇವಲಾಲ್ ಕುರಿತು ಉಪನ್ಯಾಸ ನೀಡಿದರು.
ಓಬಿಸಿಗೆ 27% ಶಿಕ್ಷಣ ಮೀಸಲು ನೀಡಿದ ಪ್ರಧಾನಿ ಮೋದಿ: ಕೆ.ಎಸ್.ಈಶ್ವರಪ್ಪ
ಸ್ಪೂರ್ತಿ ಸಂಸ್ಥೆಯ ಸಿಇಓ ಕೆ.ಬಿ. ರೂಪಾನಾಯ್ಕ್, ಚಳ್ಳಕೆರೆ ತಾಲೂಕು ಬಂಜಾರ ಸಂಘದ ಅಧ್ಯಕ್ಷ ಲೋಕೆಶ್ ನಾಯ್ಕ್, ಮುಖಂಡರಾದ ವಲಸೆ ಶಂಕರನಾಯ್ಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅರುಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತಿಪ್ಪೇಶ್‍ನಾಯ್ಕ್ ಚನ್ನಯ್ಯನಹಟ್ಟಿ, ಅನಿಲ್ ಭೀಮಸಮುದ್ರ, ಜಿ.ಎಸ್.ಟಿ ಚಂದ್ರು, ಗಣೇಶ್ ನಾಯ್ಕ್, ಡಾ. ಈಶ್ವರ್ ನಾಯ್ಕ್, ಎಲ್.ರಮೇಶ್ ನಾಯ್ಕ್ ಉಪಸ್ಥಿತರಿದ್ದರು. ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್. ನಿಂಗಾನಾಯ್ಕ್ ಕಾರ್ಯಕ್ರಮದಲ್ಲಿ ನಿರೂಪಿಸಿ ಸ್ವಾಗತಿಸಿದರು.