Asianet Suvarna News Asianet Suvarna News

5 ವರ್ಷ ಸಿದ್ದರಾಮಯ್ಯ ಸಿಎಂ ಎಂದು ಗ್ಯಾರಂಟಿ ನೀಡಲಿ: ವಿಜಯೇಂದ್ರ ಟಾಂಗ್

ಅಧಿಕಾರಕ್ಕೆ ಬರಲೇಬೇಕೆಂಬ ಉದ್ದೇಶದಿಂದ ಮತದಾರರಿಗೆ ಐದು ಗ್ಯಾರಂಟಿಗಳನ್ನು ನೀಡಿರುವ ಕಾಂಗ್ರೆಸ್‌, ಮುಂದಿನ 5 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯನವರೇ ಇರುತ್ತಾರೆ ಎಂದು 6ನೇ ಗ್ಯಾರಂಟಿಯನ್ನೂ ಕೊಡಬೇಕಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ(BY Vijayendra) ಟಾಂಗ್‌ ನೀಡಿದ್ದಾರೆ

Let Siddaramaiah guarantee that he will be CM for 5 years says by vijayendra at sirigere rav
Author
First Published May 30, 2023, 2:07 AM IST

ಸಿರಿಗೆರೆ (ಮೇ.30) : ಅಧಿಕಾರಕ್ಕೆ ಬರಲೇಬೇಕೆಂಬ ಉದ್ದೇಶದಿಂದ ಮತದಾರರಿಗೆ ಐದು ಗ್ಯಾರಂಟಿಗಳನ್ನು ನೀಡಿರುವ ಕಾಂಗ್ರೆಸ್‌, ಮುಂದಿನ 5 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯನವರೇ ಇರುತ್ತಾರೆ ಎಂದು 6ನೇ ಗ್ಯಾರಂಟಿಯನ್ನೂ ಕೊಡಬೇಕಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ(BY Vijayendra) ಟಾಂಗ್‌ ನೀಡಿದ್ದಾರೆ.

ನೂತನ ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಚಿತ್ರದುರ್ಗ(Chitradurga) ಜಿಲ್ಲೆ ಸಿರಿಗೆರೆಗೆ ಆಗಮಿಸಿದ ಅವರು, ತರಳಬಾಳು(Taralabalu shree) ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಆಶೀರ್ವಾದ ಪಡೆದರು. ಬಳಿಕ, ಸುದ್ದಿಗಾರರ ಜೊತೆ ಮಾತನಾಡಿ, ಕಾಂಗ್ರೆಸ್‌ ನೀಡಿರುವ ಗ್ಯಾರಂಟಿಗಳ(Congress guarantee) ವಿಚಾರವಾಗಿ ಹಲವು ಗೊಂದಲಗಳಿವೆ. ಮತದಾರರಲ್ಲಿ ಹಲವು ಅನುಮಾನಗಳೂ ಇವೆ. ಇವೆಲ್ಲವನ್ನೂ ಹೇಗೆ ನಿಭಾಯಿಸುತ್ತಾರೆ ಎಂಬ ನಿರೀಕ್ಷೆಯಿದೆ. ಕೆಲ ಸಚಿವರು ಐದು ವರ್ಷಗಳ ಕಾಲ ಸಿದ್ಧರಾಮಯ್ಯ(Siddaramaiah)ನವರೇ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಇಂತಹ ಗೊಂದಲಗಳನ್ನು ಇಟ್ಟುಕೊಂಡೇ ಸರ್ಕಾರ ರಚನೆ ಆಗಿದೆ. ಸಿಎಂ ಮತ್ತು ಡಿಸಿಎಂ ಮಧ್ಯೆ ಹಲವು ವ್ಯತ್ಯಾಸಗಳು ಕಾಣುತ್ತಿವೆ. ಹೀಗಾಗಿ, ಮುಂದಿನ 5 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯನವರೇ ಇರುತ್ತಾರೆ ಎಂಬ ಗ್ಯಾರಂಟಿಯನ್ನೂ ಕಾಂಗ್ರೆಸ್‌ ಕೊಡಬೇಕಿದೆ ಎಂದರು.

ದ್ವೇಷದಿಂದ ಕಾಂಗ್ರೆಸ್‌ ಸರ್ಕಾರದ ಆಡಳಿತ ಆರಂಭ: ವಿಜಯೇಂದ್ರ

ಸಿದ್ದು ಸಂಪುಟದ ಸಚಿವರೊಬ್ಬರು ಆರ್‌ಎಸ್‌ಎಸ್‌ ಮತ್ತು ಬಜರಂಗದಳ ಬ್ಯಾನ್‌(RSS and Bajrangadala bann ) ಮಾಡುತ್ತೇವೆ ಎನ್ನುತ್ತಿದ್ದಾರೆ. ಕಾನೂನು ಉಲ್ಲಂಘನೆ ಮಾಡಿ ನೋಡಿ ಏನಾಗುತ್ತೆ ಅಂತ ಸವಾಲು ಹಾಕುವ ಸಚಿವರೂ ಇದ್ದಾರೆ. ಇಂತವರ ಬಗ್ಗೆ ಸಿಎಂ ಅವರು ನಿಗಾ ವಹಿಸಬೇಕು. ಮಂತ್ರಿಗಳ ಮಾತುಗಳಿಗೆ ಕಡಿವಾಣ ಹಾಕಬೇಕು ಎಂದು ಎಚ್ಚರಿಸಿದರು.

ಪ್ರತಿಪಕ್ಷ ನಾಯಕನ ಆಯ್ಕೆ ಕುರಿತು ಪ್ರತಿಕ್ರಿಯಿಸಿ, ಪಕ್ಷದ ವರಿಷ್ಠರು ನೂತನ ಸಂಸತ್‌ ಭವನದ ಉದ್ಘಾಟನಾ ಸಮಾರಂಭದ ವಿಚಾರದಲ್ಲಿ ಮಗ್ನರಾಗಿದ್ದರಿಂದ ವಿರೋಧ ಪಕ್ಷದ ನಾಯಕನ ಆಯ್ಕೆ ವಿಳಂಬವಾಗಿದೆ. ಒಂದೆರಡು ದಿನಗಳಲ್ಲಿಯೇ ಆ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದರು.

ಬಿಜೆಪಿ ಸೋಲಿನ ಹೊಣೆ ಎಲ್ಲರೂ ಹೊರಬೇಕು: ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದೇನು?

‘ಎತ್ತರಕ್ಕೆ ಬೆಳೆಯಿರಿ’ ವಿಜಯೇಂದ್ರಗೆ ತರಬಾಳು ಶ್ರೀ ಆಶೀರ್ವಾದ:

‘ರಾಜ್ಯದ ಎಲ್ಲಾ ರಾಜಕೀಯ ಮುಖಂಡರ ಮಾರ್ಗದರ್ಶನ ಪಡೆದು ಎತ್ತರಕ್ಕೆ ಬೆಳೆಯಿರಿ. ನಾಯಕತ್ವ ಗುಣ ಬೆಳೆಸಿಕೊಳ್ಳಿ. ನಿಮ್ಮ ತಂದೆ ಮಠದ ಬಗ್ಗೆ ಸದ್ಭಾವನೆ ಉಳಿಸಿಕೊಂಡಿದ್ದರು. ಆ ಸಂಪ್ರದಾಯದಂತೆ ನೀವೂ ಮುಂದುವರೆಯಿರಿ’ ಎಂದು ತರಳಬಾಳು ಡಾ.ಶಿವಮೂರ್ತಿ ಮಹಾಸ್ವಾಮಿಗಳವರು ವಿಜಯೇಂದ್ರ ಅವರಿಗೆ ಆಶೀರ್ವದಿಸಿದರು.

Follow Us:
Download App:
  • android
  • ios