ವಾಲ್ಮೀಕಿ ನಿಗಮದ ತನಿಖೆ ಮುಗಿಯೋವರೆಗೂ ಸಿಎಂ ಸಿದ್ದರಾಮಯ್ಯ ಕೆಳಗಿಳಿಯಲಿ: ವಿಪಕ್ಷ ಆಗ್ರಹ
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಕ್ರಮದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಬಿಗಿಪಟ್ಟು ಹಿಡಿದಿರುವ ವಿರೋಧ ಪಕ್ಷಗಳು, ವಿಧಾನಪರಿಷತ್ತಿನಲ್ಲಿ ಅಕ್ರಮದ ತನಿಖೆ ಮುಗಿಯುವವರೆಗೆ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಆಗ್ರಹಿಸಿದವು.
ವಿಧಾನಪರಿಷತ್ (ಜು.19): ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಕ್ರಮದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಬಿಗಿಪಟ್ಟು ಹಿಡಿದಿರುವ ವಿರೋಧ ಪಕ್ಷಗಳು, ವಿಧಾನಪರಿಷತ್ತಿನಲ್ಲಿ ಅಕ್ರಮದ ತನಿಖೆ ಮುಗಿಯುವವರೆಗೆ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಆಗ್ರಹಿಸಿದವು. ಅಧಿವೇಶನದ ಕೆಳಗಿಳಿಯುವಂತೆ ಆರಂಭದಿಂದಲೂ ಮಹರ್ಷಿ ವಾಲ್ಮೀಕಿ ನಿಗಮದ 187 ಕೋಟಿ ರು. ಅಕ್ರಮದ ಕುರಿತಂತೆ ವಿರೋಧ ಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ.
ಪ್ರಶೋತ್ತರ ಕಲಾಪದ ನಂತರ ನಿಯಮ 68ರ ಅಡಿಯಲ್ಲಿ ಮುಂದುವರಿದ ಚರ್ಚೆಯಲ್ಲಿ ಜೆಡಿಎಸ್‌ನ ಭೋಜೇಗೌಡ, ಗೋವಿಂದ ರಾಜು, ಬಿಜೆಪಿಯ ಡಿ.ಎಸ್. ಅರುಣ್, ಎಸ್.ವಿ.ಐಟಿ ರದ್ದು ಮಾಡಿ ತನಿಖೆಯ ಹೊಣೆಯನ್ನು ಸಿಬಿಐಗೆ ನೀಡಬೇಕು ಎಂದು ಒತ್ತಾಯಿಸಿದರು. ಜತೆಗೆ ಅಕ್ರಮ ತಡೆಯಲು ಸಿದ್ದರಾಮಯ್ಯ ವಿಫಲವಾಗಿದ್ದು, ಅದರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.
ನೀಟ್ ವಿರೋಧಿಸಿ ಸದನದಲ್ಲಿ ನಿರ್ಣಯ: ಸರ್ಕಾರದಲ್ಲಿ ಚರ್ಚೆ
ಸಿದ್ದರಾಮಯ್ಯ ಜೇಬು ತುಂಬಿದ ಅಕ್ರಮ: ಬಿಜೆಪಿಯ ನವೀನ್ ಮಾತನಾಡಿ, ಸರ್ಕಾರದ ಕಣ್ಣಾವಲಿ ನಲ್ಲಿರಬೇಕಾದ ನಿಗಮಗಳ ಹಣ ಮದ್ಯದಂಗಡಿ, ಆಭರಣದಂಗಡಿಗಳಿಗೆ ಸೇರಿದೆ. ಚುನಾವಣಾ ವೆಚ್ಚಕ್ಕೆ ಬಳಕೆಯಾಗಿದೆ. ಜನರು ಕಷ್ಟಪಟ್ಟು ಭೋಜೇಗೌಡ ಸಂಕನೂರು, ಭಾರತಿ ಶೆಟ್ಟಿ ಸೇರಿದಂತೆ ಇತರರು ಮಾತನಾಡಿ, ಪ್ರಕರಣದ ಗಂಭೀರತೆಯನ್ನು ಅರಿತು ಸರ್ಕಾರದ ಖಜಾನೆ ತುಂಬಿದ ಹಣ ಸಿದ್ದರಾಮಯ್ಯ ಅವರ ಜೇಬು ಸೇರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅದಕ್ಕೆ ವಿರೋಧ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು, ಬಿಜೆಪಿ ಸರ್ಕಾರದ ಅವಧಿಯಲ್ಲಾದ ಭೋವಿ ಅಭಿವೃದ್ಧಿ ನಿಗಮ, ದೇವರಾಜ ಅರಸು ಟ್ರಕ್ ಟರ್ಮಿನಲ್ ಸೇರಿದಂತೆ ಇನ್ನಿತರ ನಿಗಮಗಳಲ್ಲಾಗಿರುವ ಅಕ್ರಮಗಳು ಬಿಜೆಪಿಯ ಯಾವ ನಾಯಕರ ಜೇಬು ತುಂಬಿಸಿದ್ದವು ಎಂದು ತಿರುಗೇಟು ನೀಡಿದರು. ಜತೆಗೆ ಸಿದ್ದರಾಮಯ್ಯ ಅವರ ಹೆಸರನ್ನು ಕಡತದಿಂದ ತೆಗೆಯುವಂತೆ ಆಗ್ರಹಿಸಿದರು. ಅದಕ್ಕೆ ಸ್ಪಂದಿಸಿದ ಸಭಾಪತಿ ಬಸವರಾಜ ಹೊರಟ್ಟಿ ಸಿಎಂ ಪದವನ್ನು ಉಳಿಸಿಕೊಂಡು ಸಿದ್ದರಾಮಯ್ಯ ಹೆಸರನ್ನು ಕಡತದಿಂದ ತೆಗೆಯುವಂತೆ ಸೂಚಿಸಿದರು.
ದ.ಕನ್ನಡದ ಶಾಲಾ ಮೈದಾನದಲ್ಲಿ ಧಾರ್ಮಿಕ ಆಚರಣೆಗೆ ನಿಷೇಧ: ಶಾಸಕ ಹರೀಶ್ ಪೂಂಜಾ ಆಕ್ಷೇಪ
ನಂತರ ಮಾತನಾಡಿದ ಬಿಜೆಪಿಯ ಎಸ್.ವಿ.ಸಂಕನೂರು, ಸಚಿವರು, ನಿಗಮಗಳ ಅಧ್ಯಕ್ಷರು, ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಭಯವಿಲ್ಲದಂತಾಗಿದೆ. ಹೀಗಾಗಿಯೇ ಈ ರೀತಿಯ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಬಿಜೆಪಿ ಸದಸ್ಯರ ಆರೋಪಗಳಿಗೆ ಕಾಂಗ್ರೆಸ್‌ನ ಐವಾನ್ ಡಿಸೋಜಾ, ಯು.ಬಿ.ವೆಂಕಟೇಶ್ ತಮ್ಮ ಭಾಷಣದಲ್ಲಿ ತಿರುಗೇಟು ನೀಡಿ, ವಾಲ್ಮೀಕಿ ಹಗರಣದಲ್ಲಿ ಯಾರೇ ತಪ್ಪು ಮಾಡಿದರೂ ಶಿಕ್ಷಿಸಲು ಸರ್ಕಾರ ಸಿದ್ದವಿದೆ. ಕಾಣೆಯಾಗಿದ್ದ ನಿಗಮದ 89 ಕೋಟಿ ರು.ಗಳಲ್ಲಿ ಈಗಾಗಲೇ 85.25 ಕೋಟಿ ರು.ಗಳನ್ನು ಎಸ್‌ಐಟಿ ಹಿಂಪಡೆದಿದೆ. ವಾಲ್ಮೀಕಿ ಅಕ್ರಮದ ಬಗ್ಗೆ ಮಾತನಾಡುವ ಬಿಜೆಪಿ ಸದಸ್ಯರು ತಮ್ಮ ಅವಧಿಯಲ್ಲಾಗಿರುವ ಹಗರಣಗಳ ಬಗ್ಗೆಯೂ ಗಂಭೀರ ವಾಗಿ ಮಾತನಾಡಿ ತನಿಖೆಗೆ ಆಗ್ರಹಿಸಬೇಕು ಎಂದರು.