Asianet Suvarna News Asianet Suvarna News

ನೀಟ್ ವಿರೋಧಿಸಿ ಸದನದಲ್ಲಿ ನಿರ್ಣಯ: ಸರ್ಕಾರದಲ್ಲಿ ಚರ್ಚೆ

ದೇಶದ ವಿವಿಧ ರಾಜ್ಯಗಳಿಂದ ನೀಟ್‌ಗೆ ವಿರೋಧ ವ್ಯಕ್ತವಾಗಿರುವ ನಡುವೆಯೇ ಕರ್ನಾಟಕ ವಿಧಾನಸಭೆಯಲ್ಲೂ ನೀಟ್ ವಿರೋಧಿಸಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಬಗ್ಗೆ ಸರ್ಕಾರದಲ್ಲಿ ಗಂಭೀರ ಚರ್ಚೆ ನಡೆದಿದೆ.

Resolution in Assembly session against NEET Debate in Governmnet gvd
Author
First Published Jul 19, 2024, 2:29 PM IST | Last Updated Jul 19, 2024, 2:36 PM IST

ಬೆಂಗಳೂರು (ಜು.19): ದೇಶದ ವಿವಿಧ ರಾಜ್ಯಗಳಿಂದ ನೀಟ್‌ಗೆ ವಿರೋಧ ವ್ಯಕ್ತವಾಗಿರುವ ನಡುವೆಯೇ ಕರ್ನಾಟಕ ವಿಧಾನಸಭೆಯಲ್ಲೂ ನೀಟ್ ವಿರೋಧಿಸಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಬಗ್ಗೆ ಸರ್ಕಾರದಲ್ಲಿ ಗಂಭೀರ ಚರ್ಚೆ ನಡೆದಿದೆ. ತಮಿಳುನಾಡು ಸರ್ಕಾರ ನೀಟ್ ವಿರುದ್ಧ ತನ್ನ ಶಾಸನಸಭೆಗಳಲ್ಲಿ ನಿರ್ಣಯಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ವಿಧಾನಸಭೆ ಯಲ್ಲಿ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಜಾರಿಯಲ್ಲಿರುವ ನೀಟ್ ರದ್ದುಪಡಿಸಿ, ಈ ಹಿಂದೆ ಇದ್ದಂತೆ ಆಯಾ ರಾಜ್ಯಗಳಿಗೇ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಸೀಟು ಹಂಚಿಕೆ ಮಾಡಲು ಅವಕಾಶ ನೀಡುವಂತೆ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಚರ್ಚಿಸಲಾಗಿದೆ ಎಂದು ಹಿರಿಯ ಸಚಿವರೊಬ್ಬರು ಮಾಹಿತಿ ನೀಡಿದ್ದಾರೆ. 

ನೀಟ್‌ನಲ್ಲಿ ಪರೀಕ್ಷಾ ಅಕ್ರಮ, ಫಲಿತಾಂಶ ಪ್ರಕಟಣೆಯಲ್ಲಿ ಭಾರೀ ಲೋಪಗಳಾಗಿರು ವುದು ವಿದ್ಯಾರ್ಥಿಗಳು ಮತ್ತು ಪೋಷಕರ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣ ವಾಗಿದೆ. ಅಲ್ಲದೇ ದೇಶದ ಸರ್ವೋಚ್ಚ ನ್ಯಾಯಾಲಯ ಕೂಡ ನೀಟ್ ಪಾವಿತ್ರ್ಯತೆ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಅಲ್ಲದೆ, ಸ್ಥಳೀಯ ವಿದ್ಯಾರ್ಥಿಗಳಿಗೆ ಅನ್ಯಾಯ, ರಾಜ್ಯದ ಕಾಲೇಜಿನ ಸೀಟುಗಳು ಅನ್ಯ ರಾಜ್ಯ ದವರ ಪಾಲಾಗುತ್ತಿರುವುದು, ಪರೀಕ್ಷಾ ಒತ್ತಡ ಸೇರಿದಂತೆ ಅನೇಕ ಆರೋಪಗಳು ಕೇಳಿಬರುತ್ತಿವೆ. ಹಾಗಾಗಿ ಕರ್ನಾಟಕವು ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ನಡೆಸುವ ಸಿಇಟಿ ಮಾದರಿಯಾಗಿದೆ. ಹೀಗೆ ಮಾಡುವು ದರಿಂದ ಕರ್ನಾಟಕದವರಿಗೆ ಹೆಚ್ಚಿನ ಪಾಲು ಸಿಗಲಿದ್ದು, ಸ್ಥಳೀಯರಿಗೆ ಅನುಕೂಲವಾಗಲಿದೆ ಎಂಬುದು ಸಚಿವರ ವಾದವಾಗಿದೆ.

ವಿದ್ಯಾರ್ಥಿಗಳ ಸುರಕ್ಷತೆಗಾಗಿ ಉಪಲಾಷಿತ ಯೋಜನೆ: ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಪ್ರಗತಿ ಹೊಂದಲು ನೆರವಾಗುವ ಉದ್ದೇಶದಿಂದ ವಿಟಿಲಿಟಿ ಡಿಜಿಟಲ್ ಟೆಕ್ ಸಂಸ್ಥೆಯು ನೂತನವಾಗಿ ಉಪಲಾಷಿತ ಎಂಬ ಯೋಜನೆ ಪ್ರಚುರ ಪಡಿಸುತ್ತಿದೆ ಎಂದು ಸಂಸ್ಥೆಯ ಸಿಇಒ ಸಂತೋಷ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಟಿಲಿಟಿ ಡಿಜಿಟಲ್ ಎಂಬ ಸಂಸ್ಥೆಯೂ ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿದ್ದು, ಶಿವಮೊಗ್ಗದ ಓಟಿ ರಸ್ತೆಯಲ್ಲಿ ಶಾಖಾ ಕಚೇರಿಯನ್ನು ತೆರೆದಿದೆ. 

ದ.ಕನ್ನಡದ ಶಾಲಾ ಮೈದಾನದಲ್ಲಿ ಧಾರ್ಮಿಕ ಆಚರಣೆಗೆ ನಿಷೇಧ: ಶಾಸಕ ಹರೀಶ್ ಪೂಂಜಾ ಆಕ್ಷೇಪ

ಈ ಸಂಸ್ಥೆಯೂ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಪ್ರಗತಿ ಹೊಂದಲು ನೆರವಾಗುವಂತಹ ಉಪಲಾಷಿತ ಎಂಬ ಯೋಜನೆಯನ್ನು ಪ್ರಸ್ತುತ ಪಡಿಸುತ್ತಿದೆ. ಈ ಯೋಜನೆ ಅನ್ವಯ ವಿದ್ಯಾರ್ಥಿಗಳಿಗೆ ಡಿಜಿಟಲ್ ತಂತ್ರಾಂಶವಿರುವ ಗುರುತಿನ ಕಾರ್ಡ್‍ನ್ನು ನೀಡಲಾಗುತ್ತದೆ. ಈ ಕಾರ್ಡ್‍ನಲ್ಲಿ ಕ್ಯೂಆರ್‌ ಕೋಡ್ ಅಳವಡಿಸಲಾಗಿದ್ದು, ಇದರ ಮೂಲಕ ಸೇವಾ ಸೌಲಭ್ಯ ನೀಡಲಾಗುತ್ತದೆ ಎಂದರು. ಬೇಸಿಗೆ ರಜೆಯಲ್ಲಿ ಶಿಬಿರ ಆಯೋಜನೆ, ಗುರುತಿನ ಕಾರ್ಡ್ ಬಳಸಿ ರಿಯಾಯಿತು ದರದಲ್ಲಿ ಅಧ್ಯಯನ ಸಾಮಾಗ್ರಿಗಳನ್ನು ಕೊಂಡುಕೊಳ್ಳಲು ಸಹ ಅನುಕೂಲವಾಗುತ್ತದೆ. ನವೋದಯ, ಸಿಇಟಿ, ನೀಟ್, ಮುಂತಾದ ಪರೀಕ್ಷೆಗಳಿಗೆ ಆನ್‍ಲೈನ್ ಮೂಲಕವೇ ತರಬೇತಿ ಕೊಡಬಹುದಾಗಿದೆ ಎಂದರು.

Latest Videos
Follow Us:
Download App:
  • android
  • ios