ಕೇಂದ್ರದ ಕೌಶಲ್ಯಾಭಿವೃದ್ಧಿ ಸಚಿವರಾಗಿದ್ದ ಅನಂತ್ ಕುಮಾರ್ ಹೆಗಡೆ ಅವರು ಸ್ಕಿಲ್ ಡೆವಲಪ್‌ಮೆಂಟ್ ಮತ್ತು ಆಂಥ್ರಪೈನರ್ ಶಿಪ್ ಪದಗಳ ಸ್ಪೆಲ್ಲಿಂಗ್ ಹೇಳಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.
ಬೆಂಗಳೂರು (ಜ.17): ರಾಜ್ಯದಿಂದ ಸಂಸದರಾಗಿ ಆಯ್ಕೆಯಾಗಿ ಕೆಲವು ದಿನಗಳ ಕಾಲ ಕೌಶಲ್ಯಾಭಿವೃದ್ಧಿ ಸಚಿವರಾಗಿದ್ದ ಅನಂತ ಕುಮಾರ್ ಹೆಗಡೆ ಅವರು ಎಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ. ಅದೆಲ್ಲ ಬೇಡ ಅವರು ಸ್ಕಿಲ್ ಡೆವಲಪ್ ಮೆಂಟ್ ಹಾಗೂ ಆಂಥ್ರಪೈನರ್ ಶಿಪ್ ಇದರ ಸ್ಪೆಲಿಂಗ್ ಹೇಳಲಿ ನೋಡೋಣ ಎಂದು ಪೌರಾಡಳಿತ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.
ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನಂತ್ ಕುಮಾರ್ ಹೆಗಡೆ ಇಷ್ಟು ದಿನ ಎಲ್ಲಿದ್ದರು? ನಮ್ಮ ಮೂವರನ್ನ ಬೈಯ್ಯುವುದೇ ಅವರ ಕೆಲಸವಾಗಿದೆ. ರಾಜ್ಯದಿಂದ ಸಂಸದರಾಗಿ ಆಯ್ಕೆಯಾಗಿದ್ದ ಅವರು ಕೌಶಲ್ಯಾಭಿವೃದ್ಧಿ ಸಚಿವರಾಗಿದ್ದರು. ಎಷ್ಟು ಜನರಿಗೆ ಅವರು ಉದ್ಯೋಗ ಕೊಟ್ಟಿದ್ದಾರೆ? ದೇಶದಲ್ಲಿ ಬೇಡ! ರಾಜ್ಯವನ್ನೂ ಬಿಟ್ಟುಬಿಡಿ, ಅವರ ಜಿಲ್ಲೆಯಲ್ಲಿಯಾದರೂ ಎಷ್ಟು ಜನರಿಗೆ ಉದ್ಯೋಗ ನೀಡಿದ್ದಾರೆ ಪಟ್ಟಿ ಕೊಡಿ ನೋಡೋಣ? ಅವರು ಕನಿಷ್ಟ ಸ್ಕಿಲ್ ಡೆವಲಪ್ ಮೆಂಟ್ ಹಾಗೂ ಆಂಥ್ರಪೈನರ್ ಶಿಪ್ ಇದರ ಸ್ಪೆಲಿಂಗ್ ಹೇಳಲಿ ನೋಡೋಣ ಎಂದು ಕಿಡಿಕಾರಿದರು.
ನನ್ನ ಮೇಲೆ ಪ್ರಕರಣ ದಾಖಲಿಸಿದ್ದಕ್ಕೆ ಸಿಎಂ ಸಿದ್ದರಾಮಯ್ಯಗೆ ಕೃತಜ್ಞತೆ: ಸಂಸದ ಅನಂತಕುಮಾರ ಹೆಗೆಡೆ
ನಮ್ಮ ರಾಜ್ಯದಲ್ಲಿ ಗೋಪೂಜೆ ಮಾಡುವುದರ ಬಗ್ಗೆ ಮಾತನಾಡುವ ಬಿಜೆಪಿ ಸಂಸದರು ಎಷ್ಟು ಜನ ಗೋಶಾಲೆ ಮಾಡಿದ್ದಾರೆ. ಎಷ್ಟು ಎಂಪಿಗಳು ಗೋಮೂತ್ರ ಕುಡಿಯುತ್ತಾರೆ. ಎಷ್ಟು ಜನ ಅವರ ಮಕ್ಕಳು ಗೋಮೂತ್ರ ಕುಡಿಯುತ್ತಾರೆ. ಇದರ ಬಗ್ಗೆ ಅವರು ಹೇಳಿಬಿಡಲಿ. ನಾನು ಸವಾಲ್ ಹಾಕ್ತೇನೆ ಹೇಳಲಿ. ನಾನು ನನ್ನ ಮಗನಿಗೆ ಬಸವತತ್ವ ಹೇಳಿಕೊಡ್ತೇನೆ. ಸಂವಿಧಾನದ ಬಗ್ಗೆ ಹೇಳಿ ಕೊಡ್ತೇನೆ. ನಾವು ಅವರು ಬೇರೆ ಇವರು ಬೇರೆ ಅಂತ ಹೇಳಿಕೊಡಲ್ಲ. ಎಲ್ಲರು ಒಂದೇ ಎಂದು ಹೇಳಿಕೊಡ್ತೇನೆ ಎಂದು ಹೇಳಿದರು.
Bengaluru FIR: ಒಂಟಿ ಮಹಿಳೆಯ ಕತ್ತು ಹಿಸುಕಿ ಪರಾರಿ, 800 ಸಿಸಿ ಟಿವಿಗಳಲ್ಲಿ ಕಂಡಿದ್ದು ಕಾಲಷ್ಟೇ!
ಸಚಿವ ರಾಜಣ್ಣ ಅವರ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವ ಪ್ರಿಯಾಂಕಾ ಖರ್ಗೆ ಅವರು, ರಾಜಣ್ಣ ಹೇಳಿಕೆಯನ್ನ ನಾನು ನೋಡಿದ್ದೇನೆ. ಅದನ್ನ ತಪ್ಪಾಗಿ ಅರ್ಥೈಸಲಾಗಿದೆ. ಅಲ್ಲಿಗೆ ಹೋದಾಗ ಮೂರ್ತಿಯನ್ನು ಟೆಂಟಲ್ಲಿ ಇಟ್ಟಿದ್ದರು ಅಂತ ರಾಜಣ್ಣ ಹೇಳಿದ್ದಾರೆ. ನನಗೆ ಆ ರೀತಿ ಭಾಸವಾಯ್ತು ಅಂತ ಅವರು ಹೇಳಿದ್ದಾರೆ. ರಾಮಲಲ್ಲವನ್ನ ಅವರು ಅವಹೇಳನ ಮಾಡಿಲ್ಲ. ಅಲ್ಲಿ ಆ ಮೂರ್ತಿಯನ್ನ ಟೆಂಟಲ್ಲಿ ಇಟ್ಟಿದ್ದರು. ನಂತರ ಮನೆಯಲ್ಲಿ ಇಟ್ಟಿದ್ದರು. ಇನ್ನು ಸುಪ್ರೀಂ ಕೋರ್ಟ್ ಆದೇಶ ಪ್ರಕಾರ ದೇವಸ್ಥಾನ ಆಗ್ತಿದೆ. ನಾವು ಅದನ್ನು ಒಪ್ಪಿದ್ದೇವೆ ಎಂದು ಹೇಳಿದರು.