ನಮ್ಮ ಸಂಬಂಧ ಸರಿಯಿರಲಿಲ್ಲ: ಭೂಪತಿ ಬಗ್ಗೆ ಪೇಸ್‌ ಅಚ್ಚರಿಯ ಹೇಳಿಕೆ

* ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್‌ ಅವರಿಂದ ಬಿಚ್ಚುಮಾತು

* ನನ್ನ ಹಾಗೂ ಭೂಪತಿ ಸಂಬಂಧ ಅಷ್ಟೊಂದು ಚೆನ್ನಾಗಿರಲಿಲ್ಲವೆಂದು ಒಪ್ಪಿಕೊಂಡ ಪೇಸ್

* ಆದರೆ ದೇಶಕ್ಕಾಗಿ ಕಣಕ್ಕಿಳಿಯುವಾಗ ಹೇಳಲಾಗದಷ್ಟು ಸಹೋದರತ್ವ ಇತ್ತು ಎಂದ ಪೇಸ್‌

Tennis Legend Leander Pace Reveals Relationship with Mahesh Bhupathi kvn

ಮುಂಬೈ(ಸೆ.18): ನಾವು ಹಲವು ಬಾರಿ ಒಟ್ಟಿಗೆ ಪ್ರಶಸ್ತಿ ಗೆದ್ದಿದ್ದೇವೆ. ಆದರೆ ನಮ್ಮ ನಡುವಿನ ಸಂಬಂಧ ಕೆಟ್ಟದಾಗಿತ್ತು ಎಂದು ಭಾರತದ ಯಶಸ್ವಿ ಟೆನಿಸ್‌ ಆಟಗಾರ ಲಿಯಾಂಡರ್‌ ಪೇಸ್‌ ತಮ್ಮ ಬಹುಕಾಲದ ಟೆನಿಸ್‌ ಅಂಗಳದ ಜೋಡಿ ಮಹೇಶ್‌ ಭೂಪತಿ ಜೊತೆಗಿನ ಸಂಬಂಧದ ಬಗ್ಗೆ ಹೇಳಿದ್ದಾರೆ. 

ಇಬ್ಬರ ಸ್ನೇಹ, ಕಿತ್ತಾಟದ ಕತೆಗಳನ್ನು ತಿಳಿಸುವ ‘ಬ್ರೇಕ್‌ ಪಾಯಿಂಟ್‌’ ಎನ್ನುವ ಸರಣಿಯೊಂದು ಓಟಿಟಿಯಲ್ಲಿ ಸದ್ಯದಲ್ಲೇ ಪ್ರಸಾರವಾಗಲಿದೆ. ‘1999ರಲ್ಲಿ ವಿಂಬಲ್ಡನ್‌ ಹಾಗೂ ಫ್ರೆಂಚ್‌ ಓಪನ್‌ ಗೆದ್ದ ಬಳಿಕ ನಮ್ಮ ನಡುವೆ ಹೊಂದಾಣಿಕೆ ಇದ್ದಿದ್ದರೆ ನಾವು ಇನ್ನಷ್ಟು ಕಾಲ ಒಟ್ಟಿಗೆ ಆಡಬಹುದಿತ್ತು. ಮಹೇಶ್‌ ಹಾಗೂ ನನ್ನ ವೃತ್ತಿ ಜೀವನದಲ್ಲಿ ನಾವು ಮಾತನಾಡದ ಬಹಳಷ್ಟು ವಿಷಯಗಳಿವೆ. ನಮ್ಮ ಭಾವನೆಗಳು, ವ್ಯವಹಾರಗಳಲ್ಲಿ ವ್ಯತ್ಯಾಸವಿದೆ. ಆದರೆ ದೇಶಕ್ಕಾಗಿ ಆಡುವಾಗ ನಮ್ಮ ನಡುವೆ ಹೇಳಲಾಗದಷ್ಟು ಸಹೋದರತ್ವ ಇತ್ತು’ ಎಂದು ಪೇಸ್‌ ಹೇಳಿದ್ದಾರೆ.

ಇಂದಿನಿಂದ ಡೇವಿಸ್‌ ಕಪ್‌: ಭಾರತಕ್ಕೆ ಫಿನ್ಲೆಂಡ್‌ ಸವಾಲು

ದೇಶಕ್ಕೆ ಡಬಲ್ಸ್‌ನಲ್ಲಿ ಮೊದಲ ವಿಂಬಲ್ಡನ್‌ ಗೆದ್ದುಕೊಟ್ಟ ಪೇಸ್‌-ಭೂಪತಿ 1994ರಿಂದ 2006ರವರೆಗೂ ಒಟ್ಟಾಗಿ ಆಡಿದ್ದರು. 12 ವರ್ಷಗಳಲ್ಲಿ ಅವರು ಮೂರು ಗ್ರಾನ್‌ಸ್ಲಾಂ ಗೆದ್ದಿದ್ದಾರೆ.

ಡೇವಿಸ್ ಕಪ್‌: ಫಿನ್ಲೆಂಡ್‌ ವಿರುದ್ದ ಭಾರತಕ್ಕೆ ಹಿನ್ನಡೆ

ಎಸ್ಪೊ: ಫಿನ್ಲೆಂಡ್ ವಿರುದ್ದದ ಡೇವಿಸ್ ಕಪ್‌ ಟೆನಿಸ್ ವಿಶ್ವ ಗುಂಪು - 1ರ ಮುಖಾಮುಖಿಯಲ್ಲಿ ಭಾರತ ಟೆನಿಸ್‌ ತಂಡ ಆರಂಭಿಕ ಹಿನ್ನಡೆ ಅನುಭವಿಸಿದೆ. ಶುಕ್ರವಾರ ನಡೆದ ಎರಡೂ ಸಿಂಗಲ್ಸ್‌ ಪಂದ್ಯಗಳಲ್ಲಿ ಭಾರತ ಸೋತು 0-2ರಲ್ಲಿ ಹಿನ್ನಡೆ ಅನುಭವಿಸಿದೆ. 

ಮೊದಲ ಪಂದ್ಯದಲ್ಲಿ ಪ್ರಜ್ಞೇಶ್ ಗುಣೇಶ್ವರನ್‌, ಒಟ್ಟೊ ವಿರ್ಟ್ನಾನೆನ್ ವಿರುದ್ದ 3-6, 6-7 ನೇರ ಸೆಟ್‌ಗಳಿಂದ ಸೋತರೆ, 2ನೇ ಪಂದ್ಯದಲ್ಲಿ ರಾಮ್‌ಕುಮಾರ್ ರಾಮನಾಥನ್ , ಎಮಿಲ್‌ ರುಸ್ಸೋವರಿ ವಿರುದ್ದ 4-6, 5-7 ಸೆಟ್‌ಗಳಲ್ಲಿ ಪರಾಭವಗೊಂಡರು.

Latest Videos
Follow Us:
Download App:
  • android
  • ios