ಬಳ್ಳಾರಿಯಲ್ಲಿ ಭರ್ಜರಿ ಗಿಫ್ಟ್ ಪಾಲಿಟಿಕ್ಸ್ ಮಾಡ್ತಿರೋ ನಾಯಕರು!
ಬಳ್ಳಾರಿಯಲ್ಲಿ ಜನರ ಮನವೊಲಿಸಲು ನಾಯಕರು ಭರ್ಜರಿ ಗಿಮಿಕ್ಸ್ ಮಾಡುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ನಗರ ಟಿಕೆಟ್ ಆಕಾಂಕ್ಷಿ ಭರತ್ ರೆಡ್ಡಿ ನಗರದಲ್ಲಿ ಕುಕ್ಕರ್ ಹಂಚಿದ್ದಾಯ್ತು. ಇದೀಗ ಹಾಲಿ ಶಾಸಕ ಸೋಮ ಶೇಖರ್ ರೆಡ್ಡಿ ಅವರಿಂದ ಸ್ಲಂನಲ್ಲಿರೋ ಮನೆಗಳ ಹಕ್ಕು ಪತ್ರ ವಿತರಣೆ ಮಾಡುತ್ತಿದ್ದಾರೆ.
ವರದಿ ; ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್
ಬಳ್ಳಾರಿ(ಜ.16): ಸಾರ್ವತ್ರಿಕ ಚುನಾವಣೆಯ ಕಾವು ದಿನೇ ದಿನೇ ರಂಗೇರುತ್ತಿರೋ ಬೆನ್ನೆಲ್ಲೇ, ಬಳ್ಳಾರಿಯಲ್ಲಿ ಜನರ ಮನವೊಲಿಸಲು ಬಳ್ಳಾರಿ ನಾಯಕರು ಭರ್ಜರಿ ಗಿಮಿಕ್ಸ್ ಮಾಡುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ನಗರ ಟಿಕೆಟ್ ಆಕಾಂಕ್ಷಿ ಭರತ್ ರೆಡ್ಡಿ ನಗರದಲ್ಲಿ ಕುಕ್ಕರ್ ಹಂಚಿದ್ದಾಯ್ತು. ಇದೀಗ ಹಾಲಿ ಶಾಸಕ ಸೋಮ ಶೇಖರ್ ರೆಡ್ಡಿ ಅವರಿಂದ ಸ್ಲಂನಲ್ಲಿರೋ ಮನೆಗಳ ಹಕ್ಕು ಪತ್ರ (ಪಟ್ಟಾ ) ವಿತರಣೆ ಮಾಡುತ್ತಿದ್ದಾರೆ. ದಶಕಗಳಿಂದ ನೆನೆಗುದಿಗೆ ಬಿದ್ದಿರೋ ಕೆಲಸವನ್ನು ಪೂರ್ಣಗೊಳಿಸೋ ಮೂಲಕ ಬಿಜೆಪಿ ಪಕ್ಷವು ಜನಪರವಾಗಿದೆ ಅನ್ನೋದನ್ನು ಸಾಭೀತುಪಡಿಸುತ್ತಿದೆ. ಈ ಮೂಲಕ ಚುನಾವಣೆ ಮೂರು ತಿಂಗಳ ಮುಂಚೆಯೇ ಬಳ್ಳಾರಿಯಲ್ಲಿ ಗಿಫ್ಟ್ ಪಾಲಿಟಿಕ್ಸ್ ಗೆ ಚಾಲನೆ ನೀಡಲಾಗಿದೆ.
ಹಕ್ಕುಪತ್ರ ನೀಡಲು ಬೆಳ್ಳಂಬೆಳಿಗ್ಗೆ ಸ್ಲಂಗಳಿಗೆ ಬಂದ ಸೋಮಶೇಖರ ರೆಡ್ಡಿ
ದಶಕಗಳಿಂದಲೂ ಬಳ್ಳಾರಿಯಲ್ಲಿ ವಾಸ ಮಾಡುತ್ತಿರೋ ಸರಿಸುಮಾರ 12 ಸಾವಿರಕ್ಕೂ ಹೆಚ್ಚು ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕೆನ್ನುವ ಬೇಡಿಕೆ ಇತ್ತು. ಚುನಾವಣೆ ಬಂದಾಗಲೇಲ್ಲ ಹಕ್ಕುಪತ್ರ ವಿಚಾರ ಪ್ರಚಾರದ ವಸ್ತುವಾಗಿ ಬಳಕೆಯಾಗುತ್ತಿತ್ತು. ಮತ್ತು ಅದನ್ನು ಈವರೆಗೂ ಯಾರೊಬ್ಬರು ಅನುಷ್ಠಾನಕ್ಕೆ ತಂದಿರಲಿಲ್ಲ. ಆದ್ರೇ, ಇದೆ ವಿಚಾರವನ್ನು ಮುಂದಿಟ್ಟುಕೊಂಡು ಕಳೆದ ಚುನಾವಣೆ ಎದುರಿಸಿದ್ದ ಶಾಸಕ ಸೋಮಶೇಖರ ರಡ್ಡಿ ಇದೀಗ ಹಕ್ಕುಪತ್ರ ನೀಡೋ ಮೂಲಕ ಚುನಾವಣೆ ಪ್ರಚಾರ ಅಧಿಕೃತವಾಗಿಯೇ ಇಳಿದಿದ್ದಾರೆ. ಹನ್ನೆರಡು ಸಾವಿರಕ್ಕೂ ಹೆಚ್ಚು ಮನೆ ಮನೆಗೂ ಸ್ವತಃ ತಾವೇ ಹೋಗಲಿರೋ ಸೋಮಶೇಖರ ರೆಡ್ಡಿ ಪಟ್ಟ ವಿತರಣೆ ಹೆಸರಲ್ಲಿ ಮೊದಲ ಹಂತದ ಪ್ರಚಾರ ಕಂಪ್ಲೀಟ್ ಮಾಡಲಿದ್ದಾರೆ.
ಇನ್ನೂ ಈ ಹಿಂದೆ ಪಟ್ಟಾ ವಿತರಣೆ ಹೆಸರಲ್ಲಿ 2018ರ ಚುನಾವಣೆ ಮಾಡಿದ್ದ ಕಾಂಗ್ರೆಸ್ ಶಾಸಕ ಅನಿಲ್ ಲಾಡ್ ಪರಿಚಯ ಪತ್ರ ನೀಡಿದ್ರು.. ಆ ಪರಿಚಯ ಪತ್ರ ಕೇವಲ ಅಡ್ರೆಸ್ ಪ್ರೋಫ್ ಗಾಗಿ ನೀಡಿದ್ದ ಪತ್ರವಾಗಿತ್ತೇ ವಿನಃ ಇದರಿಂದ ಜನರಿಗೆ ಯಾವುದೇ ರೀತಿಯಲ್ಲಿ ಸಹಾಯವಾಗಿರಲಿಲ್ಲ. ಹೀಗಾಗಿ ನಾವು ಬಳ್ಳಾರಿ ಜನರಿಗೆ ನ್ಯಾಯ ಮಾಡಿದ್ದೇವೆಂದು ಇದೇ ವೇಳೆ ಸೋಮಶೇಖರ್ ರೆಡ್ಡಿ ಹೇಳಿದ್ರು. ಹಕ್ಕುಪತ್ರ ನೀಡಿದ್ದಷ್ಟೇ ಅಲ್ಲ ಕೊಳಚೆ ಅಭಿವೃದ್ಧಿ ಮಂಡಳಿಯಿಂದ ಮನೆಗಳನ್ನು ಕಟ್ಟಿ ಕೊಡ್ತೇವೆ ಆದ್ರೇ ಇದು ಚುನಾವಣೆ ಗಿಮಿಕ್ಸ್ ಅಲ್ಲ ಎಂದ ರೆಡ್ಡಿ ಯವರು, ಬಳ್ಳಾರಿ ಚರಿತ್ರೆಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಪಟ್ಟಾ ನೀಡಿದ್ದು ಇದೇ ಮೊದಲು ಎಂದ್ರು.
ಸಂಪುಟ ಪುನರ್ ರಚನೆ ಕುರಿತು ಅಂತಿಮ ಪ್ರಯತ್ನಗಳು ನಡೆಯುತ್ತಿವೆ: ಸಿ.ಪಿ.ಯೋಗೇಶ್ವರ್
ಬಳ್ಳಾರಿಯಲ್ಲಿ ಪಟ್ಟಾ ವಿತರಣೆ ಯಾದ್ರೇ ಹೊಸಪೇಟೆಯಲ್ಲಿ ಕಾಂಗ್ರೆಸ್ ನಾಯಕರ ಗಲಾಟೆ
ಚುನಾವಣೆಗೆ ಇನ್ನೇನು ಕೆಲ ತಿಂಗಳು ಬಾಕಿ ಇರೋವಗಲೇ ಹೊಸಪೇಟೆ ಕೈ ನಾಯಕರ ಕಿತ್ತಾಟ ಬೀದಿಗೆ ಬಂದಿದೆ. ಚುನಾವಣೆ ಭಾಗವಾಗಿ ಮಂಗಳವಾರ ಪ್ರಜಾಧ್ವನಿಯಾತ್ರೆ ಹೆಸರಲ್ಲಿ ಹೊಸಪೇಟೆಯಲ್ಲಿ ಕಾಂಗ್ರೆಸ್ ನಾಯಕರು ಬೃಹತ್ ಶಕ್ತಿ ಪ್ರದರ್ಶನ ಮಾಡಲಿದ್ಧಾರೆ. ಈ ಕಾರ್ಯಕ್ರಮಕ್ಕೆ ಸ್ವಾಗತ ಕೋರಿ ಹಾಕ್ತಿರೋ ಬ್ಯಾನರ್ ವಿಚಾರವಾಗಿ ಹೊಸಪೇಟೆ ನಗರ ಕ್ಷೇತ್ರದ ಆಕಾಂಕ್ಷಿ ಗಳು ಜಗಳ ಮಾಡಿಕೊಂಡಿದ್ದಾರೆ. ರಾಜ್ಯ ಮಟ್ಟದ ನಾಯಕರ ಮುಂದೆ ಮಿಂಚಬೇಕೆನ್ನುವ ಹಂಬಲ ದೊಂದಿಗೆ ಹಾಕ್ತಿರೋ ಬ್ಯಾನರ್ ವಿಚಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ ಕೈ ಕೈ ಮಿಲಾಯಿಸೋ ಹಂತಕ್ಕೆ ಬಂದಿದೆ.
ಬಿಜೆಪಿ ಸರ್ಕಾರವಿದ್ದರೂ ಅಭಿವೃದ್ಧಿಗೆ ಶಾಸಕನಾಗಿ ದುಡಿದಿದ್ದೇನೆ: ಟಿ.ಡಿ.ರಾಜೇಗೌಡ
ಒಬ್ಬರು ಹಾಕಿಸಿರೋ ಬ್ಯಾನರ್ ಮತ್ತೊಬ್ರು ಕಿತ್ತುವ ಮೂಲಕ ತಮ್ಮ ಬ್ಯಾನರ್ ಹೈಲೈಟ್ ಆಗುವಂತೆ ಮಾಡ್ತಿದ್ದಾರೆ. ಕಾಂಗ್ರೆಸ್ ನಾಯಕರಾದ ರಾಜಶೇಖರ್ ಹಿಟ್ನಾಳ್, ಮಾಜಿ ಶಾಸಕರಾದ ಗವಿಯಪ್ಪ ಮತ್ತು ಸಿರಾಜ್ ಶೇಕ್, ಸೇರಿದಂತೆ ಅನೇಕ ನಾಯಕರು ಬ್ಯಾನರ್ ಹಾಕಿಸಿದ್ದಾರೆ. ಬ್ಯಾನರ್ ವಿಚಾರದಲ್ಲಿ ನಾಯಕರುಗಳ ಬೆಂಬಲಿಗರಿಂದ ತಡರಾತ್ರಿವರೆಗೂ ಬೀದಿ ರಂಪಾಟವಾಗಿದೆ. ಗಲಾಟೆ ಜೋರಾಗ್ತಿದ್ದಂತೆ ಎಂಟ್ರಿ ಯಾದ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ, ಯಾರ ಫೋಟೋಸ್ ಬೇಡ, ಕೇವಲ ರಾಷ್ಟ್ರೀಯ, ರಾಜ್ಯ ನಾಯಕರ ಫೋಟೋಸ್ ಹಾಕಿ ಅಂತ ತಾಕೀತು ಸಮಸ್ಯೆಗೆ ಇತಿಶ್ರೀ ಹಾಡಿದ್ದಾರೆ.