Asianet Suvarna News Asianet Suvarna News

MLC ಎಲೆಕ್ಷನ್: JDS ಪ್ಲಾನ್‌ಗೆ ಕೊಳ್ಳಿ ಇಟ್ಟ 'ಕೈ', ಸವದಿ ಹಾದಿ ಸುಗಮ

ಒಂದು ವಿಧಾನ ಪರಿಷತ್ ಉಪ ಚುನಾವಣೆಗೆ ಆಡಳತ ಪಕ್ಷ ಬಿಜೆಪಿಯನ್ನು ಸೋಲಿಸಲು ದಳಪತಿಗಳು ಹೆಣೆದಿದ್ದ ತಂತ್ರಕ್ಕೆ ಕಾಂಗ್ರೆಸ್ ಕೊಳ್ಳಿ ಇಟ್ಟಿದೆ. ಇದರಿಂದ ಬಿಜೆಪಿ ಅಭ್ಯರ್ಥಿ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾದಿ ಸುಗಮವಾಗಿದೆ.  

laxman savadi Likely win In MLC Election Over Independent Candidate out
Author
Bengaluru, First Published Feb 15, 2020, 4:56 PM IST

ಬೆಂಗಳೂರು, (ಫೆ.15): 1 ವಿಧಾನ ಪರಿಷತ್ ಉಪಚುನಾವಣೆ ಕಣದಿಂದ ಪಕ್ಷೇತರ ಅಭ್ಯರ್ಥಿ ಅನಿಲ್​ಕುಮಾರ್ ಹಿಂದೆ ಸರಿದಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಲಕ್ಷ್ಮಣ ಸವದಿ ನಿಟ್ಟುಸಿರು ಬಿಟ್ಟಿದ್ದಾರೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಪಾಠ ಕಲಿಸಬೇಕೆಂದು ಕಾಂಗ್ರೆಸ್- ಜೆಡಿಎಸ್ ದೋಸ್ತಿಯಾಗಿ ಪಕ್ಷೇತರ ಅಭ್ಯರ್ಥಿ ಅನಿಲ್ ಕುಮಾರ್ ಅವರನ್ನ ಕಣಕ್ಕೆ ಇಳಿಸಿದ್ರು. 

MLC ಎಲೆಕ್ಷನ್: ಅವಿರೋಧ ಆಯ್ಕೆ ಕನಸು ಕಾಣ್ತಿದ್ದ ಸವದಿಗೆ ಬಿಗ್ ಶಾಕ್

ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಕಾಂಗ್ರೆಸ್ ನಾಯಕರ ಜೊತೆ ಮಾತಾಡಿ ಮೈತ್ರಿ ಅಭ್ಯರ್ಥಿ ಫೈನಲ್ ಮಾಡಿದ್ರು. ಆದ್ರೆ ಕೊನೆ ಘಳಿಗೆಯಲ್ಲಿ ಬೆಂಬಲ ಕೊಡೋಕೆ ಕಾಂಗ್ರೆಸ್ ಹಿಂದೇಟು ಹಾಕಿದೆ. ಹೀಗಾಗಿ ಸೋಲುವ ಭೀತಿಯಿಂದ ತಪ್ಪಿಸಿಕೊಳ್ಳಲು ಪಕ್ಷೇತರ ಅಭ್ಯರ್ಥಿ ಅನಿಲ್ ಕುಮಾರ್ ಚುನಾವಣೆಯಿಂದ ಹಿಂದೆ ಸರಿಯಬೇಕಾಗಿ ಬಂತು.

ಆಪರೇಷನ್ ಅನುಮಾನ

laxman savadi Likely win In MLC Election Over Independent Candidate out
ಹೌದು...ಲಕ್ಷಣ ಸವದಿ ಅವರನ್ನ ಅವಿರೋಧವಾಗಿ ಆಯ್ಕೆ ಮಾಡಲು ಪಕ್ಷೇತರ ಅಭ್ಯರ್ಥಿ ಅನಿಲ್ ಕುಮಾರ್‌ ಅವರನ್ನು ಬಿಜೆಪಿ ಆಪರೇಷನ್ ಮಾಡಿದೆ ಎನ್ನಲಾಗುತ್ತಿದೆ.

ಈ ಆಪರೇಷನ್ ಹಿಂದೆ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಪ್ರಮುಖ ರೂವಾರಿ ಎನ್ನುವುದು ಮೂಲಗಳಿಂದ ತಿಳಿದುಬಂದಿದೆ. 
ರಾಮನಗರದ ಬಿಜೆಪಿ ಮುಖಂಡ ರುದ್ರೇಶ್ ಮೂಲಕ ಅನಿಲ್ ಕುಮಾರ್ ಜೊತೆ ಮಾತುಕತೆ ನಡೆಸಿ ಕಣದಿಂದ ಹಿಂದೆ ಸರಿಯುವಂತೆ ಮಾಡಿದ್ದಾರೆ.

ಎಚ್‌ಡಿ ರೇವಣ್ಣಗೆ ಮುಖಭಂಗ

laxman savadi Likely win In MLC Election Over Independent Candidate out
ವಿಧಾನಸಭೆಯಲ್ಲಿ ಸಂಖ್ಯಾಬಲ ಇಲ್ಲದಿದ್ದರೂ ಸಹ ಸಂಪುಟ ವಿಸ್ತರಣೆ ಸಂಬಂಧ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಎಲ್ಲವೂ ಸರಿ ಇಲ್ಲ ಎನ್ನುವುದು ಜೆಡಿಎಸ್‌ ಲೆಕ್ಕಾಚಾರ ಹಾಕಿ ಅನಿಲ್ ಅವರನ್ನ ಪಕ್ಷೇತರ ಅಭ್ಯರ್ಥಿಯನ್ನಾಗಿ ಎಲೆಕ್ಷನ್‌ಗೆ ನಿಲ್ಲಿಸಿದ್ದರು. 

ಸಚಿವ ಸ್ಥಾನ ಸಿಗದ ಮೂಲ ಬಿಜೆಪಿಗರು ಅಸಮಾಧಾನೊಂಡಿದ್ದಾರೆ. ಇದರ ಲಾಭ ಪಡೆಯಲು ಜೆಡಿಎಸ್‌ ತಂತ್ರ ಹೆಣೆದಿತ್ತು. ಆದ್ರೆ, ಇದಕ್ಕೆ ಕಾಂಗ್ರೆಸ್ ಸಾಥ್ ಸಿಗಲಿಲ್ಲ. ಇದರಿಂದ ದಳಪರಿಗಳ ಪ್ಲಾನ್‌ಗಳೆಲ್ಲವೂ ಉಲ್ಟಾಪಲ್ಟಾಗಳಾದವು. ಅಷ್ಟೇ ಅಲ್ಲದೇ ಖುದ್ದು ಅನಿಲ್ ಅವರ ಜತೆ ಹೋಗಿ ನಾಮಪತ್ರ ಸಲ್ಲಿಸಿ ಬಂದಿದ್ದ ರೇವಣ್ಣಗೆ ಮುಖಭಂಗವಾಗಿದೆ.

ನಿಟ್ಟುಸಿರು ಬಿಟ್ಟ ಲಕ್ಷ್ಮಣ ಸವದಿ

laxman savadi Likely win In MLC Election Over Independent Candidate out
ಚುನಾವಣೆಯಲ್ಲಿ ಸೋತರೂ ಮಂತ್ರಿಯಾಗಿರುವ ಲಕ್ಷ್ಮಣ ಸವದಿ ಅವರು ನಿಯಮಗಳ ಅನುಸಾರ ಮಂತ್ರಿಯಾದ 6 ತಿಂಗಳ ಒಳಗಾಗಿ ಚುನಾವಣೆ ಗೆಲ್ಲಲೇ ಬೇಕಾಗಿತ್ತು. ರಿಜ್ವಾನ್ ಅರ್ಷದ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಘೋಷಣೆಯಾದ ಚುನಾವಣೆಗೆ ನಾಮಪತ್ರ ಸಲ್ಲಿದ್ದರು.

ಜೆಡಿಎಸ್ ಬೆಂಬಲಿಗನಿಗೆ ಕಾಂಗ್ರೆಸ್ ಸಪೋರ್ಟ್ ?

ವಿಧಾನಪರಿಷತ್ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಆಗುವ ಕನಸು ಕಾಣುತ್ತಿದ್ದ ಲಕ್ಷ್ಮಣ ಸವದಿ ವಿರುದ್ಧವಾಗಿ ಅನಿಲ್ ಕುಮಾರ್ ಅವರು ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದರು. ಇದು ಲಕ್ಷ್ಮಣ ಸವದಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಅಷ್ಟೇ ಅಲ್ಲದೇ ಸಚಿವ ಸ್ಥಾನ ವಂಚಿತ ಮೂಲ ಬಿಜೆಪಿ ಶಾಸಕರು ಅಡ್ಡಮತದಾನ ಮಾಡುತ್ತಾರೆ ಎನ್ನುವ ಭಯ ಸವದಿಯಲ್ಲಿತ್ತು. ಆದ್ರೆ, ಇದೀಗ ಎಲ್ಲಾ ತೊಂದರೆಗಳ ನಿವಾರಣೆಯಾಗಿದ್ದು, ಸವದಿ ನಿಟ್ಟುಸಿರುಬಿಡುವಂತಾಗಿದೆ.

ಸವದಿ ಅವಿರೋಧ ಆಯ್ಕೆ ಖಚಿತ

laxman savadi Likely win In MLC Election Over Independent Candidate out
ಯಾರಿಂದಲೂ ಬೆಂಬಲ ಸಿಗದ ಕಾರಣ ಹಾಗೂ ತಮ್ಮ ಗುರುಗಳ ಮಾರ್ಗದರ್ಶನದಿಂದ ಕಣದಿಂದ ಹಿಂದೆ ಸರಿಯೋದಾಗಿ ಪಕ್ಷೇತರ ಅಭ್ಯರ್ಥಿ ಅನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 17 ರಂದು ನಡೆಯುವ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸವದಿ ಗೆಲುವು ನಿಶ್ಚಿತವಾಗಿದೆ. \ನಿಗದಿಯಂತೆ ಫೆಬ್ರವರಿ 17 ರಂದು ವಿಧಾನಪರಿಷತ್‌ಗೆ ಚುನಾವಣೆ ನಡೆಯಬೇಕಿತ್ತು. ಆದರೆ ಅನಿಲ್ ಕುಮಾರ್ ಅವರು ನಾಮಪತ್ರ ಹಿಂಪಡೆದರೆ ಮತದಾನ ನಡೆಯದೇ ಲಕ್ಷ್ಮಣ ಸವದಿ ಅವರನ್ನು ವಿಜೇತರೆಂದು ಘೋಷಿಸುವ ಸಾಧ್ಯತೆ ಇದೆ.

Follow Us:
Download App:
  • android
  • ios