ನವದೆಹಲಿ/ಬೆಂಗಳೂರು, (ಮಾ.03): ಕರ್ನಾಟಕದ ಏಕೈಕ ಕಾಂಗ್ರೆಸ್ ಸಂಸದ ಡಿ. ಕೆ. ಸುರೇಶ್‌ಗೆ ಬಿಜೆಪಿ ಸೇರಲು ಆಹ್ವಾನ ನೀಡಲಾಗಿದೆ. ರಾಮನಗರ ಸಂಸದ ಡಿಕೆ ಸುರೇಶ್ ಅವರಿಗೆ ಲಡಾಖ್​ನ ಬಿಜೆಪಿ ಸಂಸದ ಜಮ್ಯಾಂಗ್​ ತ್ಸೆರಿಂಗ್ ನಂಗ್ಯಾಲ್ ಆಹ್ವಾನ ಕೊಟ್ಟಿದ್ದಾರೆ.

ಬಿಜೆಪಿ ಸೇರ್ಕೊಳ್ಳಿ ಎಂದು ಮ್ಯಾಂಗ್​ ತ್ಸೆರಿಂಗ್ ನಂಗ್ಯಾಲ್ ಚುಟುಕಾಗಿ ಕನ್ನಡದಲ್ಲೇ ಡಿ.ಕೆ.ಸುರೇಶ್ ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದಾರೆ.  ಸಂಸತ್ ಅಧಿವೇಶನ ನಡೆಯುತ್ತಿರುವ ಕಾರಣ ಎಲ್ಲ ಸಂಸದರೂ ಸೇರಿದ್ದಾರೆ.

ಬೆಂಕಿ ಕೆಂಡವಾದ ಮಧು ಬಂಗಾರಪ್ಪ: HDK, HDD ವಿರುದ್ಧ ವಾಗ್ದಾಳಿ

ಈ ವೇಳೆ ಕರ್ನಾಟಕದ ಸಂಸದರಾದ ತೇಜಸ್ವಿ ಸೂರ್ಯ, ಪ್ರತಾಪ ಸಿಂಹ ಅವರಿಂದ ಜಮ್ಯಾಂಗ್​ ತ್ಸೆರಿಂಗ್ ನಂಗ್ಯಾಲ್ ಕನ್ನಡ ಮಾತನಾಡುವುದು ಪ್ರಯತ್ನಿಸಿದ್ದರು. ಆ ವೇಳೆ ಡಿ.ಕೆ.ಸುರೇಶ್ ಬಂದಿದ್ದಾರೆ. 

ಆಗ ಜಮ್ಯಾಂಗ್ ಟ್ಸೆರಿಂಗ್ ನಂಗ್ಯಾಲ್ ಕನ್ನಡದಲ್ಲಿ 'ಬಿಜೆಪಿ ಸೇರಿಕೊಳ್ಳಿ' ಎಂದು ಹೇಳಿದ್ದಾರೆ. ಅವರು ಈ ವಿಷಯವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಇದೊಂದು ಫನ್ನಿ ಟ್ವೀಟ್ ಅಂತ ಭಾವಿಸಲಾಗಿದೆ.

ಶಾಸಕರಿಗೆ ವಿಪ್‌ ಜಾರಿಗೊಳಿಸಿದ ಕಾಂಗ್ರೆಸ್‌, ತೀವ್ರ ಕುತೂಹಲ ಕೆರಳಿಸಿದ ಸಿದ್ದರಾಮಯ್ಯ ನಡೆ

ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಕರ್ನಾಟಕದ ಏಕೈಕ ಕಾಂಗ್ರೆಸ್ ಸಂಸದ. ಇವರು 2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.