ಬೆಂಕಿ ಕೆಂಡವಾದ ಮಧು ಬಂಗಾರಪ್ಪ: HDK, HDD ವಿರುದ್ಧ ವಾಗ್ದಾಳಿ

ಸೈಲೆಂಟ್ ಆಗಿದ್ದ ಮಧುಬಂಗಾರಪ್ಪ ದಿಢೀರ್ ವೈಲೆಂಟ್ ಆಗಿದ್ದು, ಸ್ವಪಕ್ಷದ ವರಿಷ್ಠರ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದಾರೆ. ಹಾಗಾದ್ರೆ ಮಧು ಏನೆಲ್ಲಾ ಮಾತನಾಡಿದ್ದಾರೆ ಎನ್ನುವ ಡಿಟೇಲ್ಸ್ ಇಲ್ಲಿದೆ.

JDS Working President Madhu Bangarappa hits out at his Party Leaders

ಬೆಂಗಳೂರು, (ಮಾ.02): ಈಗಾಗಲೇ ಜೆಡಿಎಸ್ ಪಕ್ಷದಿಂದ ಒಂದು ಕಾಲು ಹೊರಗೆ ಇಟ್ಟಿರುವ ಮಾಜಿ ಶಾಸಕ, ಜೆಡಿಎಸ್ ಕಾರ್ಯಾಧ್ಯಕ್ಷ ಮಧು ಬಂಗಾರಪ್ಪ, ಪಕ್ಷದಲ್ಲಿ ವ್ಯವಸ್ಥೆಯೇ ಸರಿಯಿಲ್ಲ ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದು (ಸೋಮವಾರ)  ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ  ಮಾತನಾಡಿರುವ ಅವರು, ಪಕ್ಷ ಬಿಡುವಾಗ ಹೇಳಿಯೇ ಹೋಗುತ್ತೇನೆ ಎನ್ನುವ ಮೂಲಕ ಪರೋಕ್ವಾಗಿ ಜೆಡಿಎಸ್ ತೊರೆಯುವ ತಮ್ಮ ಇಂಗಿತವನ್ನು ಮತ್ತೊಮ್ಮೆ ಸ್ಷಷ್ಟಪಡಿಸಿದ್ದಾರೆ. 

ಮಧುಬಂಗಾರಪ್ಪ ಕಾಂಗ್ರೆಸ್‌ಗೆ..? ಜಿಲ್ಲೆಯ 'ಕೈ' ಹಿರಿಯ ನಾಯಕ ಕಾಗೋಡು ಮಾತೇನು..?

ಮತ್ತೊಂದು ಹೆಜ್ಜೆ ಮುಂದೆ ಹೋಗಿ ಮಾತನಾಡಿರುವ ಮಧು ಬಂಗಾರಪ್ಪ, ಜೆಡಿಎಸ್‌ನಲ್ಲಿ ವ್ಯವಸ್ಥೆ ಸರಿ ಇಲ್ಲ.  ಜೆಡಿಎಸ್ ಪಕ್ಷ ಕಾರ್ಯಕರ್ತರ ವಿಶ್ವಾಸ ಕಳೆದುಕೊಂಡಿದೆ ಎಂದು ಕಿಡಿಕಾರಿದರು.

ಜೆಡಿಎಸ್ ಪಕ್ಷ ನಾಯಕರನ್ನು ಸೃಷ್ಟಿ ಮಾಡುತ್ತಿದೆ, ಆದರೆ ಆ ನಾಯಕರನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡುವುದಿಲ್ಲ ನೇರವಾಗಿ ಕುಮಾರಸ್ವಾಮಿ ಮತ್ತು ದೇವೇಗೌಡ್ರಿಗೆ ಬಾಣ ಬಿಟ್ಟರು. 

ಮಧು ಬಂಗಾರಪ್ಪ ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವಾಗಲೇ ಅವರ ಈ ಹೇಳಿಕೆಗಳು ಅಚ್ಚರಿ ಮೂಡಿಸಿವೆ.

ಶೀಘ್ರದಲ್ಲೇ ಸಿಹಿ ಸುದ್ದಿ: ಸುಳಿವು ಬಿಟ್ಟುಕೊಟ್ಟ ಮಧುಬಂಗಾರಪ್ಪ..!

ಬೇಕಿದ್ರೆ ತೆಗೆದು ಹಾಕ್ಲಿ ಎಂದ ಮಧು
ನಾನು ಆ್ಯಕ್ಟಿವ್ ಪಕ್ಷದ ಇನ್‌ ಆ್ಯಕ್ಟಿವ್ ಕಾರ್ಯಾಧ್ಯಕ್ಷ. ನಾನಾಗಿಯೇ ಜೆಡಿಎಸ್ ಕಾರ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ಕೊಡುವುದಿಲ್ಲ. ಬೇಕಾದರೆ ಅವರೇ ನನ್ನ ರಾಜೀನಾಮೆ ಕೇಳಬಹುದು. ಇಲ್ಲ‌ವೇ ನನ್ನನ್ನು ಹುದ್ದೆಯಿಂದ ತೆಗೆಯಬಹುದು ಎಂದು ಮಧು ಬಂಗಾರಪ್ಪ ಪಕ್ಷದ ನಾಯಕರಿಗೆ ಸವಾಲು ಹಾಕಿದ್ದಾರೆ.  ನಾನು ಕಾರ್ಯಾಧ್ಯಕ್ಷನಾಗಿರಲಿ ಅಥವಾ ಸಾಮಾನ್ಯ ಕಾರ್ಯಕರ್ತ ಆಗಿರಲಿ, ನನ್ನೊಂದಿಗೆ ಇರುವ ಬಂಗಾರಪ್ಪ ಅನ್ನುವ ಹಸರೇ ದೊಡ್ಡ ಹುದ್ದೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

ಮಧು ಬಂಗಾರಪ್ಪ ಕಾಂಗ್ರೆಸ್ ಸೇರುವ ವಿಚಾರಕ್ಕೆ ಎಚ್‌ಡಿಕೆ ಖಡಕ್ ಮಾತು...!

ರಮೇಶ್‌ಗೌಡನಿಗೆ MLC ಸ್ಥಾನವನ್ನ ಪ್ರಶ್ನಿಸಿದ ಮಧುಬಂಗಾರಪ್ಪ
ಕುಮಾರಸ್ವಾಮಿಯವರು ಮೊದಲು ಸಿಎಂ ಆಗಿದ್ದಾಗ ಅವರ ಜತೆ ಬಹಳ ಒಳ್ಳೆಯವರು ಇದ್ರು.. ಇದೀಗ ಅವರ ಸುತ್ತ ಮುತ್ತ ಇದ್ದವರು ಯಾರು..? ರಮೇಶ್ ಗೌಡ ಯೂಸ್ ಲೆಸ್ ಫೆಲ್ಲೋ.. ಅವನು ವಿಧಾನ ಸೌಧದಲ್ಲಿ ಓಡಾಡೋಕೆ ಯೋಗ್ಯತೆ ಇಲ್ಲ. ಯೋಗ್ಯತೆ ಇಲ್ಲದ ರಮೇಶ್‌ಗೌಡನಿಗೆ ಎಂಎಲ್‌ಸಿ ಸ್ಥಾನ ನೀಡಿದ ನಿರ್ಧಾರ ಯಾರದ್ದು? ಅವನಿಂದ ರಾಜೀನಾಮೆ ತಗೊಂಡು ಬೇರೆ ಒಳ್ಳೆಯವರಿಗೆ ಕೊಡಲಿ ಎಂದು ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡರಿಗೆ ಆಗ್ರಹಿಸಿದರು.

ಮಾರ್ಚ್ 02ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios