Asianet Suvarna News Asianet Suvarna News

ಹೈಕಮಾಂಡ್ ಘೋಷಣೆಗೂ ಮುನ್ನವೇ RR ನಗರ ಕಾಂಗ್ರೆಸ್ ಅಭ್ಯರ್ಥಿ ಹೆಸ್ರು ಬಹಿರಂಗಪಡಿಸಿದ ಸಿದ್ದು

ತೀವ್ರ ಕುತೂಹಲ ಮೂಡಿಸಿರುವ ಬೆಂಗಳೂರಿನ ಆರ್‌.ಆರ್. ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯ ಹೆಸರು ಪ್ರಕಟವಾಗಿದೆ.ಹೈಕಮಾಂಡ್ ಘೋಷಣೆ ಮಾಡುವ ಮೊದಲೇ ಸಿದ್ದರಾಮಯ್ಯ ಅವರು ಬಹಿರಂಗಪಡಿಸಿದ್ದಾರೆ.

Kusuma Is Congress Candidate For RR Nagar By Election Says Siddaramaiah rbj
Author
Bengaluru, First Published Oct 6, 2020, 3:29 PM IST
  • Facebook
  • Twitter
  • Whatsapp

ಮೈಸೂರು, (ಅ.06): ಹೈಕಮಾಂಡ್ ಅಧಿಕೃತ ಘೋಷಣೆ ಮಾಡುವ ಮೊದಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆರ್‌ ಆರ್ ನಗರ ಬೈ ಎಲೆಕ್ಷನ್ ಕಾಂಗ್ರೆಸ್ ಅಭ್ಯರ್ಥಿಯ ಹೆಸರನ್ನು ಬಹಿರಂಗಪಡಿಸಿದ್ದಾರೆ.

ಇಂದು (ಮಂಗಳವಾರ) ಮೈಸೂರಿನಲ್ಲಿ  ಮಾತನಾಡಿದ ಅವರು, ಆರ್‌ ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಎಂದು ಹೇಳಿದ ಸಿದ್ದರಾಮಯ್ಯಾವರು, ಇಂದು (ಮಂಗಳವಾರ) ಸಂಜೆ ಅಧಿಕೃತವಾಗಿ ಅಭ್ಯರ್ಥಿಗಳ ಹೆಸರು ಪ್ರಕಟವಾಗಲಿದೆ. ಕೆಪಿಸಿಸಿ ಇಂದ ಒಂದೇ ಹೆಸರನ್ನ ಶಿಫಾರಸ್ಸು ಮಾಡಲಾಗಿತ್ತು. ಅವರು ಹೆಸರು ಅಂತಿಮವಾಗಿ ಸಂಜೆ ಪ್ರಕಟವಾಗುತ್ತೆ ಎಂದು ಬಹಿರಂಗಪಡಿಸಿದರು.

ಬೈ ಎಲೆಕ್ಷನ್; ಹೈಕಮಾಂಡ್‌ಗೆ ಕೈ ಅಭ್ಯರ್ಥಿಗಳ ಪಟ್ಟಿ, ಪರಿಷತ್‌ಗೆ ಅಚ್ಚರಿ ಹೆಸರು! 

ಇನ್ನು ಕುಸುಮಾ ಅವರ ಅತ್ತೆ ಗೌರಮ್ಮ ವಿರೋಧ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ವಿರೋಧ ಮಾಡುವವರ ಬಗ್ಗೆ ನಾನೇನು ಮಾತನಾಡಲ್ಲ. ಅವರು ವಿರೋಧ ಮಾಡಿದ್ದಾರೋ, ಬಿಟ್ಟಿದ್ದಾರೋ ನನಗೆ ಗೊತ್ತಿಲ್ಲ. ನಮ್ಮ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ. ನಾವು ಜನರ ಮುಂದೆ ನಮ್ಮ ಅಭ್ಯರ್ಥಿ ಪರ ಓಟು ಕೇಳ್ತೀವಿ. ಅಂತಿಮವಾಗಿ ಜನರು ತೀರ್ಮಾನ ಮಾಡ್ತಾರೆ ಎಂದು ಸ್ಪಷ್ಟಪಡಿಸಿದರು.

ಅಲ್ಲದೇ ಆರ್ ಆರ್‌ ನಗರದಲ್ಲಿ ಮುನಿರತ್ನಗೆ ಟಿಕೆಟ್‌ ಅನುಮಾನ ವಿಚಾರವಾಗಿ ಪ್ರತಿಕ್ರಿಯಿಸಿ. ಮುನಿರತ್ನಗೆ ಟಿಕೆಟ್ ಕೊಡುತ್ತೋ ಬಿಡುತ್ತೋ ನನಗೆ ಗೊತ್ತಿಲ್ಲ. ಅವರ ಪಕ್ಷದ ಆಂತರಿಕ ವಿಚಾರ ನಾನು ಮಾತನಾಡಲ್ಲ. ಬಿಜೆಪಿಯಿಂದ ಮುನಿರತ್ನ, ಮುನಿರಾಜುಗೌಡ ಹೆಸರನ್ನ ಶಿಫಾರಸ್ಸು ಮಾಡಲಾಗಿದೆ ಎಂದು ಕೇಳಿದ್ದೇನೆ. ಯಾರಿಗಾದರೂ ಟಿಕೆಟ್ ಕೊಡಲಿ ನಾವು ಕಾಂಗ್ರೆಸ್ ಗೆಲುವಿಗೆ ಶ್ರಮಿಸುತ್ತೀವಿ ಎಂದರು.

ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ಆರ್.ಆರ್.ನಗರ ಕ್ಷೇತ್ರಗಳಿಗೆ ನ.03ರಂದು ಮತದಾನ ನಡೆಯಲಿದ್ದು, ನ.10ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಸಲು ಅ.16 ಕೊನೆಯ ದಿನವಾಗಿದೆ.

Follow Us:
Download App:
  • android
  • ios