Asianet Suvarna News Asianet Suvarna News

ನಿಖಿಲ್ ಮದ್ವೆಯಲ್ಲಿ ಲಾಕ್‌ಡೌನ್ ಉಲ್ಲಂಘನೆ ಆರೋಪ: ಬಿಎಸ್‌ವೈ ಫಸ್ಟ್ ರಿಯಾಕ್ಷನ್

ಲಾಕ್‌ಡೌನ್ ನಡುವೆಯೂ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಮದುವೆ ನೆರವೇರಿಸಿರುವ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನಡೆಗೆ ಆಪಕ್ಷೇಗಳು ವ್ಯಕ್ತವಾಗಿವೆ. ಅಲ್ಲದೇ ಲಾಕ್‌ಡೌನ್ ನಿಯಮ ಪಾಲಿಸಿಲ್ಲ ಎನ್ನುವ ಆರೋಪಗಳು ಕೇಳಿಬಂದಿದ್ದು, ಈ ಬಗ್ಗೆ ಸ್ವತಃ ಸಿಎಂ ಪ್ರತಿಕ್ರಿಯಿಸಿದ್ದಾರೆ.

Kumraswamy Family Hasn't Violated Lockdown Guidelines During Nikhil Wedding Says BSY
Author
Bengaluru, First Published Apr 18, 2020, 5:28 PM IST

ಬೆಂಗಳೂರು, (ಏ.18): ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಕೊರೋನಾ ಲಾಕ್‌ಡೌನ್‌ ನಡುವೆಯೂ ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ಮದುವೆ ನೆರವೇರಿತು. ಆದರೆ ಮದುವೆ ಸಮಾರಂಭದಲ್ಲಿ ಕೊರೋನಾ ಲಾಕ್‌ಡೌನ್ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಿರುವ ಆರೋಪ ಕೇಳಿಬರುತ್ತಿದೆ. ಇದರ ನಡುವೆ ಸ್ವತಃ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣಗೆ ಹಿನ್ನೆಡೆಯಾಗಿದೆ.

ಕೊರೋನಾ ನಡುವೆ ನಿಖಿಲ್-ರೇವತಿ ವಿವಾಹ ಸಂಪನ್ನ; ಮಾಜಿ ಸಿಎಂ HKD ಮಾತು ಎಂಥ ಚೆನ್ನ.

ಕುಮಾರಸ್ವಾಮಿಗೆ ಬಿಎಸ್‌ವೈ ಅಭಿನಂದನೆ
ಹೌದು...ಸರಳವಾಗಿ ಪುತ್ರನ ಮದುವೆ ಮಾಡಿದ್ದಕ್ಕೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಹಾಲಿ ಸಿಎಂ ಬಿಎಸ್‌ ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.

ಇಂದು (ಶನಿವಾರ) ಸುದ್ದಿಗೋಷ್ಠಿಯಲ್ಲಿ ನಿಖಿಲ್ ಮದ್ವೆಯಲ್ಲಿ ಲಾಕ್‌ಡೌನ್ ಉಲ್ಲಂಘನೆ ಆರೋಪ ಬಗ್ಗೆ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಪುತ್ರನ ಮದುವೆಗೆ ಅನುಮತಿ ಕೊಡಲಾಗಿತ್ತು. ಅವರು ಸರಳವಾಗಿ ಮದುವೆ ಮಾಡಿದ್ದಾರೆ. ಅವರ ಕುಟುಂಬ ದೊಡ್ಡದಿದ್ರು ಹೆಚ್ಚು ಜನ ಸೇರಿಸದೆ ಮದುವೆ ಕಾರ್ಯ ಮುಗಿಸಿರುವುದಕ್ಕೆ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ನಿಖಿಲ್ ಸತಿಯಾದ ರೇವತಿ, ದಾಂಪತ್ಯಕ್ಕೆ ಕಾಲಿಟ್ಟ ಜಾಗ್ವಾರ್ ಹೀರೋ! 

ಇವಾಗ ಕುಮಾರಸ್ವಾಮಿ ಪುತ್ರನ ಮದುವೆ ಚರ್ಚೆ ಅಪ್ರಸ್ತುತ ಎಂದು ಹೇಳುವ ಮೂಲಕ ಯಾವುದೇ ಲಾಕ್‌ಡೌನ್ ಉಲ್ಲಂಘನೆಯಾಗಿಲ್ಲ ಎಂದು ಪರೋಕ್ಷವಾಗಿ ಹೇಳಿದರು. ಇದರಿಂದ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣಗೆ ಹಿನ್ನೆಡೆಯಾದಂತಾಗಿದೆ.

ವರದಿಗೆ ಸೂಚಿಸಿದ್ದ ಡಿಸಿಎಂಗೆ ಮುಖಭಂಗ
ನಿಖಿಲ್ ಕುಮಾರಸ್ವಾಮಿ ಅವರ ಮದ್ವೆಯಲ್ಲಿ ಸಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಅನುಮತಿ ಪಡೆದಿರುವುದಕ್ಕಿಂತ ಹೆಚ್ಚು ಜನರು ಮದ್ವೆಯಲ್ಲಿ ಭಾಗವಹಿಸಿದ್ದರು ಅಂತೆಲ್ಲಾ ಆರೋಪಗಳು ಕೇಳಿಬರುತ್ತಿವೆ. ಈ ಬಗ್ಗೆ ಸ್ವತಃ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ, ಡಿಸಿಎಂ ಅಶ್ವಥ್ ನಾರಾಯಣ ಅವರು ಜಿಲ್ಲಾಧಿಕಾರಿ ವರದಿ ನೀಡುವಂತೆ ಸೂಚಿಸಿದ್ದರು.

ಆದ್ರೆ, ಇದೀಗ ಸಿಎಂ ಬಿಎಸ್‌ ಯಡಿಯೂರಪ್ಪ ಅವರು ಕುಮಾರಸ್ವಾಮಿಗೆ ಅಭಿನಂದನೆ ಹೇಳುವ ಮೂಲಕ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ತೀರ್ಪು ನೀಡಿದರು. ಈ ಮೂಲಕ ಯಾವುದೇ ಉಲ್ಲಂಘನೆಯಾಗಿಲ್ಲ ಎನ್ನುವ ಅರ್ಥದಲ್ಲಿ ಹೇಳಿದರು.

Follow Us:
Download App:
  • android
  • ios