ಮಂಡ್ಯದಲ್ಲಿ ಸುಮಲತಾ ವಿರುದ್ಧ ಸ್ಪರ್ಧಿಸೊಲ್ಲ: ಸವಾಲಿಗೆ ಮುನ್ನವೇ ಹೆದರಿದರೇ ಕುಮಾರಣ್ಣ!

ಸಂಸದೆ ಸುಮಲತಾರಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಅವರಷ್ಟು ವರ್ಚಸ್ಸು ನನಗಿಲ್ಲ. ಮಂಡ್ಯಕ್ಕೆ ಅವರು ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಹಾಗಾಗಿ ಅವರ ಸವಾಲನ್ನು ನಾನು ನಿರಾಕರಣೆ ಮಾಡುತ್ತೇನೆ.

Kumaraswamy scared before challenge he was not compete against Sumalatha in Mandya sat

ಮಂಡ್ಯ (ಏ.18): ಸಂಸದೆ ಸುಮಲತಾರಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಅವರಷ್ಟು ವರ್ಚಸ್ಸು ನನಗಿಲ್ಲ. ಮಂಡ್ಯಕ್ಕೆ ಅವರು ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಹಾಗಾಗಿ ಅವರ ಸವಾಲನ್ನು ನಾನು ನಿರಾಕರಣೆ ಮಾಡುತ್ತೇನೆ. ಈ ಬಾರಿ ಮಂಡ್ಯದಲ್ಲಿ ಸುಮಲತಾ ಸ್ಪರ್ಧಿಸಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳುವ ಮೂಲಕ ಸ್ಪರ್ಧೆಗೆ ಮುನ್ನವೇ ಸವಾಲಿನಿಂದ ದೂರ ಉಳಿಸಿದ್ದಾರೆ. 

ಈ ಕುರಿತು ಶ್ರೀರಂಗಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ನಾನು ಮಂಡ್ಯದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದವರು ಯಾರು? ಚನ್ನಪಟ್ಟಣದ ಅಭ್ಯರ್ಥಿಯಾಗಿ ಬ್ಯಾಂಕ್ ಖಾತೆ ತೆರೆದಿದ್ದೇನೆ. ಚನ್ನಪಟ್ಟಣದ ವಂದಾರಗುಪ್ಪೆ ಶಾಖೆಯಲ್ಲಿ ಅಕೌಂಟ್ ಓಪನ್ ಆಗಿದೆ. ಆದರೆ, ಮಂಡ್ಯದಲ್ಲಿ ಬ್ಯಾಂಕ್‌ನ ಕೇಂದ್ರ ಕಚೇರಿ ಇರುವ ಕಾರಣ ಅದರಲ್ಲಿ ಮಂಡ್ಯ ಎಂದು ಉಲ್ಲೇಖಿಸಿದ್ದಾರೆ. ಆದರೆ, ನಾನು ಮಂಡ್ಯದಲ್ಲಿ ಬ್ಯಾಂಕ್‌ ಖಾತೆ ತೆರೆದಿದ್ದಾಗಿ ಹೇಳುತ್ತಿದ್ದಾರೆ. ನಾನು ಮಂಡ್ಯದಲ್ಲಿ ಸ್ಪರ್ಧೆ ಮಾಡುವುದಿಲ್ಲ. ಮುಂದಿನ 2 ದಿನಗಳಲ್ಲಿ ಅಭ್ಯರ್ಥಿ ಘೋಷಣೆ ಮಾಡುತ್ತೇನೆ ಎಂದು ಹೇಳಿದರು.

ಅಫಜಲಪುರದಲ್ಲಿ ಸಂಧಾನ ವಿಫಲ: ಸಹೋದರರ ಕಾಳಗ, ನಾನೇ ಗೆಲ್ಲಲಿ ಆಶೀರ್ವದಿಸೆಂದು ಅಣ್ಣನ ಕಾಲಿಗೆ ಬಿದ್ದ ತಮ್ಮ!.

ಸಾಮಾನ್ಯ ರೈತ ಮಹಿಳೆ ನಿಲ್ಲಿಸಿ ಗೆಲ್ಲಿಸಿಕೊಳ್ತೀನಿ: ಇನ್ನು ಸಂಸದೆ ಸುಮಲತಾ ಅವರು ತಮ್ಮವಿರುದ್ಧ ಕುಮಾರಸ್ವಾಮಿ ಸ್ಪರ್ಧೆಗೆ ಸವಾಲು ಹಾಕಿದ್ದಾರೆ ಎಂದು ಕೇಳಿಬರುತ್ತಿದೆ. ಆದರೆ, ಸುಮಲತಾರಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಅವರಷ್ಟು ವರ್ಚಸ್ಸು ನನಗಿಲ್ಲ. ಮಂಡ್ಯಕ್ಕೆ ಅವರು ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಹಾಗಾಗಿ ಅವರ ಸವಾಲನ್ನು ನಾನು ನಿರಾಕರಣೆ ಮಾಡುತ್ತೇನೆ. ಈ ಬಾರಿ ಮಂಡ್ಯದಲ್ಲಿ ಸುಮಲತಾ ಸ್ಪರ್ಧಿಸಲಿ. ಸಾಮಾನ್ಯ ಕಾರ್ಯಕರ್ತ, ರೈತನ ಮಗ ಅಥವಾ ರೈತ ಮಹಿಳೆಯನ್ನ ಮಂಡ್ಯದಲ್ಲಿ ನಿಲ್ಲಿಸಿ ಗೆಲ್ಲಿಸಿಕೊಳ್ಳುತ್ತೇನೆ. ಸುಮಲತಾರ ದುರಹಂಕಾರದ ಮಾತುಗಳಿಗೆ ಮಂಡ್ಯ ಜನ ಉತ್ತರ ಕೊಡುತ್ತಾರೆ ಎಂದು ಕಿಡಿಕಾರಿದರು.

ದೇವೇಗೌಡರು ಮಂಡ್ಯ ಪ್ರಚಾರಕ್ಕೆ ಬರ್ತಾರೆ: ಇನ್ನು ಮಂಡ್ಯದಲ್ಲಿ ಸುಮಲತಾ ಅವರದು ದ್ವೇಷದ ರಾಜಕಾರಣ, ನಮ್ಮದಲ್ಲ. ನನ್ನ ಸ್ಪರ್ಧೆಯಿಂದ 7 ಕ್ಷೇತ್ರಗಳಲ್ಲೂ ಪಕ್ಷಕ್ಕೆ ಅನುಕೂಲ ಇದೆ. ನಾನು ಸ್ಪರ್ಧೆ ಮಾಡದಿದ್ದರೂ ಮಂಡ್ಯ ಜನ ಜೆಡಿಎಸ್‌ ಗೆಲ್ಲಿಸುತ್ತಾರೆ. ಅನಿವಾರ್ಯ ಅವಶ್ಯಕತೆ ಇದ್ದರೆ ದೇವೇಗೌಡರು ಮಂಡ್ಯಕ್ಕೆ ಪ್ರಚಾರಕ್ಕೆ ಬರ್ತಾರೆ. ಇವತ್ತು ಅಥವಾ ನಾಳೆಯೊಳಗೆ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಲಾಗುತ್ತದೆ.  ಚನ್ನಪಟ್ಟಣದಲ್ಲಿ ನಿನ್ನೆ ನಾನು ನಾಮಪತ್ರವನ್ನು ಸಲ್ಲಿಕೆ ಮಾಡಿದ್ದೇನೆ. ಗೊಂದಲ ಸೃಷ್ಟಿ ಬೇಡ ಎಂದು ಸಾವಿರ ಬಾರಿ ಹೇಳಿದ್ದೇನೆ. ಚನ್ನಪಟ್ಟಣದಲ್ಲಿ ಸಮರ್ಥ ಅಭ್ಯರ್ಥಿ ತಯಾರಾಗಿದ್ದದ್ದರೆ ಮಾತ್ರ, ಆಗ ನಾನು ಮಂಡ್ಯದಲ್ಲಿ ಸ್ಪರ್ಧೆ ಮಾಡುತ್ತಿದ್ದೆನು. ಕಾರ್ಯಕರ್ತರನ್ನು ಉಳಿಸಿ ಪಕ್ಷ ಕಟ್ಟಲಿಕ್ಕೆ ಕಳೆದ ಬಾರಿ ಎರಡು ಕಡೆ ಸ್ಪರ್ಧಿಸಿದ್ದೆನು. ಈಗ ಆ ಅನಿವಾರ್ಯತೆ ಇಲ್ಲ ಎಂದು ಹೇಳಿದರು.

ಮಂಡ್ಯದಲ್ಲಿ ಹೆಚ್‌ಡಿಕೆ ಸೋಲಿಸಲು ಮೆಗಾ ಪ್ಲಾನ್: ಸುಮಲತಾ-ರಮ್ಯಾ ಕಣಕ್ಕೆ, ದಳಪತಿಗಳಿಗೆ ವಿರೋಧಿಗಳ ಶಾಕ್!

ಸುಮಲತಾ ಪತಿಯಿಂದ ಅನುಕೂಲ ಆಗಿಲ್ಲ: ಹಾಸನದಲ್ಲಿ ನಮ್ಮ ಕುಟುಂಬದವರು ಸ್ಪರ್ಧೆ ಮಾಡುವ ಅಗತ್ಯ ಇಲ್ಲ‌ ಸಾಮಾನ್ಯ ಕಾರ್ಯಕರ್ತರಿಗೆ ಕೊಡ್ತೀವಿ ಎಂದು ಹೇಳಿದ್ದೆನು. ಆ ಮಾತೇ ಮಂಡ್ಯಕ್ಕೂ ಅನ್ವಯ ಆಗಲಿದೆ. ಸುಮಲತಾ ಅವರದ್ದು ದುರಹಂಕಾರದ ಪರಮಾವಧಿ. ನಮಗೆ ಅವರ ಪತಿಯಿಂದ ಯಾವುದೇ ಅನುಕೂಲ ಆಗಿಲ್ಲ. ಆದರೆ ನಾನು ಯಾವ ರೀತಿ ಗೌರವ ಕೊಟ್ಟಿದ್ದೇನೆ. ಮಂಡ್ಯ ಜಿಲ್ಲೆಯ ಗೌರವ ಉಳಿಸಿದ್ದೇನೆ, ಅದಕ್ಕೆ ಅವರು ನನಗೆ ಕೊಡ್ತಿರುವ ಕಾಣಿಕೆ ಇದು. ಅವರ ಕಾಣಿಕೆ ಸ್ವೀಕಾರ ಮಾಡಲು ತಯಾರಾಗಿದ್ದೇನೆ ಎಂದು ಹೇಳಿದರು.

Latest Videos
Follow Us:
Download App:
  • android
  • ios