ಬೆಂಗಳೂರು, (ಫೆ.19): ಬೆಂಗಳೂರು ಹೊರವಲಯದ ಬಿಡದಿ ಬಳಿ ಸಚಿವ ಕೋಟ ಶ್ರೀನಿವಾಸ್​ ಪೂಜಾರಿ ಅವರ ಕಾರು ಅಪಘಾತಕ್ಕೀಡಾಗಿದೆ.

ಕುಂಬಳಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಚಿವರ ಇನೋವಾ ಕಾರಿಗೆ KSRTC ಬಸ್​ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್, ಅಪಘಾತದಲ್ಲಿ ಸಚಿವರು ಸೇರಿದಂತೆ ಕಾರಿನಲ್ಲಿದ್ದ ಯಾರಿಗೂ ಏನು ಅಪಾಯವಾಗಿಲ್ಲ ಎಂದು ತಿಳಿದುಬಂದಿದೆ.

ರಸ್ತೆ ಸುರಕ್ಷತಾ ಜಾಗೃತಿ: ಬೆಂಗಳೂರಿನಲ್ಲಿ ಬೃಹತ್ ವಿಂಟೇಜ್ ಕಾರು ರ‍್ಯಾಲಿ!

ಸಚಿವರ ಕಾರು ಬಿಡದಿ ಬಳಿ ಕದಂಬ ಹೋಟೆಲ್ ಮುಂಭಾಗದ ಬಂಕ್‌ನಲ್ಲಿ ಇಂಧನ ಹಾಕಿಸಿಕೊಂಡು ತೆರಳುವಾಗ KSRTC ಬಸ್ ಡಿಕ್ಕಿ ಹೊಡೆದೆ.

KSRTC ಬಸ್ ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುತ್ತಿತ್ತು. ಅಪಘಾತದಲ್ಲಿ ಕಾರಿನ‌ ಒಂದು ಭಾಗ  ಜಖಂಗೊಂಡಿದೆ.