Asianet Suvarna News Asianet Suvarna News

ಈಶ್ವರಪ್ಪ ರಾಜೀನಾಮೆಗೂ ಮುನ್ನ PDOಗಳ ಟ್ರಾನ್ಸ್‌ಫರ್, ಚರ್ಚೆಗೆ ಗ್ರಾಸ..!

* ಗ್ರಾಮೀಣಾಭಿವದ್ಧಿ ಇಲಾಖೆಯಲ್ಲಿ ಭರ್ಜರಿ ಟ್ರಾನ್ಸ್ ಫರ್  
* ಒಂದೇ ದಿನ ನಡೀತಾ 29 ಅಧಿಕಾರಿಗಳ ವರ್ಗಾವಣೆ 
* ಸಂತೋಷ್ ಸಾವಿನ ದಿನ ಮೈಸೂರಿನಲ್ಲೇ ಇದ್ದ ಈಶ್ವರಪ್ಪ! 
* ವಿಭಾಗವಾರು ಸಭೆಯಲ್ಲೇ ಆಯ್ತಾ ವರ್ಗಾವಣೆಗೆ ಆದೇಶ?

KS Eshwarappa Transferred 29 PDO Officer On Santosh Suicide April 12th rbj
Author
Bengaluru, First Published Apr 15, 2022, 2:33 PM IST | Last Updated Apr 15, 2022, 2:33 PM IST

ಬೆಂಗಳೂರು, (ಏ.15): ಗುತ್ತಿಗೆದಾರ ಸಂತೊಷ ಆತ್ಮಹಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಸ್ ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ಇಂದು(ಶುಕ್ರವಾರ) ಅಧಿಕೃತವಾಗಿ ರಾಜೀನಾಮೆ ಪತ್ರವನ್ನು ಸಿಎಂ ಬೊಮ್ಮಾಯಿ ಅವರಿಗೆ ನೀಡಲಿದ್ದಾರೆ.

 ಸಚಿವ ಕೆ.ಎಸ್. ಈಶ್ವರಪ್ಪ ಅವರೇ ಕಾರಣ ಎಂದು ಸತೋಷ್ ಆತ್ಮಹತ್ಯೆ ಮಾಡಿಕೊಂಡ ದಿನವೇ ಅಂದ್ರೆ ಏಪ್ರಿಲ್ 12ರಂದು 29 PDOಗಳ ಭರ್ಜರಿ ವರ್ಗಾವಣೆಯಾಗಿದ್ದು, ಇದು ಹಲವು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 

ಏಪ್ರಿಲ್ 12ರಂದು ಗುತ್ತಿಗೆದಾರ ಸಂತೋಷ್ ಪಾಟೀಲ್ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬಯಲಿಗೆ ಬಂದಿತ್ತು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮಾಧ್ಯಮದವರಿಗೆ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಸಚಿವ ಈಶ್ವರಪ್ಪ ಅವರೇ ಕಾರಣ ಎಂದು ವಾಟ್ಸಪ್ ಮಾಡಿದ್ದರು. ಆ ವೇಳೆ ಸಚಿವ ಈಶ್ವರಪ್ಪ ಮೈಸೂರಿನಲ್ಲಿ ಇದ್ದರು.

Santosh Suicide Case: ಈಶ್ವರಪ್ಪಗೆ 1 ದಿನ ಕಾಲಾವಕಾಶ ಸಿಕ್ಕಿದ್ಹೇಗೆ?

ಇದೀಗ ಇದೇ ದಿನದಂದು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 29 PDOಗಳ ವರ್ಗಾವಣೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಅದರಲ್ಲೂ ಮೈಸೂರು ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳ PDOಗಳ ವರ್ಗಾವಣೆ ಮಾಡಿದೆ. ಇದಕ್ಕೆ ಸಿಎಂ ಅನುಮೋದನೆ ನೀಡಿದ್ದು, ಗ್ರಾಮೀಣಾಭಿವೃದ್ಧಿ ಇಲಾಖೆ ವರ್ಗಾವಣೆ ಮಾಡಿದೆ.

ಸಂತೋಷ್ ಸಾವಿನ ದಿನ ಮೈಸೂರಿನಲ್ಲೇ ಇದ್ದ ಈಶ್ವರಪ್ಪ, ಬಿಜೆಪಿ ವಿಭಾಗವಾರು ಸಭೆಯಲ್ಲೇ  ವರ್ಗಾವಣೆಗೆ ಆದೇಶ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಅಧಿಕಾರ ರಾಜಕಾರಣವೇ ಹಾಗೆ; ಇಲ್ಲಿ ಉಧೋ ಎನ್ನಲು ನೂರು ಜನ ಇದ್ದರೆ, ಸಂಕಷ್ಟಗಳು ಬಂದಾಗ ಯಾರೂ ಇರುವುದಿಲ್ಲ. ಸಂತೋಷ್‌ ಪಾಟೀಲ… ಆತ್ಮಹತ್ಯೆ ಮಾಡಿಕೊಂಡ ಕೆಲವೇ ಗಂಟೆಗಳಲ್ಲಿ ಈಶ್ವರಪ್ಪ ರಾಜೀನಾಮೆ ಕೊಡಬೇಕು ಎಂದು ತೀರ್ಮಾನ ಆಗಿ ಹೋಗಿತ್ತು. ಕೆ.ಜೆ.ಜಾಜ್‌ರ್‍ ರಾಜೀನಾಮೆಗೆ ಅಗ್ರಹಿಸಿದ್ದ ಬಿಜೆಪಿ, ಈಗ ಈಶ್ವರಪ್ಪ ಅವರನ್ನು ಸಮರ್ಥಿಸಿಕೊಂಡರೆ ತಪ್ಪು ಸಂದೇಶ ಹೋಗುತ್ತದೆ ಎಂದು ಬಿಜೆಪಿ ಲೆಕ್ಕ ಹಾಕಿ ಆಗಿತ್ತು. ಇದಕ್ಕೆ ಈಶ್ವರಪ್ಪ ಕೂಡ ಬುಧವಾರ ಬೆಳಿಗ್ಗೆ ಒಪ್ಪಿಕೊಂಡಿದ್ದರು.

ಆದರೆ ಈಶ್ವರಪ್ಪನವರಿಗೆ ದೂರವಾಣಿ ಕರೆ ಮಾಡಿದ ದಿಲ್ಲಿ ನಾಯಕರೊಬ್ಬರು, ‘ಇಲ್ಲ ಈಗ ರಾಜೀನಾಮೆ ಘೋಷಣೆ ಮಾಡಬೇಡಿ. ನಂಬರ್‌ 1 ಅಂದರೆ ಮೋದಿ ಮತ್ತು ನಂಬರ್‌ 2 ಅಮಿತ್‌ ಶಾ ಜೊತೆ ಮಾತನಾಡುತ್ತೇವೆ. ನಂತರ ನೋಡೋಣ’ ಎಂದಾಗ ಈಶ್ವರಪ್ಪ ಸುಮ್ಮನಾಗಿದ್ದರು. ಆದರೆ ಈಶ್ವರಪ್ಪ ರಾಜೀನಾಮೆ ಕೊಡದೇ ಇದ್ದರೆ ಕಾಂಗ್ರೆಸ್‌ ಪ್ರತಿಭಟನೆ ಜೋರಾಗುತ್ತದೆ ಎಂದು ಮತ್ತು ಹೊಸಪೇಟೆ ಕಾರ್ಯಕಾರಿಣಿಗೆ ಜೆ.ಪಿ.ನಡ್ಡಾ ಬಂದರೆ ಬರೀ ಇದೇ ವಿಷಯ ಚರ್ಚೆ ಆಗುತ್ತದೆ, ಪಕ್ಷಕ್ಕೆ ಕೆಟ್ಟಹೆಸರು ಎಂಬ ಅಭಿಪ್ರಾಯ ಬಂದ ನಂತರ ಇವತ್ತು ಮಧ್ಯಾಹ್ನ ‘ನೀವು ರಾಜೀನಾಮೆ ಘೋಷಣೆ ಮಾಡಿ’ ಎಂದು ಈಶ್ವರಪ್ಪ ಅವರಿಗೆ ಜೆ.ಪಿ.ನಡ್ಡಾ ಮತ್ತು ಬಿ.ಎಲ್ ಸಂತೋಷ್‌ ಫೋನ್‌ ಮಾಡಿ ಹೇಳಿದ್ದಾರೆ.

ದಿಲ್ಲಿ ಸೂಚನೆಯ ನಂತರ ಈಶ್ವರಪ್ಪ ಬಳಿ ಬೇರೆ ದಾರಿ ಇರಲಿಲ್ಲ. ಮೇಲ್ನೋಟಕ್ಕೆ ಈಶ್ವರಪ್ಪ ವಿರುದ್ಧ ದಾಖಲೆ ಗಳು ಇರದಿದ್ದರೂ ಕಾಂಗ್ರೆಸ್ಸಿಗೆ ಲಾಭ ಮಾಡಿಕೊಳ್ಳುವ ಅವಕಾಶ ಕೊಡಬಾರದು ಎಂದು ಈಶ್ವರಪ್ಪ ರಾಜೀನಾಮೆ ಪಡೆಯುವ ನಿರ್ಧಾರಕ್ಕೆ ದಿಲ್ಲಿ ನಾಯಕರು ಬಂದಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ, ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸೇರಿದಂತೆ ಸರ್ಕಾರ ಮತ್ತು ಪಕ್ಷದ ಯಾವ ನಾಯಕರೂ ಈಶ್ವರಪ್ಪ ಜೊತೆ ನಿಲ್ಲಲು ತಯಾರು ಇರಲಿಲ್ಲ. ಆದರೆ ಸಂಘದ ಅನುಕಂಪ ಇರುವುದರಿಂದ ಈಶ್ವರಪ್ಪ ಅವರಿಗೆ ಒಂದು ದಿನ ಜಾಸ್ತಿ ಸಮಯ ಸಿಕ್ಕಿತು ಎಂದು ಕಾಣುತ್ತದೆ.

Latest Videos
Follow Us:
Download App:
  • android
  • ios