ಕಲ್ಯಾಣ ಕರ್ನಾಟಕದ 31 ಕ್ಷೇತ್ರದಲ್ಲಿ ಕೆಆರ್‌ಪಿಪಿ ಸ್ಪರ್ಧೆ: ಜನಾರ್ದನ ರೆಡ್ಡಿ
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಮತದಾರರ ಒತ್ತಾಯದ ಮೇಲೆ ಪಕ್ಷವನ್ನು ಸ್ಥಾಪಿಸಿದ್ದು ಇಲ್ಲಿನ ಸರ್ವಾಂಗೀಣ ಅಭಿವೃದ್ಧಿಗಾಗಿ ನಮ್ಮ ಪಕ್ಷವು ಶ್ರಮಿಸಲಿದೆ: ಗಾಲಿ ಜನಾರ್ದನ ರೆಡ್ಡಿ
ಚಿತ್ತಾಪುರ(ಮಾ.10): ಕಲ್ಯಾಣ ಕರ್ನಾಟಕದ ಆಯ್ದ 31 ವಿಧಾನಸಭೆ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳು ಹಾಗೂ ಮತದಾರರ ಉತ್ತಮ ಬೆಂಬಲ ಸಿಗುತ್ತಿರುವ ಕ್ಷೇತ್ರಗಳಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ ಎಂದು ರಾಜ್ಯಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ಪಟ್ಟಣದ ಕಂಬಳೇಶ್ವರ ಸಂಸ್ಥನಕ್ಕೆ ಭೇಟಿ ನೀಡಿದ ಕೆಅರ್‌ಪಿಪಿ ರಾಜ್ಯಾಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಶ್ರೀಗಳಿಂದ ಸನ್ಮಾನ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಹಿತದೃಷ್ಟಿಯಿಂದ ಪ್ರವಾಸವನ್ನು ಕೈಗೊಂಡಿದ್ದೇನೆ. ಇಲ್ಲಿನ ಪ್ರಸಿದ್ಧ ಸಂಸ್ಥಾನವಾಗಿರುವ ಕಂಬಳೇಶ್ವರ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರ್ಶೀವಾದ ಪಡೆದಿದ್ದೇನೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಮತದಾರರ ಒತ್ತಾಯದ ಮೇಲೆ ಪಕ್ಷವನ್ನು ಸ್ಥಾಪಿಸಿದ್ದು ಇಲ್ಲಿನ ಸರ್ವಾಂಗೀಣ ಅಭಿವೃದ್ಧಿಗಾಗಿ ನಮ್ಮ ಪಕ್ಷವು ಶ್ರಮಿಸಲಿದೆ. ಮೊದಲ ಹಂತದಲ್ಲಿ ಬಳ್ಳಾರಿ, ಗಂಗಾವತಿ, ಕೊಪ್ಪಳ, ಸಿಂಧನೂರ, ಕನಕಗಿರಿ, ಹಿರಿಯೂರು, ಪಾವಗಡ, ನಾಗಠಾಣ, ಇಂಡಿ ಸೇರಿದಂತೆ 9 ವಿಧಾನ ಸಭೆ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದ್ದು ಇಂದು ಸೇಡಂ ಮತಕ್ಷೇತ್ರದ ಸಭ್ಯರ್ಥಿ ಘೋಷಣೆ ಮಾಡುತ್ತಿರುವುದಾಗಿ ಹೇಳಿದರು.
ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ: ಯಡಿಯೂರಪ್ಪ ವಿಶ್ವಾಸ
ಚಿತ್ತಾಪುರ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ನಿಲ್ಲಿಸುವಿರಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಸೂಕ್ತ ಅಭ್ಯರ್ಥಿ ಸಿಕ್ಕಲ್ಲಿ ಖಂಡಿತವಾಗಿ ಸ್ಪರ್ಧೆಗೆ ಇಳಿಸುವುದಾಗಿ ಹೇಳಿದರು. ನಾನು ಎಂದೂ ಹೊಂದಾಣಿಕೆ ರಾಜಕೀಯ ಮಾಡಿಲ್ಲಾ ಮುಂದೆಯೂ ಮಾಡುವುದಿಲ್ಲಾ. ನಾನು ಎಂದು ಕಾಂಪ್ರಮೈಸ್ ರಾಜಕೀಯ ಮಾಡಲ್ಲಾ ನಾನು ಮತ್ತೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗುವುದಿಲ್ಲಾ ಅಥವಾ ಬೆಂಬಲ ನೀಡುವುದಿಲ್ಲಾ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿ. ಲಲ್ಲೇಶರೆಡ್ಡಿ, ಶಿವಲಿಂಗರೆಡ್ಡಿ, ಮಲ್ಲಿಕಾರ್ಜುನ ಮಂಗಲಗಿ, ಸಾಗರ ಚವ್ವಾಣ ಇದ್ದರು.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ರಾಜ್ಯಧ್ಯಕ್ಷರಾಗಿರುವ ಗಾಲಿ ಜನಾರ್ದನ ರೆಡ್ಡಿಯವರು ಮಠ, ಮಂದಿಗಳ ದೈವ ಭಕ್ತರಾಗಿದ್ದು ಅವರು ಚಿತ್ತಾಪುರಕ್ಕೆ ಬಂದಾಗ ನಮ್ಮ ಮಠಕ್ಕೆ ಬಂದು ಆರ್ಶೀವಾದ ಪಡೆದುಕೊಂಡು ಹೋಗಿದ್ದಾರೆ ಅಂತ ಚಿತ್ತಾಪುರ ಕಂಬಳೇಶ್ವರ ಮಠದ ಶಿವಾಚಾರ್ಯರು ಸೋಮಶೇಖರ ತಿಳಿಸಿದ್ದಾರೆ.