ಬೆಂಗಳೂರು, [ಅ.30]: ಕೆ.ಆರ್. ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅನರ್ಹ ಶಾಸಕ ಬೈರಾತಿ ಬಸವರಾಜ್ ಗೆ ಅಡ್ಡಗಲಾಗಿದ್ದ ಬಿಜೆಪಿ ಮಾಜಿ ಶಾಸಕ ನಂದೀಶ್ ರೆಡ್ಡಿ ಅವರನ್ನು ಬಿಎಂಟಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ನಂದೀಶ್ ರೆಡ್ಡಿ ಅವರನ್ನು ಬಿಎಂಟಿಸಿ ಅಧ್ಯಕ್ಷರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಇಂದು [ಬುಧವಾರ] ಅಧಿಕೃತ ಅಧಿಸೂಚನೆ ಹೊರಡಿಸಿದೆ.ಈ ಮೂಲಕ ಸಿಎಂ ಬಿಎಸ್ ಯಡಿಯೂರಪ್ಪ ಅವರು ಬೈರತಿ ಬಸವರಾಜ್ ಹಾದಿ ಕ್ಲಿಯರ್ ಮಾಡಿಕೊಟ್ಟರು.

KR ಪುರದಲ್ಲಿ ಬದಲಾಯ್ತು ಕಣ, ಸ್ವತಂತ್ರವಾಗಿ ನಂದೀಶ್ ರೆಡ್ಡಿ ಅಖಾಡಕ್ಕೆ?

ಬೆಂಗಳೂರಿನ ಕೆ.ಆರ್.ಪುರ ವಿಧಾನಸಭಾ ಉಪಚುನಾವಣೆಯ ಟಿಕೇಟ್ ಕೊಡಲೇಬೇಕೆಂದು ನಂದೀಶ್ ರೆಡ್ಡಿ ಅವರು ಪಟ್ಟುಹಿಡಿದಿದ್ದರು. ಇದ್ರಿಂದ ಅವರಿಗೆ ಫಸ್ಟ್ ಬಿಎಂಟಿಸಿಯ ಉಪಾಧ್ಯಕ್ಷ ಸ್ಥಾನ ನೀಡಲಾಗಿತ್ತು. ಆದ್ರೆ, ಅದನ್ನು ಸ್ವೀಕರಿಸಿರಲಿಲ್ಲ. 

ಈ ಹಿನ್ನೆಲೆಯಲ್ಲಿ ಈಗ  ಬಿ.ಎಸ್.ಯಡಿಯೂರಪ್ಪ ಅವರು ನಂದೀಶ್ ಗೆ BMTC ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಈ ಮೂಲಕ ಉಪಚುನಾವಣೆಯ ಟಿಕೇಟ್ ತಂಟೆಗೆ ಬರದಂತೆ ಬಾಯಿಮುಚ್ಚಿಸಲು ಮುಂದಾಗಿದ್ದಾರೆ. ಇದೀಗ ಅಧ್ಯಕ್ಷ ಹುದ್ದೆಯನ್ನು ನಂದೀಶ್ ರೆಡ್ಡಿ ಸ್ವೀಕರಿಸುತ್ತಾರೋ ಇಲ್ಲವೋ ಎನ್ನುವುದನ್ನು ಕಾದುನೋಡಬೇಕಿದೆ. 

ಉಪಸಮರಕ್ಕಾಗಿ ಬಿಜೆಪಿಯೊಳಗೆ ಮಿನಿಸಮರ: ಟಿಕೆಟ್‌ಗಾಗಿ ತಿರಗ್ತಿದ್ದಾರೆ ಗಿರಗಿರ!

ಬೈರತಿ ಬಸವರಾಜ್‌ಗೆ ಅಡ್ಡಗಲಾಗಿದ್ದ ನಂದೀಶ್
ಹೌದು...ಬೆಂಗಳೂರಿನ ಕೆ.ಆರ್.ಪುರ ಕ್ಷೇತ್ರದ ಬೈ ಎಲೆಕ್ಷನ್ ಟಿಕೇಟ್ ಅನ್ನು ಕಾಂಗ್ರೆಸ್ ಅನರ್ಹ ಶಾಸಕ ಬೈರತಿ ಬಸವರಾಜ್ ಅವರಿಗೆ ನೀಡಲು ಬಿಜೆಪಿ ನಿರ್ಧರಿಸಿದೆ. ಆದ್ರೆ ಇದಕ್ಕೆ ನಂದೀಶ್ ರೆಡ್ಡಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ತಮಗೆ ಟಿಕೇಟ್ ಬೇಕೆಂದು ಪಟ್ಟುಹಿಡಿದಿದ್ದರು.

ಇದರಿಂದ ಬಿ.ಎಸ್.ಯಡಿಯೂರಪ್ಪ ಅವರಿಗೆ ತಲೆನೋವಾಗಿತ್ತು. ಈ ಹಿನ್ನೆಲೆ ಬಿಎಸ್ ವೈ ಬಿಎಂಟಿಸಿ ಅಧ್ಯಕ್ಷ ಹುದ್ದೆ ನೀಡಿದ್ದಾರೆ. ಒಂದು ವೇಳೆ ಈ ಹುದ್ದೆಯನ್ನು ನಂದೀಶ್ ರೆಡ್ಡಿ ಸ್ವೀಕರಿಸಿ ಸುಮ್ಮನಾದರೇ ಬೈರತಿ ಬಸವರಾಜ್ ಹಾದಿ ಸುಗಮವಾದಂತೆ. ಇಲ್ಲವಾದಲ್ಲಿ ಅದೇ ಕಲ್ಲು-ಮುಳ್ಳಿನ ಹಾದಿಯಾಗಲಿದೆ.