ಬೆಂಗಳೂರು/ಮಂಡ್ಯ, (ಡಿ.09): ಜೆಡಿಎಸ್ ಭದ್ರಕೋಟೆಯಾಗಿದ್ದ ಮಂಡ್ಯದ ಕೆ.ಆರ್.ಪೇಟೆಯಲ್ಲಿ ಇದೇ ಮೊದಲ ಬಾರಿಗೆ ಕಮಲ ಅರಳಿದೆ. ಈ ಮೂಲ ಹೊಸ ಇತಿಹಾಸ ಸೃಷ್ಟಿಸಿದೆ.

ಯಡಿಯೂರಪ್ಪರ ಇಚ್ಛೆಯಂತೆ ಕೆ.ಆರ್.ಪೇಟೆಯಲ್ಲಿ ಕಮಲ ಅರಳಿದೆ.  ಅಷ್ಟಕ್ಕೂ ಕೆ.ಆರ್.ಪೇಟೆ ಸುಲಭವಾಗಿ ಬಿಜೆಪಿಗೆ ದಕ್ಕಲಿಲ್ಲ. ಮತ ಎಣಿಕೆ ವೇಳೆ ಜೆಡಿಎಸ್ ಅಭ್ಯರ್ಥಿ ಬಿ.ಎಲ್ ದೇವರಾಜು ನೆಕ್ ಟು ನೆಕ್ ಫೈಟ್ ನೀಡಿದರು. ಅಂತಿಮವಾಗಿ ಬಿಜೆಪಿ ಗೆದ್ದು ಬೀಗಿದೆ.

ಬಪ್ಪರೇ..! ಅಪ್ಪನ ಸರ್ಕಾರ ಉಳಿವಿಗೆ ಹೆಗಲು ಕೊಟ್ಟ ಮಕ್ಕಳು, ತಂದೆಗೆ ಗೆಲುವಿನ ಉಡುಗೊರೆ

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್‌ನಿಂದ ಅನರ್ಹಗೊಂಡು ಬಿಜೆಪಿ ಸೇರಿ ಉಪಚುನಾವಣೆಗಿಳಿದಿದ್ದ, ನಾರಾಯಣಗೌಡ ಜೆಡಿಎಸ್‌ ಅಭ್ಯರ್ಥಿ ಬಿ.ಎಲ್ ದೇವರಾಜು ವಿರುದ್ಧ 9728 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಇನ್ನೂ ಈ ಗೆಲುವಿನ ಹಿಂದೆ ಬಿಎಸ್‌ ವೈ ಪುತ್ರನ ಸಾಕಷ್ಟು ಪರಿಶ್ರಮ, ಹಲವು ತಂತ್ರಗಾರಿಕೆ ಇದೆ.  ಇದರ ನಡುವೆ ಯಡಿಯೂರಪ್ಪ  ಕೊರಗಿಗೂ ಕೂಡ ಮತದಾರ ಮನ ಕರಗಿದೆ. 

ಸೊಲ್ಲೇ ಇಲ್ಲದ ಕೆಆರ್ ಪೇಟೆಯಲ್ಲಿ ಕಮಲ ಅರಳಿದ್ದೇಗೆ? ಹೊಸ ರಾಜಕೀಯ ಚಾಣಕ್ಯ ಮಾಡಿದ ಆ ಒಂದು ಕೆಲಸ! 

ತಮ್ಮ ಹುಟ್ಟೂರಲ್ಲೇ ಬಿಜೆಪಿ ಗೆದ್ದಿಲ್ಲ ಎಂಬ ಯಡಿಯೂರಪ್ಪನವರ ಕೊರಗು ಕೆ.ಆರ್​. ಪೇಟೆಯಲ್ಲಿ ಅನುಕಂಪದ ಅಲೆ ಸೃಷ್ಠಿಸಿತ್ತು. ಅದಕ್ಕೆ ಪೂರಕವಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿ, ಸಿಎಂ ಭರಪೂರ ಅನುದಾನ ಘೋಷಿಸಿದ್ದು ಬಿಜೆಪಿಗೆ ವರದಾನವಾಯಿತು. 

ಅದೆಲ್ಲಕ್ಕಿಂತ ಮುಖ್ಯವಾಗಿ ಯಡಿಯೂರಪ್ಪನವ ಪುತ್ರ ಬಿವೈ ವಿಜಯೇಂದ್ರ ಕ್ಷೇತ್ರದಲ್ಲೇ ಠೀಕಾಣಿ ಹೂಡಿ ಪ್ರಚಾರ ನಡೆಸಿ, ಮತದಾರ ಮನಗೆಲ್ಲುವಲ್ಲಿ ಯಶಸಸ್ವಿಯಾದರು.

ಕ್ಷೇತ್ರದ ಅಭಿವೃದ್ಧಿಯೇ ನನ್ನ ಧ್ಯೇಯ ಎಂಬ ನಾರಾಯಣಗೌಡರ ಹೇಳಿಕೆ ಮತದಾರರು ಕಮಲದ ಚಿಹ್ನೆಗೆ ಮತ ನೀಡುವಂತೆ ಮಾಡಿದ್ದು ವರ್ಕೌಟ್ ಆಗಿದೆ.

 ಕಮಲ ಅರಳಲು 5 ಕಾರಣ..!
1. ಹುಟ್ಟೂರಲ್ಲೇ ಬಿಜೆಪಿ ಗೆದ್ದಿಲ್ಲ ಎಂಬ ಕೊರಗು ಬಿಚ್ಚಿಟ್ಟಿದ್ದ ಸಿಎಂ
ಮೂಲತಃ ಕೆ.ಆರ್​.ಪೇಟೆ ತಾಲೂಕು ಬೂಕನಕೆರೆಯವರಾದ ಯಡಿಯೂರಪ್ಪಗೆ  ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ನನ್ನ ಹುಟ್ಟೂರಲ್ಲಿ ಒಂದು ಸ್ಥಾನವನ್ನೂ ಬಿಜೆಪಿ ಗೆದ್ದಿಲ್ಲ ಅನ್ನೋ ಕೊರಗಿತ್ತು.  ನಾರಾಯಣ ಗೌಡ ಪರ ಪ್ರಚಾರದಲ್ಲಿ ಸಿಎಂ ಇದನ್ನ ಹೇಳೀಕೊಂಡಿದ್ದರು ಕೂಡ. ಆದ್ರೆ, ಇದೀಗ ಬಿಎಸ್‌ವೈ ಕೊರಗು ಈಗ ಮುಕ್ತಿ ಕಂಡಿದೆ.

2: ಕೆ.ಆರ್.ಪೇಟೆ ಅಭಿವೃದ್ಧಿ ಭರವಸೆ ನೀಡಿದ್ದ ಯಡಿಯೂರಪ್ಪ
ತಮ್ಮ ಹುಟ್ಟೂರಲ್ಲೇ ಬಿಜೆಪಿ ಗೆದ್ದಿಲ್ಲ ಎಂಬ ಯಡಿಯೂರಪ್ಪನವರ ಕೊರಗು ಕೆ.ಆರ್​. ಪೇಟೆಯಲ್ಲಿ ಅನುಕಂಪದ ಅಲೆ ಸೃಷ್ಠಿಸಿತ್ತು. ಅದಕ್ಕೆ ಪೂರಕವಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿ, ಸಿಎಂ ಭರಪೂರ ಅನುದಾನ ಘೋಷಿಸಿರುವುದು ಬಿಜೆಪಿಗೆ ವರದಾನವಾಯಿತು.

3: ಕ್ಷೇತ್ರದಲ್ಲೇ ಠಿಕಾಣಿ ಹೂಡಿ ಪ್ರಚಾರ ನಡೆಸಿದ್ದ ಬಿಎಸ್​ವೈ ಪುತ್ರ
ಹೌದು...ಕಳೆದ 15 ದಿನಗಳಿಂದ ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಿದ್ದ ಯುವನಾಯಕ ಬಿ.ವೈ ವಿಜಯೇಂದ್ರ  ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದಾರೆ. ಕ್ಷೇತ್ರಕ್ಕೆ ಪ್ರತ್ಯೆಕ ಪ್ರಣಾಳಿಕೆ, ಯುವಕರನ್ನು ಒಗ್ಗೂಡಿಸುವುದು ಸೇರಿದಂತೆ ಹಲವು ತಂತ್ರಗಾರಿಕೆ ಮಾಡಿದ್ದರಿಂದ ಅಂತಿಮವಾಗಿ ಬಿಜೆಪಿ ಗೆದ್ದು ಬೀಗಿದೆ.

4: ಡಿಸಿ ತಮ್ಮಣ್ಣ ಕಾಮಾಟಿಪುರ ಹೇಳಿಕೆಗೆ ಮತದಾರರ ಬೇಸರ
ಜೆಡಿಎಸ್​ ಶಾಸಕ ಡಿಸಿ ತಮ್ಮಣ್ಣರ ಕಾಮಾಟಿಪುರದ ಕೀಳು ಹೇಳಿಕೆ ಜೆಡಿಎಸ್​ ಕೋಟೆಯ ಕಂಬಗಳು ಸಡಿಲಗೊಳ್ಳುವಂತೆ ಮಾಡಿದೆ. 

5: ದಳಪತಿಗಳ ಅಸಂಬದ್ಧ ಹೇಳಿಕೆಗಳು 
ಮನೆಯ ಯಜಮಾನ ಕುಮಾರಸ್ವಾಮಿ, ಪಕ್ಷದ ನಾಯಕರ ಅಸಂಬದ್ಧ ಹೇಳಿಕೆ ಬ್ರೇಕ್ ಹಾಕುವುದನ್ನು ಬಿಟ್ಟು, ಅವರ ಜತೆ ಸೇರಿ ತಾವು ಧ್ವನಿಗೂಡಿಸಿರುವುದು ಜೆಡಿಎಸ್‌ಗೆ ದೊಡ್ಡಪೆಟ್ಟು ಬಿದ್ದಂತಾಗಿದೆ.

ಈಗಾಗಲೇ ಉದ್ಧಟತನ ಹೇಳಿಕೆಯಿಂದ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲಬೇಕಾಯಿತು. ಆದರೂ ಬಿದ್ಧಿ ಕಲಿಯದ ದಳಪತಿಗಳು ಲೋಕಸಭೆ ಚುನಾವಣೆಯಲ್ಲಿನ ಚಾಳಿಯನ್ನೇ ಉಪಚುನಾವಣೆಯಲ್ಲಿ ಮುಂದುವರಿಸಿ ಮತ್ತೆ ಕೈಸುಟ್ಟು ಕೊಂಡಿದ್ದಾರೆ.

ನಾರಾಯಣಗೌಡ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದಲ್ಲದೇ, ಮುಂಬೈ ವಾಲಾ ಅಂತೆಲ್ಲ ಹಿಯಾಳಿಸಿದರು. ಇದು ಕೂಡ ಜೆಡಿಎಸ್‌ಗೆ ಹಿನ್ನಡೆಯಾಗಲು ಸಹ ಪ್ರಮುಖ ಕಾರಣವಾಗಿದೆ.