ಮೈಸೂರು [ಅ.16]: ತಾವು ರಾಜೀನಾಮೆ ನೀಡಿರುವುದಾಗಿ ಮೈಸೂರಿನ ಕೆ ಆರ್ ನಗರ ಕ್ಷೇತ್ರದ ಶಾಸಕ ಸಾ.ರಾ. ಮಹೇಶ್ ಹೇಳಿದ್ದು, ಆದರೆ ಇದೆಲ್ಲಾ ಸುಳ್ಳು ಮಾಹಿತಿಯಾಗಿದ್ದು, ಎಲ್ಲಾ ಪ್ರಚಾರಕ್ಕೆ ಮಾಡಿದ ಗಿಮಿಕ್ ಎನ್ನಲಾಗುತ್ತಿದೆ. 

"

ಸಾ.ರಾ .ಮಹೇಶ್ ರಾಜೀನಾಮೆ ಕೊಟ್ಟಿರುವುದೇ ಸುಳ್ಳು ಎನ್ನಲಾಗುತ್ತಿದ್ದು,  ಈ ಬಗ್ಗೆ ಸ್ವತಃ ಸ್ಪೀಕರ್ ಕೂ ಕೂಡ ಮಾಹಿತಿ ಇಲ್ಲ.  ಸಾ.ರಾ. ಮಹೇಶ್ ರಾಜೀನಾಮೆ ಬಗ್ಗೆ ಅಧಿಕಾರಿಗಳಿಗೂ ಮಾಹಿತಿ ಇಲ್ಲವೆಂದು ಸುವರ್ಣ ನ್ಯೂಸ್. ಕಾಮ್ ಗೆ ಸ್ಪೀಕರ್ ಕಚೇರಿ ಮೂಲಗಳು ಸ್ಪಷ್ಟನೆ ನೀಡಿವೆ. 

ಪ್ರಚಾರಕ್ಕಾಗಿ ರಾಜೀನಾಮೆ ವಿಚಾರ ತೇಲಿಬಿಟ್ಟರಾ? ಎನ್ನಲಾಗುತ್ತಿದ್ದು, ಸೆಪ್ಟೆಂಬರ್ 18 ರಂದೇ ತಾವು ರಾಜೀನಾಮೆ ನೀಡಿದ್ದಾಗಿ ತಿಳಿಸಿದ್ದು, ಆದರೂ ಕೂಡ  ಅ.10 ಮತ್ತು 11 ರಂದು ನಡೆದ ಎರಡು ದಿನಗಳ ಕಲಾಪಕ್ಕೆ ಹಾಜರಾಗಿದ್ದರು. 

ಶಾಸಕ ಸ್ಥಾನಕ್ಕೆ JDS ಶಾಸಕ ಸಾ ರಾ ಮಹೇಶ್ ರಾಜೀನಾಮೆ!?...

ರಾಜೀನಾಮೆ ನೀಡಿರುವುದಾಗಿ ಹೇಳಿರುವ ಸಾ ರಾ ಮಹೇಶ್ ನರ್ಹ ಶಾಸಕ ವಿಶ್ವನಾಥ್ ಅವರನ್ನು ಚಾಮುಂಡಿ ಬೆಟ್ಟಕ್ಕೆ ಆಹ್ವಾನಿಸಿ ಆಣೆ ಪ್ರಮಾಣದ ಬಗ್ಗೆ ಮಾತನಾಡಿದ್ದಾರೆ. ಒಟ್ನಲ್ಲಿ ಇದೆಲ್ಲವೂ ಇವರ ರಾಜಕೀಯ ಗಿಮಿಕ್ ಎಂದೇ ಹೇಳಲಾಗುತ್ತಿದೆ.