ಮೈಸೂರು [ಅ.16]: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಕೆ ಆರ್ ನಗರ ಕ್ಷೇತ್ರದ ಶಾಸಕ ಸಾ ರಾ ಮಹೇಶ್ ಇಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ. 

"

ಮೈಸೂರಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಬೇರೆಯವರು ನನ್ನ ಬಗ್ಗೆ ಅನೇಕ ಬಾರಿ ಮಾತನಾಡಿದ್ದರು. ಇವೆಲ್ಲಾ ವಿಚಾರಗಳಿಂದ ನೊಂದು ನಾನು ಶಾಸಕರನ್ನು ರಕ್ಷಿಸುವಂತೆ ಮನವಿ ಮಾಡಿಕೊಂಡಿದ್ದೆ. ಎಲ್ಲಾ ಮಾತುಗಳಿಗೆ ನೊಂದು ಸೆಪ್ಟೆಂಬರ್ 18ರಂದು ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಸ್ಪೀಕರ್ ಇಲ್ಲದ ಕಾರಣ ಕಾರ್ಯದರ್ಶಿಗೆ ರಾಜೀನಾಮೆ ಪತ್ಸರ ನೀಡಿದ್ದೇನೆ,' ಎಂದಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

'ಅಲ್ಲದೇ ಸ್ಪೀಕರ್ ಬಂದ ನಂತರ ರಾಜೀನಾಮೆ ವಾಪಸ್ ಪಡೆಯುವಂತೆ ನನ್ನ ಮನ ಒಲಿಸಿಲು ಯತ್ನಿಸಿದರು. ಆದರೆ, ನಾನು ರಾಜೀನಾಮೆ ವಾಪಸ್ ಪಡೆದಿಲ್ಲ,' ಎಂದೂ ಬಹಿರಂಗಪಡಿಸಿದ್ದಾರೆ.

ಈಗಾಗಲೇ ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಜೆಡಿಸ್ ಶಾಸಕ ವಿಶ್ವನಾಥ್ ರಾಜೀನಾಮೆ ಹಾಗೂ ಅನರ್ಹತೆಯಿಂದ  ಹುಣಸೂರು ವಿಧಾನಸಭಾ ಕ್ಷೇತ್ರ ತೆರವಾಗಿದ್ದು, ಇದೀಗ ಮೈಸೂರಿನ ಮತ್ತೊಂದು ಕ್ಷೇತ್ರ ಸಾರಾ ಮಹೇಶ್ಶಾ ರಾಜೀನಾಮೆಯಿಂದ ತೆರವಾದಂತಾಗಿದೆ. 

ಪ್ರಚಾರಕ್ಕಾಗಿ ರಾಜೀನಾಮೆ ವಿಚಾರ ತೇಲಿ ಬಿಟ್ಟರಾ ಸಾ.ರಾ.ಮಹೇಶ್?...

ಹುಣಸೂರಿಗೆ ವಿಶ್ವನಾಥ್ ಅಭ್ಯರ್ಥಿ ಅಲ್ಲ
ಇನ್ನು ರಾಜ್ಯದಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ ಉಪಚುನಾವಣೆ ಬಗ್ಗೆಯೂ ಮಾತನಾಡಿದ ಸಾ ರಾ ಮಹೇಶ್, ಹುಣಸೂರು ಕ್ಷೇತ್ರದ ಬೈ ಎಲೆಕ್ಷನ್‌ನಲ್ಲಿ‌ ವಿಶ್ವನಾಥ್ ಆಗಲಿ, ಅವರ ಕುಟುಂಬದ ಸದಸ್ಯರಾಗಲಿ ಅಭ್ಯರ್ಥಿ ಆಗೋಲ್ಲ. ಈಗಾಗಲೇ ಯಾರು ಅಭ್ಯರ್ಥಿ ಎಂದು ತೀರ್ಮಾನ ಆಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಮ್ಮುಖದಲ್ಲೇ ಮಾತುಕತೆ ಆಗಿದೆ. ಆದರೆ ವಿಶ್ವನಾಥ್ ಈ ಜಿಲ್ಲೆಯ ಉಸ್ತುವಾರಿ ಸಚಿವರಾಗುವ ಲಕ್ಷಣಗಳು ಮಾತ್ರ ದಟ್ಟವಾಗಿದೆ.  ಚುನಾವಣೆಯಲ್ಲಿ ನಿಲ್ಲುವವರು ಈ ಜಿಲ್ಲೆಯವರೂ ಅಲ್ಲ. ಗುಪ್ತಚರ ಮಾಹಿತಿ ಪ್ರಕಾರ ವಿಶ್ವನಾಥ್ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಮೂರನೇ ಸ್ಥಾನಕ್ಕೆ ಇಳಿಯುತ್ತಾರೆ, ಎಂದೂ ಎಚ್ಚರಿಸಿದ್ದಾರೆ. 

ಮೈಸೂರು ವಿಭಜನೆಗೆ ಸಾರಾ ಟೀಕೆ

ಚಾಮುಂಡಿ ಬೆಟ್ಟದಲ್ಲಿ ಪ್ರಮಾಣ ಮಾಡಲಿ

ಆಣೆ ಪ್ರಮಾಣಕ್ಕೆ ಪಂಥಾಹ್ವಾನ ವಿಚಾರದ ಬಗ್ಗೆ ಪ್ರಸ್ತಾಪಿಸಿ, ಚಾಮುಂಡಿ ಬೆಟ್ಟಕ್ಕೆ ಬರುತ್ತೇನೆ. ಅ.17ರಂದು ಬೆಳಗ್ಗೆ 9 ಗಂಟೆಗೆ ನಾನು ಬರುತ್ತೇನೆ. ನಾನು ಆಸೆ, ಆಮಿಷ, ಹಣದಾಸೆಗೆ ಬಲಿಯಾದೆನೆಂದು ವಿಶ್ವನಾಥ್ ಪ್ರಮಾಣ ಮಾಡಲಿ. ಅವರು ಪ್ರಮಾಣ ಮಾಡಿದರೆ ನಾನು ರಾಜ್ಯದ ಜನತೆಯ ಬೇಷರತ್ ಕ್ಷಮೆಯಾಚಿಸುತ್ತೇನೆ. ರಿಯಲ್ ಎಸ್ಟೇಟ್ ಹೊರತುಪಡಿಸಿ ಬೇರಾವುದೇ ಮೂಲದಿಂದ ನಾನು ಹಣ ಸಂಪಾದಿಸಿಲ್ಲ. ನನ್ನ ವೈಯುಕ್ತಿಕ ಟೀಕೆಗಳನ್ನು ಸಾಬೀತು ಮಾಡಲಿ. ಡಿವೈಎಸ್‌ಪಿ ಸುಂದರ್ ರಾಜ್ ವರ್ಗಾವಣೆಗೆ ಎಷ್ಟು ಹಣ ಪಡೆದುಕೊಂಡಿದ್ದೀರಿ ಎಂದು ಗೊತ್ತಿದೆ.  ವಿಶ್ವನಾಥ್ ಒಳ್ಳೆಯವರಲ್ಲ, ನಂಬಿಕೆಗೆ ಅರ್ಹರಲ್ಲ ಎಂದು ಜಿ.ಟಿ.ದೇವೇಗೌಡ ಹೇಳಿದ್ದರು. ಅವರನ್ನು ಮನವೊಲಿಸಿ ವಿಶ್ವನಾಥ್ ಅವರನ್ನು ಜೆಡಿಎಸ್‌ಗೆ ಕರೆತಂದೆ.‌ ಆದರೆ ಈಗ ಹುಣಸೂರಿನ ಜನತೆಗೆ ಮೋಸ ಮಾಡಿ ಹೋಗಿದ್ದೀರಿ ಎಂದು ವಾಗ್ದಾಳಿ ನಡೆಸಿದರು. 

ಗುರುವಾರ ಚಾಮುಂಡಿ ಬೆಟ್ಟಕ್ಕೆ ಬನ್ನಿ

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಕಾರ್ಯ ವೈಖರಿಗೆ ಬೇಸತ್ತು ರಾಜೀನಾಮೆ ನೀಡಿರುವ ಕೆಲವು ಶಾಸಕರ ಪೈಕಿ ಹುಣಸೂರು ಕ್ಷೇತ್ರದ ವಿಶ್ವನಾಥ್ ಸಹ ಸೇರಿದ್ದರು. ಸ್ಪೀಕರ್ ಅವರನ್ನು ಅನರ್ಹಗೊಳಿಸಿದ್ದು, ಮುಂಬುವ ಉಪ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ. ಆದರೆ, ಅದರ ಮಧ್ಯೆಯೇ ಮೈಸೂರಿನಲ್ಲಿ ಈ ರಾಜಕೀಯ ಚಟುವಟಿಕೆಗಳು ನಡೆಯುತ್ತಿದ್ದು, ಎಲ್ಲರನ್ನೂ ಆಶ್ಚರ್ಯಗೊಳಿಸಿದೆ.