* ರಮೇಶ್ ಹೊಸ ಹೊಸ ಬಾಂಬ್ ಎಸೆಯುತ್ತಿರುತ್ತಾರೆ* ಬಿಜೆಪಿಯಲ್ಲಿ 120 ಸ್ಥಾನ ಭರ್ತಿಯಾಗಿದೆ* ರಮೇಶ್ ಹಾಗೂ ಲಖನ್ ಜಾರಕಿಹೊಳಿ ಇಬ್ಬರೂ ರಾಜಕೀಯ ವ್ಯಾಪಾರಿಗಳು
ಗೋಕಾಕ(ಜ.28): ಕಾಂಗ್ರೆಸ್‌ನಿಂದ ಹದಿನಾರು ಮಂದಿಯನ್ನು ಬಿಜೆಪಿಗೆ ಕರೆದುಕೊಂಡು ಬರುವುದಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ(Satish Jarkiholi) ವ್ಯಂಗ್ಯವಾಡಿದ್ದಾರೆ. ಆ ಹದಿನಾರು ಮಂದಿಯನ್ನು ಎಲ್ಲಿ ಕೂರಿಸುತ್ತಾರೆ? ಡಿಕ್ಕಿಯಲ್ಲೋ, ಟಾಪ್ ಮೇಲೋ ಎಂದು ಕಾಲೆಳೆದಿದ್ದಾರೆ.
ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಬಿಜೆಪಿಯಲ್ಲಿ(BJP) 120 ಸ್ಥಾನ ಭರ್ತಿಯಾಗಿದೆ. ಅಲ್ಲಿ ಹೌಸ್‌ಫುಲ್ ಆಗಿದೆ. ಇನ್ನೂ ಹದಿನಾರು ಮಂದಿಯನ್ನು ಎಲ್ಲಿ ಕೂರಿಸುತ್ತಾರೆ? ರಮೇಶ್ ಜಾರಕಿಹೊಳಿ(Ramesh Jarkiholi) ಆಗಾಗ ಹೊಸ ಹೊಸ ಬಾಂಬ್ ಎಸೆಯುತ್ತಿರುತ್ತಾರೆ. ಕೆಲವು ಗಾಳಿಯಲ್ಲಿ ಹಾರುತ್ತವೆ. ಅವರು ಸುಮ್ಮನೆ ಟೈಂಪಾಸ್ ಮಾಡುತ್ತಿರುತ್ತಾರೆ. ನಾವು ಸುಮ್ಮನೆ ಕಿವಿ ಮುಚ್ಚಿಕೊಂಡು ಕೂರಬೇಕು ಅಷ್ಟೆ. ರಮೇಶ್ ಹಾಗೂ ಲಖನ್ ಜಾರಕಿಹೊಳಿ ಇಬ್ಬರೂ ರಾಜಕೀಯ ವ್ಯಾಪಾರಿಗಳು. ಕಾಂಗ್ರೆಸ್‌ಗೆ ಹೋಗುತ್ತೇವೆ ಎಂದು ಬಿಜೆಪಿಯವರಿಗೆ, ಬಿಜೆಪಿಗೆ ಹೋಗುತ್ತೇನೆ ಎಂದು ಕಾಂಗ್ರೆಸ್‌ನವರಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿರುತ್ತಾರೆ ಎಂದರು.
Mahadayi Padayatra: ಮೇಕೆದಾಟು ರೀತಿಯಲ್ಲೇ ಮಹದಾಯಿ ಪಾದಯಾತ್ರೆ: ಸತೀಶ್ ಜಾರಕಿಹೊಳಿ
ಇದೇ ವೇಳೆ, ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋದವರು ಸಂಪರ್ಕದಲ್ಲಿದ್ದಾರೆ. ಜೆಡಿಎಸ್, ಬಿಜೆಪಿಯವರು ನಮ್ಮ ಪಕ್ಷಕ್ಕೆ ಖಂಡಿತವಾಗಿ ಬರುತ್ತಾರೆ. ಈ ವಿಚಾರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿದ್ದು ನಿಜ ಎಂದು ತಿಳಿಸಿದರು ಸತೀಶ್ ಜಾರಕಿಹೊಳಿ.
ಕಾಂಗ್ರೆಸ್ ಅಭ್ಯರ್ಥಿಗಳ ಆಣೆ, ಪ್ರಮಾಣ: ಸತೀಶ್ ಜಾರಕಿಹೊಳಿ ಹೇಳಿದ್ದಿಷ್ಟು
ಬೆಳಗಾವಿ: ಗೋವಾ(Goa) ವಿಧಾನಸಭೆ ಕಾಂಗ್ರೆಸ್ ಅಭ್ಯರ್ಥಿಗಳು(Congress Candidates) ಯಾವ ರೀತಿ ಆಣೆ ಪ್ರಮಾಣ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಎರಡು ದಿನ ಗೋವಾದಲ್ಲಿ ಚುನಾವಣಾ ಪ್ರಚಾರದಲ್ಲಿ(Election Campaign) ಭಾಗಿಯಾಗುತ್ತೇನೆ. ಆಣೆ ಪ್ರಮಾಣ ಅದು ಎಷ್ಟರ ಮಟ್ಟಿಗೆ ಸರಿ ಆ ಬಗ್ಗೆ ಗೊತ್ತಿಲ್ಲ. ನಿಷ್ಠೆಯಿಂದ ಇರಬೇಕು ಅಂತಾ ಹೇಳಿರಬಹುದು ಅಷ್ಟೇ ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಗೋವಾ ವಿಧಾನಸಭೆ ಕಾಂಗ್ರೆಸ್ ಅಭ್ಯರ್ಥಿಗಳ ಆಣೆ ಪ್ರಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಜ.23 ರಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅವರು, ಕಳೆದ ಬಾರಿ ನಮ್ಮದೇ ಸರ್ಕಾರ ರಚನೆ ಮಾಡುವ ಅವಕಾಶ ಇದ್ರು ಕಳೆದುಕೊಂಡೆವು. ಈ ಬಾರಿ ಅದನ್ನೆಲ್ಲ ಗಮನದಲ್ಲಿಟ್ಟುಕೊಂಡು ಹೇಳಿರಬಹುದು. ಯಾರೂ ಪಕ್ಷಕ್ಕೆ ಹಾನಿ ಮಾಡಬಾರದು ಅಂತಾ ಹೇಳಿರಬಹುದು ಅದರಲ್ಲೇನು ತಪ್ಪಿಲ್ಲ ಅಂತ ಆಣೆ ಪ್ರಮಾಣವನ್ನ ಸಮರ್ಥಿಸಿಕೊಂಡಿದ್ದರು.
ಲೂಟಿಕೋರ ಬಿಜೆಪಿಗೆ ತಕ್ಕ ಪಾಠ ಕಲಿಸಲು ಜನ ನಿರ್ಣಯ: ಸತೀಶ್ ಜಾರಕಿಹೊಳಿ
ಗೋವಾಗೆ ಈಗಾಗಲೇ ನಮ್ಮ ಸದಸ್ಯರು ತೆರಳಿದ್ದಾರೆ. ಗ್ರೌಂಡ್ ರಿಯಾಲಿಟಿ ರಿಪೋರ್ಟ್ ಕೊಟ್ಟ ಮೇಲೆ ಚರ್ಚೆ ಮಾಡುತ್ತೇವೆ. ಅಲ್ಲಿನ ಉಸ್ತುವಾರಿ ಪಿ.ಚಿದಂಬರಂ, ದಿನೇಶ್ ಗುಂಡೂರಾವ್ ಜೊತೆ ಚರ್ಚೆ ಮಾಡಲಾಗುವುದು ಅಂತ ಸತೀಶ್ ಜಾರಕಿಹೊಳಿ ತಿಳಿಸಿದ್ದರು.
ಪಕ್ಷಾಂತರ ತಡೆಗೆ ಗೋವಾ ಕಾಂಗ್ರೆಸ್ ಆಣೆ, ಪ್ರಮಾಣ..!
ಪಣಜಿ: ಕಳೆದ 5 ವರ್ಷಗಳಲ್ಲಿ ಪಕ್ಷದ ಶಾಸಕರ ಪಕ್ಷಾಂತರ ಪರ್ವದಿಂದ ಕಂಗೆಟ್ಟಿರುವ ಕಾಂಗ್ರೆಸ್(Congress), ಈ ಬಾರಿ ಟಿಕೆಟ್ ನೀಡುವ ಹಂತದಲ್ಲೇ ಪಕ್ಷಾಂತರ ತಡೆಗೆ ಮುನ್ನೆಚ್ಚರಿಕೆ ವಹಿಸಲು ಮುಂದಾಗಿದೆ. ಇದರ ಭಾಗವಾಗಿ ವಿಧಾನಸಭಾ ಚುನಾವಣೆಗೆ(Assembly Election) ಪಕ್ಷದ ಟಿಕೆಟ್ ಪಡೆದಿರುವ 34 ಅಭ್ಯರ್ಥಿಗಳನ್ನು ಶನಿವಾರ ವಿಶೇಷ ಬಸ್ಸಿನಲ್ಲಿ ದೇವಸ್ಥಾನ(Temple), ಚರ್ಚ್(Church) ಮತ್ತು ದರ್ಗಾಗಳಿಗೆ(Dargah) ಕರೆದೊಯ್ದಿರುವ ಪಕ್ಷದ ನಾಯಕರು, ಗೆದ್ದ ಮೇಲೆ ಪಕ್ಷಾಂತರ(Defection) ಮಾಡುವುದಿಲ್ಲ ಎಂದು ಅವರೆಲ್ಲರಿಂದ ಆಣೆ- ಪ್ರಮಾಣ ಮಾಡಿಸಿಕೊಂಡಿದ್ದಾರೆ.
ಎಲ್ಲಾ 34 ಅಭ್ಯರ್ಥಿಗಳನ್ನು ಪಣಜಿಯ(Panajim) ಮಹಾಲಕ್ಷ್ಮೀ ದೇವಾಲಯ, ಬಂಬೋಲಿಮ್‌ನ ಚರ್ಚ್ ಮತ್ತು ಪಣಜಿ ಸಮೀಪದ ಬೇಟಿಂ ಎಂಬ ಹಳ್ಳಿಯ ದರ್ಗಾಕ್ಕೆ ಕರೆದೊಯ್ದು ‘ಚುನಾವಣೆಯಲ್ಲಿ ಗೆದ್ದ ಬಳಿಕವೂ ಹಣ, ಅಧಿಕಾರ ಸೇರಿದಂತೆ ಯಾವುದೇ ಕಾರಣಕ್ಕೂ ಪಕ್ಷಾಂತರ ಮಾಡುವುದಿಲ್ಲ’ ಎಂದು ಪ್ರಮಾಣ ಮಾಡಿಸಿಕೊಳ್ಳಲಾಗಿದೆ. ಈ ಕುರಿತ ಫೋಟೋ ಮತ್ತು ವಿಡಿಯೋಗಳನ್ನು ಕಾಂಗ್ರೆಸ್ ಭಾನುವಾರ ಬಹಿರಂಗಪಡಿಸಿದೆ. ಶಾಸಕರ ಈ ಪ್ರಮಾಣದ ವೇಳೆ ರಾಜ್ಯದಲ್ಲಿ(Goa) ಪಕ್ಷದ ಉಸ್ತುವಾರಿಯಾಗಿರುವ ಪಿ.ಚಿದಂಬರಂ(P Chidambaram) ಕೂಡ ಉಪಸ್ಥಿತರಿದ್ದರು.
