Asianet Suvarna News Asianet Suvarna News

Mahadayi Padayatra: ಮೇಕೆದಾಟು ರೀತಿಯಲ್ಲೇ ಮಹದಾಯಿ ಪಾದಯಾತ್ರೆ: ಸತೀಶ್‌ ಜಾರಕಿಹೊಳಿ

*   ಕಾಂಗ್ರೆಸ್‌ ನಿರ್ಧಾರ: ಸತೀಶ್‌ ಜಾರಕಿಹೊಳಿ
*   ನರಗುಂದದಿಂದ ಕಣಕುಂಬಿಯವರೆಗೆ ನಡಿಗೆ
*   ಸಿದ್ದರಾಮಯ್ಯಗೆ ಮಹದಾಯಿ ನೆನಪಾಗಲಿಲ್ಲವೇ?
 

Congress Planned to be Held Mahadayi Padayatra Says Satish Jarkiholi grg
Author
Bengaluru, First Published Jan 19, 2022, 4:30 AM IST

ಬೆಳಗಾವಿ(ಜ.19): ಮೇಕೆದಾಟು(Mekedatu) ಹೋರಾಟದ ರೀತಿಯಲ್ಲೇ ಇದೀಗ ಕಾಂಗ್ರೆಸ್‌(Congress) ಮಹದಾಯಿ ಯೋಜನೆ(Mahadayi Project) ಜಾರಿಗಾಗಿಯೂ ಪಾದಯಾತ್ರೆ(Padayatra) ಮಾಡಲು ಯೋಜನೆ ರೂಪಿಸಿದೆ. ಕೋವಿಡ್‌ ಕಡಿಮೆಯಾದ ಬೆನ್ನಲ್ಲೇ ಮೇಕೆದಾಟು ಹೋರಾಟದ ಮಾದರಿಯಲ್ಲಿ ಮಹದಾಯಿಗಾಗಿಯೂ ಪಾದಯಾತ್ರೆ ನಡೆಸಲು ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ(Satish Jarkiholi) ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಮಹದಾಯಿ ಹೋರಾಟವನ್ನು ಎಲ್ಲಿಂದ ಆರಂಭ ಮಾಡಬೇಕು ಎಂಬುವುದನ್ನು ಪಕ್ಷದ ನಾಯಕರೊಂದಿಗೆ ಚರ್ಚಿಸಿ, ರೂಪುರೇಷೆ ತಯಾರಿಸಿ ನಂತರ ನಿರ್ಧಾರ ಕೈಗೊಳ್ಳಲಾಗುವುದು. ಮೇಕೆದಾಟು ಯೋಜನೆ ಸಂಬಂಧ ಕಾಂಗ್ರೆಸ್‌ ವತಿಯಿಂದ ಈಗಾಗಲೇ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆಯಲಾಗಿದೆ. ಮೇಕೆದಾಟು ಹೋರಾಟ ಅರ್ಧಕ್ಕೆ ನಿಂತಿಲ್ಲ, ಹೋರಾಟ ಯಶಸ್ವಿಯಾಗಿದೆ ಎಂದರು.
ಹಲವು ದಶಕಗಳಿಂದ ನನೆಗುದಿಗೆ ಬಿದ್ದಿರುವ ಮಹದಾಯಿ ಯೋಜನೆಗಾಗಿ ನರಗುಂದದಿಂದ(Nargund) ಮಹದಾಯಿ ಉಗಮ ಸ್ಥಾನವಾದ ಕಣಕುಂಬಿ ವರೆಗೆ ಪಾದಯಾತ್ರೆ ನಡೆಸಲು ಕಾಂಗ್ರೆಸ್‌ ಯೋಜನೆ ರೂಪಿಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಮುಂದಿನ ಚುನಾವಣೆಯನ್ನು(Election) ಗಮನದಲ್ಲಿಟ್ಟುಕೊಂಡು ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕೆ ಹೊಸ ವರ್ಚಸ್ಸು ನೀಡುವ ಉದ್ದೇಶ ಕಾಂಗ್ರೆಸ್‌ಗಿದೆ.

Children Death:ಬೆಳಗಾವಿ, ಚುಚ್ಚುಮದ್ದು ಪಡೆದ ಮಕ್ಕಳ ಸಾವಿನ ಸಮಗ್ರ ವರದಿ ಕೊಡಿ, ಬೊಮ್ಮಾಯಿ ಕಟ್ಟಪ್ಪಣೆ

ಏಕೆ ಈ ಹೋರಾಟ?

ಗೋವಾದ(Goa) ತಕರಾರಿಗೆ ಸೊಪ್ಪುಹಾಕದೆ ಮಹದಾಯಿ ಯೋಜನೆ ಜಾರಿಗೊಳಿಸುವಂತೆ ಒತ್ತಡ ಹೇರುವುದು, ತನ್ಮೂಲಕ ಉತ್ತರ ಕರ್ನಾಟಕದಲ್ಲಿ(North Karnataka) ಪಕ್ಷಕ್ಕೆ ವರ್ಚಸ್ಸು ನೀಡಲು ಈ ಯಾತ್ರೆ ನಡೆಸುವುದಕ್ಕೆ ಕಾಂಗ್ರೆಸ್‌ ಮುಂದಾಗಿದೆ.

ಸಿದ್ದರಾಮಯ್ಯಗೆ ಮಹದಾಯಿ ನೆನಪಾಗಲಿಲ್ಲವೇ?

ಕೆರೂರ: ಮೇಕೆದಾಟುವಿಗಾಗಿ ನಮ್ಮ ಜಲ ನಮ್ಮ ನೆಲ ಸ್ಲೋಗನ್‌ ಇಟ್ಟುಕೊಂಡು ಅದರ ಅನುಷ್ಠಾನಕ್ಕಾಗಿ ಪಾದಯಾತ್ರೆ ಕೈಗೊಂಡ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ(Siddaramaiah) ಉತ್ತರ ಕರ್ನಾಟಕ ಅದರಲ್ಲೂ ತಮ್ಮ ಸ್ವಕ್ಷೇತ್ರ ಬಾದಾಮಿಗೆ(Badami) ಉಸಿರಾಗಬೇಕಿದ್ದ ಮಹದಾಯಿ ಯೋಜನೆಗೆ ಹೋರಾಟ ಮಾಡದಿರುವದು ಯಾವ ನ್ಯಾಯ? ಎಂಬ ಪ್ರಶ್ನೆಗೆ ಸಿದ್ದರಾಮಯ್ಯ ತಮ್ಮ ಬದ್ಧತೆ ಕುರಿತು ಉತ್ತರಿಸಬೇಕಿದೆ ಎಂದು ಪಟ್ಟಣದ ಸಮಾಜ ಸೇವಕ ಡಿ.ಡಿ. ಬಂಡಿವಡ್ಡರ ಒತ್ತಾಯಿಸಿದ್ದಾರೆ.

Rubella Vaccine ಪಡೆದಿದ್ದ 3 ಮಕ್ಕಳ ನಿಗೂಢ ಸಾವು: ತನಿಖೆಗೆ ಆದೇಶ!

ತಮಗೆ ರಾಜಕೀಯ ಪುನರ್ಜನ್ಮ ನೀಡಿದ ಬಾದಾಮಿ ಕ್ಷೇತ್ರದತ್ತೊಮ್ಮೆ ಹೊರಳಿ ನೋಡಬೇಕಾಗಿದೆ. ಬಹುಪಾಲು ಒಣಬೇಸಾಯವನ್ನೇ ನಂಬಿದ ರೈತರು ಕುಡಿಯುವ ನೀರಿಗಾಗಿ9Irrigation) ಪರಿತಪಿಸುತ್ತಿರುವ ನಾಗರಿಕರು ತಮ್ಮನ್ನು ನಂಬಿ ಶಾಸಕರನ್ನಾಗಿ ಪಡೆದಿದ್ದಾರೆ. ಬಾದಾಮಿ ಜನರಿಗೆ ಕಳಸಾ ಬಂಡೂರಿ(Kalasa Banduri) ನಾಲೆಯಿಂದ ಮಹದಾಯಿ ನದಿ ನೀರು ಹರಿದು ಬಂದರೆ ಕೃಷಿ ಹಾಗೂ ಕುಡಿಯುವ ನೀರಿನ ಹಾಹಾಕಾರ ತಪ್ಪುತ್ತದೆ. ಆ ಯೋಜನೆ ಬಹು ಅಗತ್ಯವಿರುವದು ತಮ್ಮ ಗಮನಕ್ಕಿದ್ದರೂ ಅದರ ಬಗ್ಗೆ ಕಾಳಜಿ ತೋರದಿರುವದು ನಾಗರಿಕರನ್ನು ಧೃತಿಗೆಡಿಸಿದೆ. ಅದರ ಅನುಷ್ಠಾನಕ್ಕೆ ತಾವು ಹೋರಾಡಿದಾಗ ಮಾತ್ರ ಬಾದಾಮಿ ಜನರ ಋುಣ ತೀರಿಸಿದ ನೆಮ್ಮದಿ ನಿಮಗೂ ದೊರೆಯುತ್ತದೆ. ನಿಮ್ಮನ್ನು ಗೆಲ್ಲಿಸಿ ಕಳಿಸಿದ್ದಕ್ಕೆ ಸಾರ್ಥಕ ಬದುಕು ನಮ್ಮದಾಯಿತು ಎಂದು ಕ್ಷೇತ್ರದ ಜನ ಹಾಡಿ ಹೊಗಳುತ್ತಾರೆ. ಜೊತೆಗೆ ನಮ್ಮ ಜಲ ನಮ್ಮ ನೆಲ ಸ್ಲೋಗನ್ನಿಗೆ ಒಂದು ಬೆಲೆ ಬರುತ್ತದೆ ಎಂದು ತಿಳಿಸಿದ್ದಾರೆ.

ವಿರೋಧ ಪಕ್ಷದ ನಾಯಕರಾದ ತಾವು ತಮ್ಮ ಅವಧಿಯಲ್ಲಿ ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸಿ ಮಹದಾಯಿ ಯೋಜನೆ ಕಾಮಗಾರಿಗೆ ಚಾಲನೆ ದೊರೆಯುವಂತೆ ಮಾಡಿದಾಗ ಅಖಂಡ ಕರ್ನಾಟಕದ ಜಲ ನೆಲ ಸಮೃದ್ಧಿಯಾಗುತ್ತದೆ. ಶೀಘ್ರ ಸರ್ಕಾರದಿಂದ ಲಿಖಿತ ರೂಪದ ಉತ್ತರ ಪಡೆದು ಪ್ರಕಟಣೆ ನೀಡಿದಲ್ಲಿ ನಿಜವಾದ ಜನಪರ ಹೋರಾಟದ ನಾಯಕರು ನೀವೆಂಬ ಮಾತುಗಳು ಜನರ ಬಾಯಲ್ಲಿ ಕೇಳಿ ಬರುತ್ತವೆ. ಸಿದ್ದರಾಮಯ್ಯ ಮನಸ್ಸು ಮಾಡಿದರೆ ಏನೆಲ್ಲಾ ಸಾಧ್ಯವೆಂಬ ಜನಪರ ಮಾತುಗಳು ಸತ್ಯಕ್ಕೆ ಹತ್ತಿರವೆಂಬ ಮಾತು ಜನಜನಿತವಾಗಲಿದೆ ಎಂದರು.
 

Follow Us:
Download App:
  • android
  • ios