ಯುಪಿಯಲ್ಲಿ ಒಳ್ಳೆ ಕೆಲಸ ಮಾಡಿದ್ರೆ ಕಮ್ಮಿ ಸೀಟ್ ಯಾಕೆ ಬಂದ್ವು?: ಮೋದಿಗೆ ಸಲಿಂ ಅಹ್ಮದ್ ಪ್ರಶ್ನೆ
* ಕಾಂಗ್ರೆಸ್ ಪಕ್ಷಕ್ಕೆ ನೂರು ವರ್ಷಗಳ ಇತಿಹಾಸವಿದೆ
* ಬಿಜೆಪಿ ಪಕ್ಷದ ಗೆಲವು ಅಲ್ಲ, ಇವಿಯಂ ಮಶಿನ್‌ನಿಂದ ಇವರ ಗೆಲುವು
* ನಮ್ಮ ಹೋರಾಟ ಬಡವರ ಪರ ಕೆಲಸ ಮಾಡೋದು
ಧಾರವಾಡ(ಮಾ.12): ನಮ್ಮ ತಪ್ಪಿನಿಂದ ಪಂಜಾಬ್‌ನಲ್ಲಿ(Punjab) ಸೋತಿದ್ದೇವೆ. ಸ್ವಯಂ ಪ್ರೇರಿತ ಅಪರಾಧಗಳಿಂದ ನಾವು ಅಧಿಕಾರ ಕಳೆದುಕೊಂಡಿದ್ದೇವೆ. ಉತ್ತರ ಪ್ರದೇಶದಲ್ಲಿ(Uttar Pradesh) ಕಳೆದ ಬಾರಿಗಿಂತ ಬಿಜೆಪಿಗೆ 57 ಸೀಟುಗಳು ಕಡಿಮೆ ಬಂದಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಉತ್ತರ ಕೊಡಬೇಕು ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲಿಂ ಅಹ್ಮದ್(Saleem Ahmed) ಆಗ್ರಹಿಸಿದ್ದಾರೆ.
ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್(Congress) ಪಕ್ಷಕ್ಕೆ ನೂರು ವರ್ಷಗಳ ಇತಿಹಾಸವಿದೆ, ಬಿಜೆಪಿ(BJP) ಪಕ್ಷದ ಗೆಲವು ಅಲ್ಲ, ಇವಿಯಂ(EVM) ಮಶಿನ್‌ನಿಂದ ಇವರ ಗೆಲುವಾಗಿದೆ ಅಂತ ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಹೇಳಿದ್ದಾರೆ. ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ(Election) ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಪಂಚರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರಲಿಲ್ಲ. ನಮ್ಮ ಹೋರಾಟ ಅಧಿಕಾರಕ್ಕೆ ಅಲ್ಲ, ನಮ್ಮ ಹೋರಾಟ ಬಡವರ ಪರ ಕೆಲಸ ಮಾಡೋದು. ಜನರು ನಮ್ಮ ಸರಕಾರದಲ್ಲಾದ ಯೋಜನೆಗಳನ್ನ ನೆನಸಿಕೊಳ್ಳುತ್ತಿದ್ದಾರೆ. ಚುನಾವಣೆಗೆ ಒಂದು ವರ್ಷ ಇದೆ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬೇಧ ಭಾವ ಇಲ್ಲ. ಪಕ್ಷದಲ್ಲಿ ಅಲ್ಪ ಸಂಖ್ಯಾತರಿರಿಗೆ ಅನ್ಯಾಯ ಆಗಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.
Karnataka Politics: ಬಿಜೆಪಿ ಸರ್ಕಾರದ ಬಗ್ಗೆ ಜನತೆ ವಿಶ್ವಾಸ ಮಾಯ: ಸಲೀಂ ಅಹ್ಮದ್
ಯುಪಿಯಲ್ಲಿ ಒಳ್ಳೆಯ ಕೆಲಸ ಮಾಡಿದ್ರೆ ಯಾಕೆ 57 ಸೀಟು ಕಡಿಮೆಯಾಯ್ತು?. ರಾಹುಲ್ ಗಾಂಧಿ(Rahul Gandhi) ಅವರ ಜೊತೆ ಈಗಾಗಲೇ ಮಾತನಾಡಲಾಗಿದೆ. ಚುನಾವಣೆಗೆ 6 ತಿಂಗಳ ಮೊದಲೇ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗುತ್ತದೆ. 2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ, ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ
ದೆಹಲಿಯ ಕೆಂಪುಕೋಟೆಯ ಮೇಲೆ ಭಾಗವಾ ಧ್ವಜವನ್ನ ಹಾರಿಸೋ ಈಶ್ವರಪ್ಪ(KS Eshwarappa) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಲಿಂ ಅಹ್ಮದ್, ಈಶ್ವರಪ್ಪ ಅವರ ಮೇಲೆ ದೇಶದ್ರೋಹಿ ಕೇಸ್ ಹಾಕಬೇಕು ಎಂದು ಒತ್ತಾಯ ಮಾಡಿದ್ದೇವೆ. ದಪ್ಪ ಚರ್ಮದ ಸರಕಾರ ಏನು ಕ್ರಮವನ್ನ ತಗೋಲಿಲ್ಲ. ಸಿದ್ಧಾಂತದ ಬಗ್ಗೆ ಮಾತನಾಡೋ ಪಕ್ಷ ಇದೆನಾ?. ಸಿಎಂ ಬೊಮ್ಮಾಯಿ ಅವರ ಧೈರ್ಯ ಇದೆನಾ?. ಸೋನಿಯಾ ಗಾಂಧಿ ಅವರು ಪ್ರಧಾನಮಂತ್ರಿ ಆಗಬಹುದಿತ್ತು. ಅವರು ಅಧಿಕಾರದ ಆಸೆ ಇಲ್ಲ ಸೋನಿಯಾ ಅವರು ಮನಮೋಹನ್ ಸಿಂಗ್ ಅವರನ್ನ ಪ್ರಧಾನಿ ಮಾಡಿದ್ದರು. ನಾನು ನಮ್ಮ ಕ್ಷೇತ್ರದ ಜನರ ಬಗ್ಗೆ ಕೆಲಸ ಮಾಡೋದು ಅಂತ ತಿಳಿಸಿದ್ದಾರೆ.
Karnataka Politics: ಮೋದಿ ಮನ್ ಕಿ ಬಾತ್ ಕೈಬಿಟ್ಟು ಜನರ ಸಂಕಷ್ಟಗಳನ್ನ ಆಲಿಸಬೇಕು: ಸಲೀಂ ಅಹ್ಮದ್
ಅವಧಿಗೆ ಮುನ್ನವೇ ರಾಜ್ಯದಲ್ಲಿ ಚುನಾವಣೆ
ಅವಧಿಗೆ ಮುನ್ನವೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶನಿವಾರ) ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿ ಸಿದ್ದರಾಮಯ್ಯ ಅವರು, ನನಗೇನು ಹಾಗೆ ಅನ್ನಿಸಲ್ಲಾ. ಚುನಾವಣೆ ಬಂದ್ರೆ ನಾವು ತಯಾರಿದ್ದೇವೆ. ಜಿಲ್ಲಾ ಪಂಚಾಯತ ಚುನಾವಣೆನೇ ಮಾಡದವರು, ವಿಧಾನಸಭೆ ಚುನಾವಣೆ ಮಾಡ್ತಾರಾ?. ನನಗಿರೋ ಮಾಹಿತಿ ಪ್ರಕಾರ ಬಿಜೆಪಿ ಅವಧಿಗೂ ಮುನ್ನ ಚುನಾವಣೆಗೆ ಹೋಗಲ್ಲ ಅಂತ ತಿಳಿಸಿದ್ದಾರೆ.
ಸಿದ್ದರಾಮಯ್ಯರ ಹೆಸರನ್ನು ಭಾರತ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಬೇಕು ಅನ್ನೋ ಕುಮಾರಸ್ವಾಮಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಈಗಲ್‌ಟನ್ ರೆಸಾರ್ಟ್‌ಗೆ ದಂಡ ಹಾಕಿದ್ದಕ್ಕೆ ಕುಮಾರಸ್ವಾಮಿ ಹಾಗೆ ಮಾತನಾಡುತ್ತಿದ್ದಾರೆ. ಕೋರ್ಟ್ ಕೂಡ ನಮ್ಮ ತೀರ್ಮಾನವನ್ನ ಎತ್ತಿ ಹಿಡಿದಿದೆ. ಸ್ಕೇರ್ ಪಿಟ್ ಲೆಕ್ಕದಲ್ಲಿ 982 ಕೋಟಿ ಆಗಿತ್ತು. ಕುಮಾರಸ್ವಾಮಿ ಈಗೇಕೆ ಬ್ಯಾಟಿಂಗ್ ಮಾಡ್ತಿದ್ದಾರೆ?. ಕುಮಾರಸ್ವಾಮಿ ಅಲ್ಲಾ, ಯಾರು ಟಾರ್ಗೆಟ್ ಮಾಡಿದ್ರೂ ನಾನು ಹೆದರಲ್ಲ. ನನ್ನ ಕಂಡ್ರೆ ಅವರಿಗೆ ಭಯ, ಹೀಗಾಗಿ ನನ್ನ ವಿರುದ್ಧ ಮಾತನಾಡುತ್ತಾರೆ ಅಂತ ಹೇಳಿದ್ದಾರೆ.