Asianet Suvarna News Asianet Suvarna News

Karnataka Politics: ಬಿಜೆಪಿ ಸರ್ಕಾರದ ಬಗ್ಗೆ ಜನತೆ ವಿಶ್ವಾಸ ಮಾಯ: ಸಲೀಂ ಅಹ್ಮದ್‌

*   ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಿದ ಜನತೆ
*   ಸರ್ಕಾರ ಪಲಾಯನ ಮಾಡದೇ ಶೀಘ್ರದಲ್ಲಿ ಜಿಪಂ, ತಾಪಂ ಚುನಾವಣೆ ನಡೆಸಬೇಕು
*   ಬೆಲೆಯೇರಿಕೆಯಿಂದ ಜನತೆ ತತ್ತರಿಸಿದ್ದರೂ ಸ್ಪಂದಿಸದ ಸರ್ಕಾರ 
 

People Lose Confidence in BJP Government Says Congress MLC Saleem Ahmed grg
Author
Bengaluru, First Published Jan 2, 2022, 11:35 AM IST

ಹಾವೇರಿ(ಜ.02): ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜನ ಕಾಂಗ್ರೆಸ್‌(Congress) ಬೆಂಬಲಿಸುವ ಮೂಲಕ ಬಿಜೆಪಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ. ಕೇಂದ್ರ ಮತ್ತು ರಾಜ್ಯಸರ್ಕಾರಗಳ ಜನವಿರೋಧಿ, ದುರಾಡಳಿತಕ್ಕೆ ಜನರು ಕೊಟ್ಟಿರುವ ಸಂದೇಶವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಸಲೀಂ ಅಹ್ಮದ್‌(Saleem Ahmed) ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ(BJP) ಆಡಳಿತದಿಂದ ಜನತೆ ಭ್ರಮನಿರಸಗೊಂಡಿದ್ದಾರೆ. ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹೆಚ್ಚು ಕಡೆ ಕಾಂಗ್ರೆಸ್‌ ಗೆದ್ದಿದೆ. ಪಕ್ಷಕ್ಕೆ ಶೇ.42ರಷ್ಟು ಮತ ಬಿದ್ದಿದ್ದರೆ, ಬಿಜೆಪಿಗೆ(BJP) ಶೇ.37ರಷ್ಟು ಮತ ಬಿದ್ದಿದೆ. ಸರ್ಕಾರದ(Government of Karnaytaka) ವಿರುದ್ಧ ಜನ ವಿಶ್ವಾಸ ಕಳೆದುಕೊಂಡಿರುವುದು ಇದರಿಂದಲೇ ಗೊತ್ತಾಗುತ್ತದೆ. ಸರ್ಕಾರ ಪಲಾಯನ ಮಾಡದೇ ಶೀಘ್ರದಲ್ಲಿ ಜಿಪಂ, ತಾಪಂ ಚುನಾವಣೆ ನಡೆಸಬೇಕು. ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ ಜಯಭೇರಿ ಮುಂದುವರಿಯಲಿದೆ. 2023ರ ಚುನಾವಣೆಯಲ್ಲಿ(Karnataka Assembly Election) ಪಕ್ಷ 150ಕ್ಕೂ ಹೆಚ್ಚು ಸೀಟು ಗೆದ್ದು, ಮತ್ತೆ ಅಧಿಕಾರ ನಡೆಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Karnataka Politics: 'ಬಿಜೆಪಿಯಲ್ಲಿ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ತಾಂಡವ'

ರಾಜ್ಯ ಸರ್ಕಾರ ಭ್ರಷ್ಟಾಚಾರ(Corruption) ತಡೆಯಲು ಸಂಪೂರ್ಣ ವಿಫಲವಾಗಿದೆ. 40 ಪರ್ಸಂಟ್‌ ಕಮಿಷನ್‌ ಬಗ್ಗೆ ಗುತ್ತಿಗೆದಾರರೇ ಪ್ರಧಾನಿಗೆ ದೂರು ನೀಡಿರುವುದು ಇತಿಹಾಸದಲ್ಲೇ ಮೊದಲು. ನ ಖಾವೂಂಗಾ ಎಂದು ಹೇಳುತ್ತಿದ್ದ ಪ್ರಧಾನಿಗಳು ಈ ಬಗ್ಗೆ ತನಿಖೆ ನಡೆಸಿಲ್ಲ. ಸಚಿವ ಭೈರತಿ ಬಸವರಾಜ(Byrathi Basavaraja) ಅವರ ಭೂಹಗರಣದ ಬಗ್ಗೆ ತನಿಖೆ ಕೈಗೊಂಡಿಲ್ಲ. ಬೆಲೆಯೇರಿಕೆಯಿಂದ ಜನತೆ ತತ್ತರಿಸಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಇವೆಲ್ಲವನ್ನೂ ಜನರ ಮುಂದಿಟ್ಟು ಈ ವರ್ಷದುದ್ದಕ್ಕೂ ಹೋರಾಟ ನಡೆಸಿ, ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಜತೆಗೆ ಸಂಘಟನೆಗೂ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.

ಮೇಕೆದಾಟು ಯೋಜನೆ(Mekedatu Project) ಜಾರಿಗೆ ಒತ್ತಾಯಿಸಿ ಇದೇ ಜ. 9ರಿಂದ 19ರ ವರೆಗೆ ಮೇಕೆದಾಟುವಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ(Padayatra) ಮಾಡಲಿದ್ದೇವೆ. ಇದಕ್ಕೆ ಪಕ್ಷಾತೀತವಾಗಿ ಜನರಿಂದ ಬೆಂಬಲ ವ್ಯಕ್ತವಾಗುತ್ತಿದೆ. ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಮತಾಂತರ ನಿಷೇಧ ಕಾಯ್ದೆ(Anti Conversion Bill), ದೇವಸ್ಥಾನಗಳಿಗೆ ಸ್ವಾಯತ್ತತೆ ಇತ್ಯಾದಿ ವಿಷಯ ತೆಗೆಯುತ್ತಿದೆ. ಇವೆಲ್ಲವನ್ನು ಬಿಟ್ಟು ಮೊದಲು ಜನರ ಸಂಕಷ್ಟಕ್ಕೆ ಸ್ಪಂದಿಸಿ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದರತ್ತ ಸರ್ಕಾರ ಗಮನ ಕೊಡಬೇಕು ಎಂದು ಒತ್ತಾಯಿಸಿದರು.

ಯಾರೂ ಊಹೆ ಮಾಡದಷ್ಟು ಜನರು ಕಾಂಗ್ರೆಸ್‌ಗೆ ಬರಲು ಸಿದ್ಧರಾಗಿದ್ದಾರೆ. ಬಿಜೆಪಿ, ಜೆಡಿಎಸ್‌ನಿಂದ(JDS) ಬರಲು ಅನೇಕರು ತಯಾರಾಗಿದ್ದಾರೆ. ಆದರೆ, ಏಕಾಏಕಿಯಾಗಿ ಯಾರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಅರ್ಜಿ ಸಲ್ಲಿಸಿದರೆ ಅಲ್ಲಂ ವೀರಭದ್ರಪ್ಪ ನೇತೃತ್ವದ ಕಮಿಟಿ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಮಾಜಿ ಸಚಿವ ರುದ್ರಪ್ಪ ಲಮಾಣಿ, ಪ್ರಮುಖರಾದ ನಾಗರಾಜ ಛಬ್ಬಿ, ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಡಿ. ಬಸವರಾಜು, ಡಾ. ಸಂಜಯ ಡಾಂಗೆ ಇತರರು ಇದ್ದರು.

Basavaraj Bommai: 2 ತಿಂಗ್ಳಲ್ಲಿ ಬಸವರಾಜ ಬೊಮ್ಮಾಯಿಗೆ 3 ಶಾಕ್

ಮೋದಿ ಮನ್‌ ಕಿ ಬಾತ್‌ ಕೈಬಿಟ್ಟು ಜನರ ಸಂಕಷ್ಟಗಳನ್ನ ಆಲಿಸಬೇಕು: ಸಲೀಂ ಅಹ್ಮದ್‌

ಹಾನಗಲ್ಲ: ವಿಧಾನ ಪರಿಷತ್‌ ಚುನಾವಣೆಯಲ್ಲಿನ(Vidhan Parishat Election) ಗೆಲುವು ಕಾಂಗ್ರೆಸ್‌(Congress) ಪಕ್ಷದ ಸಿದ್ಧಾಂತದ, ವಿಚಾರಧಾರೆಯ ಗೆಲುವಾಗಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಪಂಚಾಯಿತಿ ವ್ಯವಸ್ಥೆಗೆ ಶಕ್ತಿ ತುಂಬಿ ಗ್ರಾಮೀಣಾಭಿವೃದ್ಧಿಗೆ ಶ್ರಮಿಸುತ್ತದೆ ಎಂದು ವಿಧಾನ ಪರಿಷತ್‌ ಸದಸ್ಯ ಸಲೀಂ ಅಹ್ಮದ(Saleem Ahmed) ಹೇಳಿದ್ದರು

ಡಿ.19 ರಂದು ಹಾನಗಲ್ಲಿನ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಅವರು, ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡುತ್ತಿಲ್ಲ. ಗ್ರಾಪಂಗಳಿಗೆ ಯಾವುದೇ ಅಭಿವೃದ್ಧಿ ಅನುದಾನ ನೀಡುತ್ತಿಲ್ಲ. ಸದಸ್ಯರ ಗೌರವಧನ ಕೂಡ ಬಿಡುಗಡೆ ಮಾಡಿಲ್ಲ. ಹೀಗಾಗಿ ಬಿಜೆಪಿ ಸರ್ಕಾರದ(BJP Government) ಬಗ್ಗೆ ಜನ ವಿಶ್ವಾಸ ಕಳೆದುಕೊಂಡಿದ್ದು, ಕಾಂಗ್ರೆಸ್‌ ಆಯ್ಕೆ ಮಾಡುವ ಮೂಲಕ ಬಿಜೆಪಿಗೆ(BJP) ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದು ಹೇಳಿದ್ದರು. 
 

Follow Us:
Download App:
  • android
  • ios