Asianet Suvarna News Asianet Suvarna News

ಪ್ರಜಾಪ್ರಭುತ್ವದ ಉಳಿವಿಗಾಗಿ ಉತ್ತಮ ಅಭ್ಯರ್ಥಿ ಗೆಲ್ಲಿಸಿ: ಕಾಂಗ್ರೆಸ್‌ ನಾಯಕ

ಜಾತ್ಯಾತೀತತೆ ಹಾಗೂ ವಿವಿಧತೆಯಲ್ಲಿ ಏಕತೆ ಗುಣದಿಂದ ಜಗತ್ತಿನಾದ್ಯಂತ ಗುರುತಿಸಿಕೊಂಡಿರುವ ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ| ದೇಶದ ಕಟ್ಟಕಡೆಯ ಪ್ರಜೆಯೂ ನಿರ್ಭೀತಿಯಿಂದ ಬದುಕು ಸಾಗಿಸಬೇಕಾದರೆ ಇಂದಿನ ಕೆಟ್ಟಪರಿಸ್ಥಿತಿ ನಾವು ಹೊರಬರಬೇಕು| ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರವೀಣ್‌ ಪೀಟರ್‌ ಪರ ಸಲೀಂ ಅಹಮ್ಮದ್‌ ಪ್ರಚಾರ| 

KPCC Working President Saleem Ahmad  Talks Over Campaign in MLC Election grg
Author
Bengaluru, First Published Oct 19, 2020, 10:00 AM IST
  • Facebook
  • Twitter
  • Whatsapp

ಬೆಂಗಳೂರು(ಅ.19):  ದೇಶದ ಜೀವಾಳವಾದ ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಸಂದರ್ಭದಲ್ಲಿ ಉತ್ತಮ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್‌ ಹೇಳಿದರು.

ಬಸವನಗುಡಿ ಕ್ಷೇತ್ರದಲ್ಲಿ ಭಾನುವಾರ ವಿಧಾನ ಪರಿಷತ್‌ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರವೀಣ್‌ ಪೀಟರ್‌ ಅವರ ಪರವಾಗಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜಾತ್ಯಾತೀತತೆ ಹಾಗೂ ವಿವಿಧತೆಯಲ್ಲಿ ಏಕತೆ ಗುಣದಿಂದ ಜಗತ್ತಿನಾದ್ಯಂತ ಗುರುತಿಸಿಕೊಂಡಿರುವ ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ದೇಶದ ಕಟ್ಟಕಡೆಯ ಪ್ರಜೆಯೂ ನಿರ್ಭೀತಿಯಿಂದ ಬದುಕು ಸಾಗಿಸಬೇಕಾದರೆ ಇಂದಿನ ಕೆಟ್ಟಪರಿಸ್ಥಿತಿ ನಾವು ಹೊರಬರಬೇಕು. ವಿದ್ಯಾವಂತರು ಸಂಘಟಿತರಾಗಿ ದೇಶದ ಭವಿಷ್ಯದ ದೃಷ್ಟಿಯಿಂದ ಉತ್ತಮ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಕೊರೋನಾ ಕಾಲದಲ್ಲಿ ಚುನಾವಣೆ ಬೇಕಿತ್ತಾ: ಬಸವರಾಜ ಹೊರಟ್ಟಿ ಆಕ್ರೋಶ

ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಮಾತನಾಡಿ, ದೇಶ ಸಾರ್ವಭೌಮತ್ವ ಹಾಗೂ ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ವಿದ್ಯಾವಂತರು ದೇಶದ ಭವಿಷ್ಯದ ಬಗ್ಗೆ ಚಿಂತಿಸುವ ಅಗತ್ಯವಿದೆ. ಹೀಗಾಗಿ ಬರುವ ಚುನಾವಣೆಯಲ್ಲಿ ವಿದ್ಯಾವಂತರ ಸಂಘಟಿತರಾಗಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕೋರಿದರು. ಸಭೆಯಲ್ಲಿ ಬಸವನಗುಡಿ ಕ್ಷೇತ್ರದ ಮಾಜಿ ಶಾಸಕ ಕೆ.ಚಂದ್ರಶೇಖರ್‌, ಡಿಸಿಸಿ ಅಧ್ಯಕ್ಷ ಕೃಷ್ಣಪ್ಪ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Follow Us:
Download App:
  • android
  • ios