Asianet Suvarna News

'ಆಗಸ್ಟ್ 15 ರ ನಂತರ ರಾಜಕೀಯ ಬದಲಾವಣೆ' ಕೆಪಿಸಿಸಿ ಕಾರ್ಯಾಧ್ಯಕ್ಷ ಭವಿಷ್ಯ

* ಬಿಜೆಪಿ ಸರ್ಕಾರದ ಮೇಲೆ ಈಶ್ವರ ಖಂಡ್ರೆ ವಾಗ್ದಾಳಿ
* ರೈತರಿಗೆ ಬೆಳೆ ಪರಿಹಾರದ ವಿಮೆ ಸಿಕ್ಕಿಲ್ಲ
* ಸೋಯಾಬೀನ್ ಬಿತ್ತನೆ ಬೀಜ ಸೂಕ್ತ ಪ್ರಮಾಣದಲ್ಲಿ ದೊರಕದೆ ರೈತರು ಸಂಕಷ್ಟ
* ಅಗಸ್ಟ್ 15 ರ ನಂತರ ರಾಜಕೀಯ ಬದಲಾವಣೆಗಳು ಗೋಚರಿಸ್ತಿವೆ 

KPCC working president Eshwar khandre slams Karnataka BJP  Govt mah
Author
Bengaluru, First Published Jun 17, 2021, 11:56 PM IST
  • Facebook
  • Twitter
  • Whatsapp

ಬೆಂಗಳೂರು (ಜೂ 17) ಫಸಲ್ ಭೀಮಾ ಯೋಜನೆಯಲ್ಲಿ ರೈತರಿಗೆ ಅನ್ಯಾಯ ಆಗುತ್ತಿದೆ . ರೈತರಿಗೆ ಬೆಳೆ ವಿಮೆ ಸಿಗ್ತಿಲ್ಲ.. ರಾಜ್ಯ ಸರ್ಕಾರ ವಿಮಾ ಕಂಪನಿಗಳ ಜೊತೆ ಶಾಮೀಲಾಗಿದೆಯಾ? ಎಂದು ಪ್ರಶ್ನೆ ಮಾಡಿದ್ದಾರೆ.

ರಾಜ್ಯದಲ್ಲಿ ಒಟ್ಟು 1516014 ಲಕ್ಷ ರೈತರು ಬೆಳೆ ವಿಮೆ ಕಂತು ಕಟ್ಟಿದ್ದಾರೆ.  ಆದರೆ ರೈತರ ಬೆಳ ನಷ್ಟಕ್ಕೆ ಮಾತ್ರ ವಿಮಾ ಕಂಪನಿಗಳು ರೈತರಿಗೆ ಪರಿಹಾರ ನೀಡ್ತಿಲ್ಲ. ರಾಜ್ಯದಲ್ಲಿ ಪ್ರವಾಹ ಆಗಿ ಬೆಳೆ ನಷ್ಟವಾದಾಗ ವಿಮಾ ಕಂಪನಿಗಳು ರೈತರಿಗೆ ಶೇ.  25 ರಷ್ಟು ಪರಿಹಾರ ನೀಡಬೇಕಿತ್ತು.  ಸುಮಾರು ಎರಡು ಸಾವಿರ ಕೋಟಿ ಪರಿಹಾರ ರಾಜ್ಯದ ರೈತರಿಗೆ ಪ್ರವಾಹದ ಸಂದರ್ಭದಲ್ಲಿ ದೊರೆಯಬೇಕಾಗಿತ್ತು. ಆದ್ರೆ ವಿಮಾ ಕಂಪನಿಗಳು ಒಂದು ರೂಪಾಯಿ ರೈತರಿಗೆ ಕೊಟ್ಟಿಲ್ಲ. ಬಿತ್ತನೆ ಬೀಜದ ಸಮಸ್ಯೆ ರಾಜ್ಯದ ರೈತರನ್ನು ತೀವ್ರವಾಗಿ ಕಾಡುತ್ತಿದೆ.

ಸರ್ಕಾರ ಪರವಾಗಿ ಕೃಷಿ ಇಲಾಖೆ, ಮುಂಚಿತವಾಗಿಯೇ ಬೀಜ ಉತ್ಪಾದಕ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಿತ್ತು. ಮುಂದಿನ ಹಂಗಾಮಿಗೆ ಅಗತ್ಯವಾದ ಬಿತ್ತನೆ ಬೀಜ ಪೂರೈಕೆಗೆ ಸಿದ್ಧತೆ ಮಾಡಿಕೊಳ್ಳುಬೇಕಿತ್ತು. ಆದರೆ ಈ ಬಿಜೆಪಿ ಸರ್ಕಾರದಲ್ಲಿ ಕೃಷಿಕರ ಕಾಳಜಿಯೇ ಇಲ್ಲ. ಅಗತ್ಯ ಪ್ರಮಾಣದ ಬಿತ್ತನೆ ಬೀಜ ಖರೀದಿಸಲು ಒಪ್ಪಂದ ಮಾಡಿಕೊಳ್ಳಲಿಲ್ಲ. ಪರಿಣಾಮ ಮೆಣಸಿನ ಕಾಯಿ ಬೀಜ, ಸೋಯಾಬೀನ್ ಬಿತ್ತನೆ ಬೀಜ ಸೂಕ್ತ ಪ್ರಮಾಣದಲ್ಲಿ ದೊರಕದೆ ರೈತರು ಸಂಕಷ್ಟ ಪಡುವಂತಾಗಿದೆ ಎಂದು  ರಾಜ್ಯ ಸರ್ಕಾರದ ವಿರುದ್ಧ ಈಶ್ವರ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಳ್ಳಿ ಹಕ್ಕಿಗೆ ಸಂಪೂರ್ಣ ಹುಚ್ಚು ಹಿಡಿದಿದೆ ಎಂದ ಬಿಜೆಪಿ ಶಾಸಕ

ಹೈದ್ರಾಬಾದ್ ಕರ್ನಾಟಕದ ಬೀದರ್ ಮತ್ತು ಕುಲ್ಬರ್ಗಿ ಹಾಗೂ ಇತರ ಭಾಗದಲ್ಲಿ ಹೆಚ್ಚಾಗಿ ಸೋಯಾಬೀನ್ ಬೆಳೆಯುತ್ತಾರೆ. ಆದರೆ ಸರ್ಕಾರ ಸೂಕ್ತ ಸಮಯದಲ್ಲಿ ಬಿತ್ತನೆ ಬೀಜಕ್ಕೆ ಒಪ್ಪಂದ ಮಾಡಿಕೊಳ್ಳದ ಕಾರಣ, ಬಿತ್ತನೆ ಬೀಜ ಬೆಲೆಯನ್ನು ಹೆಚ್ಚಳ ಮಾಡಿದ್ದು, ಬಹುತೇಕ ದುಪ್ಪಟ್ಟಾಗಿದೆ. ಕಳೆದ ವರ್ಷ ಸೋಯಾಬೀನ್ ಬಿತ್ತನೆ ಬೀಜ 30 ಕೆ.ಜಿ. ಚೀಲದ ದರ 1,260 ರೂಪಾಯಿ ಇದ್ದದ್ದು ಈ ವರ್ಷ 2,370 ರೂ. ಆಗಿದೆ. ಇದು ಮೊದಲೇ ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.

ರಾಜ್ಯದಲ್ಲಿ  ರಾಜಕೀಯ ಬದಲಾವಣೆಗಳು ಸದ್ಯದಲ್ಲೇ ನಡೆಯಲಿವೆ. ಆಗಸ್ಟ್ 15 ರ ನಂತರ ರಾಜಕೀಯ ಬದಲಾವಣೆಗಳು ಗೋಚರಿಸ್ತಿವೆ ಎಂದು ಹೊಸ ಭವಿಷ್ಯ ಹೇಳಿದರು.

ಯಡಿಯೂರಪ್ಪ ಅವರನ್ನ ಸಿಎಂ ಆಗಿ ಮುಂದುವರಿಸುವುದು  ಬಿಜೆಪಿ ಆಂತರಿಕ ವಿಚಾರ. ನಾನು ಆ ಬಗ್ಗೆ ಕಮೆಂಟ್ ಮಾಡಲ್ಲ. ಈಶ್ವರಪ್ಪ ಅವರ ಹೇಳಿಕೆ ಬಗ್ಗೆ 17 ಜನ ಮಿತ್ರಮಂಡಳಿ ಶಾಸಕರೇ ಪ್ರತಿಕ್ರಿಯೆ ನೀಡಿದ್ದಾರೆ. ಈಗ 17 ಶಾಸಕರಿಗೆ ಪಶ್ಚಾತಾಪ ಕಾಡುತ್ತಿದೆ ಎಂದರು.

 

Follow Us:
Download App:
  • android
  • ios