ಈಗಾಗಲೇ ಸಕ್ರಿಯ ರಾಜಕಾರಣದಿಂದ ಅಂಬರೀಷ್ ದೂರ ಸರಿಯುತ್ತಿದ್ದು, ಕಾಂಗ್ರೆಸ್‌ನಿಂದಲೂ ಬಹು ದೂರ ಹೋಗಿದ್ದಾರೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೆಪಿಸಿಸಿ ಅಂಬರೀಷ್ ಆಪ್ತರಿಗೂ ಕೊಕ್ ನೀಡಲು ಮುಂದಾಗಿದೆ.

ಮಂಡ್ಯ: ಕಾಂಗ್ರೆಸ್‌ನಿಂದ ಮಾಜಿ ಸಚಿವ ಅಂಬರೀಶ್ ಮರೆಯಾದ ಹಿನ್ನಲ್ಲೆಯಲ್ಲಿ ಅಂಬರೀಷ್ ಆಪ್ತರ ಬದಲಾವಣೆಗೆ ಕೆಪಿಸಿಸಿ ಮುಂದಾಗಿದೆ. ಶ್ರೀರಂಗಪಟ್ಟಣದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಂಬಿ ಆಪ್ತ ಲಿಂಗರಾಜು ಅವರನ್ನುು ಬದಲಾಯಿಸಲಾಗಿದೆ. ಅವರ ಸ್ಥಾನಕ್ಕೆ ನಗುವನಹಳ್ಳಿ ಪ್ರಕಾಶ್ ಅವರನ್ನು ನೇಮಿಸಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶ್ರೀರಂಗಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ಪ್ರಕಾಶ್ ಅವರನ್ನು ನೇಮಿಸಿ ಕೆಪಿಸಿಸಿ ಆದೇಶ ಹೊರಡಿಸಿದೆ. ಕೆಪಿಸಿಸಿ ಈ ನಿರ್ಧಾರಕ್ಕೆ ಅಂಬಿ ಆಪ್ತರು ಹಾಗೂ ಶ್ರೀರಂಗಪಟ್ಟಣ ಕೈ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಅಂಬಿ ರಾಜಕೀಯ ತೆರೆಗೆ ಸರಿದ ಹಿನ್ನಲೆಯಲ್ಲಿ ಅಂಬಿ ಆಪ್ತರಿಗೆ ಕೆಪಿಸಿಸಿ ಈ ಶಾಕ್ ನೀಡಿದೆ, ಎನ್ನಲಾಗುತ್ತಿದೆ.