ಬೆಳಗಾವಿ, (ಏ.10): ಕೋವಿಡ್ ಹಗಲಲ್ಲಿ ಹರಡುವುದಿಲ್ಲ, ರಾತ್ರಿ ಮಾತ್ರ ಹರಡುತ್ತದೆ ಎಂದು ಯಾವ ವಿಜ್ಞಾನಿ ಹೇಳಿದರೂ ತಿಳಿಸಿದರೆ ಅವರ ಫೋಟೊವನ್ನು ನಾವೂ ಇಟ್ಟುಕೊಳ್ಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಇಂದು ( ಶನಿವಾರ) ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾತ್ರಿ ಕರ್ಫ್ಯೂ ಮಾಡಿ ಆರ್ಥಿಕತೆ ಹಾಳು ಮಾಡುತ್ತಿದ್ದಾರೆ. ರಾತ್ರಿ ಕರ್ಫ್ಯೂಯಿಂದ  ಜನರನ್ನು ಮಾನಸಿಕವಾಗಿ ಕುಂದಿಸುತ್ತಿದ್ದಾರೆ. ಹಗಲಲ್ಲಿ ಕೋವಿಡ್ ಹರಡುವುದಿಲ್ಲವೇ? ಇವೆಲ್ಲ ಅವೈಜ್ಞಾನಿಕ ನಿರ್ಧಾರಗಳು ಎಂದು ಬಿಜೆಪಿ ವಿರುದ್ಧ ಡಿಕೆಶಿ ಕಿಡಿಕಾರಿದರು.

ಇಂದು ರಾತ್ರಿಯಿಂದ ರಾಜ್ಯದ 8 ನಗರದಲ್ಲಿ ಕೊರೋನಾ ಕರ್ಫ್ಯೂ! 

ಇನ್ನು ಸಾರಿಗೆ ನೌಕರರ ಮುಷ್ಕರರ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಲಕ್ಷ್ಮಣ ಸವದಿ ಸಾರಿಗೆ ಮಂತ್ರಿ ಆದಾಗಿನಿಂದ ಕೈಗೊಂಡ ನಿರ್ಧಾರಗಳೆಲ್ಲವೂ ತಪ್ಪಾಗಿವೆ. ನೌಕರರು ಸರ್ಕಾರದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಮೊದಲು ಆ ನೌಕರರಿಗೆ ಸಂಬಳ ಕೊಡುವುದಕ್ಕೆ ಹೇಳಿ ಎಂದು ತಿರುಗೇಟು ನೀಡಿದರು.

ಸತೀಶ್ ಜಾರಕಿಹೊಳಿ ದೊಡ್ಡ ನಾಯಕ. ಅವರು ಮೌಢ್ಯಗಳ ವಿರುದ್ಧ ಹೋರಾಡುತ್ತಿದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ನಂಬಿಕೆ ಇರುತ್ತದೆ ಎಂದರು. ಬೆಳಗಾವಿಯಲ್ಲಿ ಸತೀಶ್ ಗೆದ್ದೇ ಗೆಲ್ಲುತ್ತಾರೆ ಎಂದರು.