ಬಸವಣ್ಣ, ಕುವೆಂಪು ಮೇಲಾಣೆ ಫ್ರೀ ವಿದ್ಯುತ್ ಕೊಡ್ತೀವಿ: ಡಿ.ಕೆ.ಶಿವಕುಮಾರ್
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಗೆ ಮಾಸಿಕ 200 ಯೂನಿಟ್ ಉಚಿತ ವಿದ್ಯುತ್ ಕೊಡುತ್ತೇವೆ. ನಾವು ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹೊಸ ಆರ್ಥಿಕ ನೀತಿ ಘೋಷಣೆ ಮಾಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಹಾವೇರಿ (ಜ.20): ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಗೆ ಮಾಸಿಕ 200 ಯೂನಿಟ್ ಉಚಿತ ವಿದ್ಯುತ್ ಕೊಡುತ್ತೇವೆ. ನಾವು ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹೊಸ ಆರ್ಥಿಕ ನೀತಿ ಘೋಷಣೆ ಮಾಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಹಾವೇರಿಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ ‘ಪ್ರಜಾಧ್ವನಿ’ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಎಲ್ಲೆಡೆ ಈಗ ಕಾಂಗ್ರೆಸ್ ಮಹಾ ಅಲೆ ಎದ್ದಿದೆ.
ಕಾಂಗ್ರೆಸ್ ಸೇರಲು ಜಿಲ್ಲೆಯ ಅನೇಕ ಶಾಸಕರು ರೆಡಿಯಾಗಿದ್ದಾರೆ. ನಮ್ಮಲ್ಲಿ ಜಾಗವಿಲ್ಲ ಎಂದು ಅವರನ್ನೆಲ್ಲ ನಿಲ್ಲಿಸಿಟ್ಟಿದ್ದೇನೆ ಎಂದರು. ನಾವು ಅಧಿಕಾರಕ್ಕೆ ಬಂದರೆ ಬಸವಣ್ಣನಾಣೆ, ಕುವೆಂಪು, ಕನಕ-ಷರೀಫರ ಆಣೆ ಉಚಿತ ವಿದ್ಯುತ್ ನೀಡಿಯೇ ತೀರುತ್ತೇವೆ. ಬಿಜೆಪಿಯವರು ಎಲ್ಲಿಂದ ಕರೆಂಟ್ ತಂದುಕೊಡುತ್ತೀರಿ ? ಎಂದು ಪ್ರಶ್ನಿಸುತ್ತಿದ್ದಾರೆ. ‘ಮುಖ್ಯಮಂತ್ರಿಗಳೇ, ನೀವು ಇಲ್ಲವೇ, ನಿಮ್ಮ ಸಚಿವರನ್ನು ನಮ್ಮೊಂದಿಗೆ ಕಳುಹಿಸಿ ಎಲ್ಲಿಂದ ಕರೆಂಟ್ ತರುತ್ತೇವೆ ಎಂಬುದನ್ನು ತೋರಿಸುತ್ತೇವೆ’ ಎಂದು ಸವಾಲು ಹಾಕಿದರು.
ಬಿಜೆಪಿ ಆಡಳಿತದಲ್ಲಿ ಶಾಸಕರು ಬ್ರೋಕರ್‌ಗಳಾಗಿದ್ದಾರೆ: ಡಿ.ಕೆ.ಶಿವಕುಮಾರ್
ಲಂಬಾಣಿ ತಾಂಡಾ ಕಂದಾಯ ಗ್ರಾಮ ಮಾಡಿದ್ದೇ ನಾವು: ಕಾಂಗ್ರೆಸ್ ಸರ್ಕಾರ ಇದ್ದಾಗ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದೆವು. ಉಳುವವನಿಗೆ ಭೂಮಿ ಕೊಟ್ಟಿದ್ದು, ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಕೊಟ್ಟಿದ್ದು ನಾವು. ಈಗ ಪ್ರಧಾನಿ ಮೋದಿ ಅವರು ಬಂದು ಪ್ರಮಾಣ ಪತ್ರ ಕೊಡ್ತಿದ್ದಾರೆ. ಯಡಿಯೂರಪ್ಪ, ಶೋಭಾ ಸೇರಿ ಒಂದು ಸೈಕಲ್, ಸೀರೆ ಬಿಟ್ಟರೆ ಬೇರೆ ಏನಾದರೂ ಕೊಟಿದ್ದರಾ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಪ್ರಶ್ನಿಸಿದರು. ಹಾವೇರಿಯಲ್ಲಿ ನಡೆದ ಪ್ರಜಾಧ್ವನಿ ಬಿಜೆಪಿ ಸರ್ಕಾರದ 3 ವರ್ಷದ ಪಾಪದ ಪುರಾಣ ಎಂಬ ಕರಪತ್ರ ಬಿಡುಗಡೆಗೊಳಿಸಿದ್ದೇವೆ.
ಜ. 27ರ ಬಳಿಕ ಉಚಿತ ವಿದ್ಯುತ್ ಹಾಗೂ ಗೃಹಲಕ್ಷ್ಮಿ ಕಾರ್ಯಕ್ರಮಕ್ಕೆ ಅರ್ಜಿ ನಮೂನೆ ಕಳುಹಿಸುತ್ತೇವೆ. ಅದನ್ನು ತುಂಬಿಕೊಟ್ಟಿರುವ ಮೇಲೆ ಎಷ್ಟುಬಜೆಟ್ ಲೆಕ್ಕ ಹಾಕಲು ಅನುಕೂಲ ಆಗಲಿದೆ ಎಂದರು. ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಚಿವರಾದ ಎಚ್.ಕೆ. ಪಾಟೀಲ, ಎಚ್.ಎಂ. ರೇವಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ, ಮಹ್ಮದ್ ನಲಪಾಡ, ಶಾಸಕ ಶ್ರೀನಿವಾಸ ಮಾನೆ, ಮಾಜಿ ಸಚಿವರಾದ ಬಸವರಾಜ ಶಿವಣ್ಣನವರ, ಕೆ.ಬಿ. ಕೋಳಿವಾಡ, ರುದ್ರಪ್ಪ ಲಮಾಣಿ, ಮನೋಹರ್ ತಹಶೀಲ್ದಾರ್, ನಾರಾಯಣಸ್ವಾಮಿ, ಮಾಜಿ ಶಾಸಕ ಯು.ಬಿ. ಬಣಕಾರ.
ಪ್ರಧಾನಿ ಮೋದಿ ಸಾಮಾಜಿಕ ಪರಿವರ್ತಕ: ಸಿಎಂ ಬೊಮ್ಮಾಯಿ ಬಣ್ಣನೆ
ಅಜ್ಜಂಫೀರ್ ಖಾದ್ರಿ, ಬಿ.ಎಚ್. ಬನ್ನಿಕೋಡ, ಸೋಮಣ್ಣ ಬೇವಿನಮರದ, ಎಸ್.ಆರ್. ಪಾಟೀಲ, ಮಯೂರ ಜಯಕುಮಾರ, ಅಲ್ಲಂ ವೀರಭದ್ರಪ್ಪ, ಪ್ರಕಾಶ ರಾಠೋಡ, ಬಸವರಾಜ ರಾಯರಡ್ಡಿ, ಡಿ.ಆರ್. ಪಾಟೀಲ, ವೀಣಾ ಕಾಶಪ್ಪನವರ, ನಾರಾಯಣ ಸ್ವಾಮಿ, ಶಿವರಾಮೇಗೌಡ, ಐ.ಜಿ. ಸನದಿ, ಪ್ರಕಾಶಗೌಡ ಪಾಟೀಲ, ಕೊಟ್ರೇಶಪ್ಪ ಬಸೇಗಣ್ಣಿ, ಶಶಿಧರ ಯಲಿಗಾರ, ಶಿವಕುಮಾರ ತಾವರಗಿ, ಈರಪ್ಪ ಲಮಾಣಿ, ಡಾ. ಸಂಜಯ ಡಾಂಗೆ, ಡಾ. ಆರ್.ಎಂ. ಕುಬೇರಪ್ಪ ಇತರರಿದ್ದರು. ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಸತೀಶ ಈಳಗೇರ ನಿರ್ವಹಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ ಸ್ವಾಗತಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಮೈದೂರು ವಂದಿಸಿದರು.