ಬಿಜೆಪಿಯವರು ಯಡಿಯೂರಪ್ಪ ಅವರಿಗೆ ಕಣ್ಣೀರು ಹಾಕಿಸಿ, ಅಧಿಕಾರದಿಂದ ಕೆಳಗಿಳಿಸಿದ್ದು ಯಾಕೆ? ಈ ಬಗ್ಗೆ ಮೊದಲು ಅವರು ಉತ್ತರ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಗ್ರಹಿಸಿದರು. 

ಶಿವಮೊಗ್ಗ/ಹೊಸದುರ್ಗ (ಫೆ.10): ಬಿಜೆಪಿಯವರು ಯಡಿಯೂರಪ್ಪ ಅವರಿಗೆ ಕಣ್ಣೀರು ಹಾಕಿಸಿ, ಅಧಿಕಾರದಿಂದ ಕೆಳಗಿಳಿಸಿದ್ದು ಯಾಕೆ? ಈ ಬಗ್ಗೆ ಮೊದಲು ಅವರು ಉತ್ತರ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಗ್ರಹಿಸಿದರು. ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿ, ಬಿಎಸ್‌ವೈ ಅವರಿಗೆ 75 ವರ್ಷ ದಾಟಿದ್ದರೂ ಅವರ ಮುಖಂಡತ್ವದಲ್ಲಿ ಚುನಾವಣೆ ಮಾಡಿ, ನಂತರ ಆಪರೇಷನ್‌ ಕಮಲಕ್ಕೆ ಅವಕಾಶ ನೀಡಿ, ಸರ್ಕಾರ ರಚನೆ ಮಾಡಿಸಿ ಕೊನೆಗೆ ಅವರಿಂದ ಅಧಿಕಾರ ಕಿತ್ತುಕೊಂಡಿರಿ? ಅವರ ಮೇಲೆ ಭ್ರಷ್ಟಾಚಾರದ ಆರೋಪ ಇತ್ತಾ? ವೈಯಕ್ತಿಕ ಕಾರಣನಾ ಎಂಬುದನ್ನು ಜನರಿಗೆ ಮಾಹಿತಿ ನೀಡಿ ಎಂದು ಕುಟುಕಿದರು.

ಕಾಂಗ್ರೆಸ್‌ನಲ್ಲಿ ನಾವು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಮಾಡುತ್ತೇವೆ ಎಂದು ಹೇಳಿದ್ದೇವೆ. ಆದರೆ, ಅಮಿತ್‌ ಶಾ ಅವರು ಈ ಹಿಂದೆ ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ಎಂದು ಹೇಳಿದ್ದರು. ಈಗ ಪ್ರಧಾನಿ ನರೇದ್ರ ಮೋದಿ ನೇತೃತ್ವದಲ್ಲಿ ಚುನಾವಣೆ ಮಾಡುತ್ತೇವೆ ಎನ್ನುತ್ತಿದ್ದಾರೆ ಎಂದರು. ರಾಜ್ಯ ಸರಕಾರ ಭ್ರಷ್ಟಚಾರದಲ್ಲಿ ಮುಳುಗಿ ಹೋಗಿದೆ. ಭದ್ರಾ ಯೋಜನೆ ಸೇರಿದಂತೆ ಜಲಸಂಪನ್ಮೂಲ ಇಲಾಖೆಯಲ್ಲಿ ಕೆಲಸ ಮಾಡದೇ 23 ಸಾವಿರ ಕೋಟಿ ರು.ಗಳ ಬಿಲ್‌ ಪಡೆಯಲಾಗಿದೆ ಎಂದು ಸರಕಾರದ ವಿರುದ್ಧ ಶಾಸಕ ಗೂಳಿಹಟ್ಟಿಡಿ. ಶೇಖರ್‌ ಪತ್ರ ಬರೆದಿದ್ದಾರೆ. ಈವರೆಗೂ ಅವರಿಗೆ ನೋಟಿಸ್‌ ನೀಡಿಲ್ಲ. ಪಕ್ಷದಿಂದ ಹೊರಗೂ ಹಾಕಿಲ್ಲ. ಮೇಲ್ನೋಟಕ್ಕೆ ಇದು ಸತ್ಯ ಎಂದು ಸಾಬೀತಾಗುತ್ತದೆ ಎಂದರು.

ಚಿತ್ರದುರ್ಗದ ಮೂರು ಕ್ಷೇತ್ರದಲ್ಲಿ ಪ್ರಜಾಧ್ವನಿ ಯಾತ್ರೆ ಅಬ್ಬರ: ಬಿಜೆಪಿ ಸರ್ಕಾರದ ವಿರುದ್ದ ಡಿಕೆಶಿ ವಾಗ್ದಾಳಿ

ಜಾರಕಿಹೊಳಿಗೆ ಮೆಂಟಲ್‌ ಬ್ಯಾಲೆನ್ಸ್‌ ಕಡಿಮೆಯಾಗಿದೆ: ರಮೇಶ್‌ ಜಾರಕಿಹೊಳಿ ವಿಚಾರವಾಗಿ ಮಾತನಾಡುವುದಿಲ್ಲ. ಅವರ ಬೇಡಿಕೆ ಏನಿದೆ ಅದನ್ನು ಈಡೇರಿಸಲಿ. ಆದರೆ, ಕೋರ್ಚ್‌ನಲ್ಲಿ ಅಫಿಡವಿಟ್‌ ಯಾಕೆ ಹಾಕಿದ್ದಾರೆ?. ಅವರು ಯಾವ ಮನವಿ ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆ ಮಾಡಲಿ. ಮಂತ್ರಿ ಸ್ಥಾನ ಕಳೆದುಕೊಂಡ ಹಿನ್ನೆಲೆಯಲ್ಲಿ ರಮೇಶ್‌ ಜಾರಕಿಹೊಳಿ ಹಾಗೂ ಈಶ್ವರಪ್ಪ ಪೇಚಾಡುತ್ತಿದ್ದಾರೆ. ರಮೇಶ್‌ ಜಾರಕಿಹೊಳಿಗೆ ಮೆಂಟಲ್‌ ಬ್ಯಾಲೆನ್ಸ್‌ ಕಡಿಮೆಯಾಗಿ ಈ ರೀತಿ ಮಾತಾಡುತ್ತಿದ್ದಾರೆ. ಆರೋಗ್ಯ ಸಚಿವರು ಶಿಫಾರಸ್ಸು ಮಾಡಿ ಚಿಕಿತ್ಸೆ ಕೊಡಿಸಲಿ. ಕೆಲವರು ನನ್ನ ಬಗ್ಗೆ ಮಾತನಾಡಿದರೆ ಮಾತ್ರ ಅವರ ಪಕ್ಷದಲ್ಲಿ ಮಾರ್ಕೆಟ್‌ ಇರುತ್ತದೆ. ಇಲ್ಲದಿದ್ದರೆ ಅವರ ಪಕ್ಷದಲ್ಲೇ ಅವರನ್ನು ಮಾತನಾಡಿಸುವುದಿಲ್ಲ ಎಂದು ಟೀಕಿಸಿದರು.

ಪಂಚರತ್ನ ರಥಯಾತ್ರೆಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರದ ಜತೆ ಬಿಜೆಪಿ ಮೇಲೆ ಎಚ್‌ಡಿಕೆ ಅಟ್ಯಾಕ್!

ಸಿಬಿಐಗೆ ಪತ್ರ ಬರೆದು ಸಲಹೆ ನೀಡಬೇಕು ಎಂದುಕೊಂಡಿದ್ದೇನೆ?: ಯಂಗ್‌ ಇಂಡಿಯಾಗೆ ದೇಣಿಗೆ ನೀಡಿದ ವಿಚಾರವಾಗಿ ನಾವು ಈ ಹಿಂದೆ ಇ.ಡಿ. ಅಧಿಕಾರಿಗಳಿಗೆ ಉತ್ತರ ನೀಡಿ ಬಂದಿದ್ದೇವೆ. ಆದರೂ ಈಗ ಮತ್ತೆ ವಿಚಾರಣೆಗೆ ನೋಟಿಸ್‌ ನೀಡಿದ್ದಾರೆ. ಇನ್ನು ಸಿಬಿಐ ಮೂಲಕ ಮಗಳ ಕಾಲೇಜಿನ ಶುಲ್ಕದ ಬಗ್ಗೆ ವಿಚಾರಣೆಗೆ ಮುಂದಾಗಿದ್ದಾರೆ. ಅವರ ಮುಂದೆ ಬಹಳ ದೊಡ್ಡ ಕೆಲಸಗಳಿವೆ. ಅವುಗಳನ್ನು ಮಾಡುವುದನ್ನು ಬಿಟ್ಟು ಮಗಳ ಕಾಲೇಜಿನ ಶುಲ್ಕ ಪಾವತಿ ವಿಚಾರವಾಗಿ ತನಿಖೆ ಮಾಡುತ್ತಿದ್ದಾರೆ. ನಮ್ಮ ಮಕ್ಕಳ ಫೀಸ್‌ ಕಟ್ಟುವುದಕ್ಕೂ ಅಡ್ವೈಸ್‌ ಮಾಡುತ್ತಾರೆಂದರೆ, ಈ ಬಗ್ಗೆ ಸಿಬಿಐಗೆ ಪತ್ರ ಬರೆದು ನಿಮಗೆ ಬೇಕಾದಷ್ಟುಕೆಲಸ ಇದೆ. ಅದನ್ನು ಮಾಡಿ, ತೀರ ಸಣ್ಣಮಟ್ಟದ ತನಿಖೆ ಮಾಡಬೇಡಿ ಎಂದು ಸಲಹೆ ನೀಡಬೇಕು ಎಂದುಕೊಂಡಿದ್ದೇನೆ ಎಂದು ತಿಳಿಸಿದರು.