ಶಾಸಕ ಎನ್‌ ಮಹೇಶ್‌ ಹಾಗೂ ನಾನು ಸ್ನೇಹಿತರು, ಅವರು ಸಚಿವರಾಗಿಯೂ ಸೇವೆ ಮಾಡಿದವರು. ಅವರು ತಮ್ಮ ಹೋರಾಟ, ಬದುಕಿದ್ದ ರೀತಿ, ವಿದ್ಯಾಭ್ಯಾಸ, ಸಂಘಟನೆ ಎಲ್ಲಾ ಮರೆತು, ಗೆಲ್ಲಿಸಿದ ಆನೆಯನ್ನೆ ಕಾಡಿಗೆ ಕಳುಹಿಸಿ ಸ್ವಾರ್ಥಕ್ಕಾಗಿ ಕಮಲ ಹಿಡಿದಿದ್ದಾರೆ. 

ಕೊಳ್ಳೇಗಾಲ (ಫೆ.22): ಶಾಸಕ ಎನ್‌ ಮಹೇಶ್‌ ಹಾಗೂ ನಾನು ಸ್ನೇಹಿತರು, ಅವರು ಸಚಿವರಾಗಿಯೂ ಸೇವೆ ಮಾಡಿದವರು. ಅವರು ತಮ್ಮ ಹೋರಾಟ, ಬದುಕಿದ್ದ ರೀತಿ, ವಿದ್ಯಾಭ್ಯಾಸ, ಸಂಘಟನೆ ಎಲ್ಲಾ ಮರೆತು, ಗೆಲ್ಲಿಸಿದ ಆನೆಯನ್ನೆ ಕಾಡಿಗೆ ಕಳುಹಿಸಿ ಸ್ವಾರ್ಥಕ್ಕಾಗಿ ಕಮಲ ಹಿಡಿದಿದ್ದಾರೆ. ಆದರೆ ಎಷ್ಟೆತಿಪ್ಪರಲಾಗ ಹಾಕಿದರೂ ಕೊಳ್ಳೇಗಾಲದಲ್ಲಿ ಗೆಲ್ಲಲಾಗಲ್ಲ ಎಂದು ಕೆಪಿಪಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಅವರು ಪ್ರಜಾಧ್ವನಿಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಶಾಸಕ ಮಹೇಶ್‌ ಅವರಿಗೂ ನನಗೂ ಸ್ನೇಹವಿದೆ. ಜೊತೆಗೆ ಮಂತ್ರಿಯಾಗಿದ್ದವರು. ಮಂತ್ರಿಯಾಗಿ ದೊಡ್ಡ ಖಾತೆ ಹೊಂದಿದ್ದರು ಅದನ್ನ ಉಳಿಸಿಕೊಳ್ಳಲಾಗಲಿಲ್ಲ, ರಾಜೀನಾಮೆ ಅನಿವಾರ್ಯತೆ ಬಂತು, ಬಿಜೆಪಿ

ಬೆಂಬಲ ಕೊಟ್ಟರೂ ಅವರನ್ನು ಮಂತ್ರಿ ಮಾಡಲಿಲ್ಲ, ಇವರು ಜನಸೇವೆ ಮಾಡಲಿಲ್ಲ, ಸಂವಿಧಾನ ಬದಲಿಸುತ್ತೆವೆ ಎನ್ನುವ ಬಿಜೆಪಿ ಜೊತೆ ಸೇರಿ, ಈಗ ಮುಖ್ಯಮಂತ್ರಿ ಬೊಮ್ಮಾಯಿ ಜೊತೆಗಿದ್ದಾರೆ, ಬೊಮ್ಮಾಯಿ ಸಹ ಇವರೊಂದಿಗಿದ್ದಾರೆ, ಏತನ್ಮಧ್ಯೆ, ಪಾಪ ಮಾಜಿ ಶಾಸಕ ನಂಜುಂಡಸ್ವಾಮಿ ಅವರು ಕೈಸೇರುವ ಕುರಿತು ಮಾತನಾಡಿದ್ದಾರೆ. ನಾನು ಮಾಜಿ ಶಾಸಕ ನಂಜುಂಡಸ್ವಾಮಿ, ಎಸ್‌. ಬಾಲರಾಜು, ಕೃಷ್ಣಮೂರ್ತಿ, ಜಯಣ್ಣ ಅವರು ಶಾಸಕರಾಗಿದ್ದಾಗಲು ಸಹ ವಿದಾನಸೌಧದಲ್ಲಿದ್ದೆ, ಈ ಹಿಂದೆ ಮಾಜಿ ಶಾಸಕ ಜಿ.ಎನ್‌. ನಂಜುಂಡಸ್ವಾಮಿ ಅವರನ್ನು ನಾನು ಶಾಸಕನಾಗಿದ್ದ ವೇಳೆ ಮಾಜಿ ಮುಖ್ಯಮಂತ್ರಿಗಳಾಗಿದ್ದ ದಿ. ಧರ್ಮಸಿಂಗ್‌ ಕರೆದುಕೊಂಡು ಪರಿಚಯ ಮಾಡಿಸಿದ್ರು, 

ಪ್ರತಿ ಹಳ್ಳಿಯ ಟಾಪ್‌ 10 ಕಾಂಗ್ರೆಸ್‌ ಕಾರ್ಯಕರ್ತರಿಗೆ ಟಿವಿ ಗಿಫ್ಟ್‌: ಡಿ.ಕೆ.​ಶಿ​ವ​ಕು​ಮಾರ್‌

ಬಳಿಕ ಕಾಂಗ್ರೆಸ್‌ ಟಿಕೆಟ್‌ ಪಡೆದು ಶಾಸಕರಾಗಿ ಆಯ್ಕೆಯಾದ್ರು, ಆದರೆ ಈ ಹಿಂದಿನ ಚುನಾವಣೆಯಲ್ಲಿ ಧ್ರುವನಾರಾಯಣ ವಿರುದ್ಧ ಕಿಡಿಕಾರಿ ಪಕ್ಷ ಬಿಟ್ಟರು, ಅದೆನಾಯಿತೋ ಏನೋ ಈಗ ಕಾಂಗ್ರೆಸ್ಸಿಗನಾಗಿ ಸಾಯಬೇಕು ಎಂದು ಖರ್ಗೆ ಸಾಹೇಬರ ಬಳಿ ಪಾಪ ವಿಮರ್ಶೆ ಮಾಡಿಸಿದ್ದಾರೆ. ಬರ್ತಿನಿ ಅಂತ ತಿಳಿಸಿದ್ದಾರಂತೆ ಈ ಕುರಿತು ಧ್ರುವನಾರಾಯಣ ನನಗೆ ವಿವರಿಸಿದ್ದಾರೆ ಎಂದು ಟೀಕಿಸಿದರು. ಕಮಲ ಕೆರೆಯಲ್ಲಿದ್ದರೆ ಚಂದ, ತೆನೆ ಹೊಲದಲ್ಲಿದ್ದರೆ ಚಂದ, ದಾನ, ಧರ್ಮ ಮಾಡುವವರ ಕೈಅಧಿಕಾರದಲ್ಲಿದ್ದರೆ ಮಾತ್ರ ಅಂದ, ಹಾಗಾಗಿ ಕಾರ್ಯಕರ್ತೆರೆಲ್ಲರೂ ಕೈಗೆ ಶಕ್ತಿ ನೀಡಿ, ನಿಮ್ಮ ಧ್ವನಿಯಾಗಿ ಸೇವೆ ಮಾಡುತ್ತ ಸದಾ ನಿಮ್ಮ ಜೊತೆಗಿರುವೆ, ಕೈಪಾರ್ಟಿಗೆ ಜಾತಿ, ಧರ್ಮಗಳಿಲ್ಲ ಎಂದರು.

ನಾನು ಎಆರ್‌ಕೆ ಬಹಳ ಆತ್ಮೀಯರು: ನಾನು ಮಾಜಿ ಶಾಸಕ ಕೃಷ್ಣಮೂರ್ತಿ ಆತ್ಮೀಯರು, ಈ ಹಿಂದೆ ಪಕ್ಷಕ್ಕೆ ಹಲವು ಬಾರಿ ಗಾಳ ಹಾಕಿ ಎಳೆದರೂ ಬರಲಿಲ್ಲ, ಸಣ್ಣ ಅಧಿಕಾರ, 1 ಮತದಿಂದ ಸೋತರು, ಗೆದ್ದವನು ಸೋತ, ಸೋತವನು ಸತ್ತ ಎಂಬಂತಾಗಿ ಬಿಟ್ಟಿತು ಅವರ ಸ್ಥಿತಿ ಎಂದರು. ಕೊಳ್ಳೇಗಾಲದಲ್ಲಿ ಟಿಕೆಟ್‌ ಆಕಾಂಕ್ಷಿಗಳಾಗಿರುವ 3 ಮಂದಿಯೂ ಮಹಾನ್‌ ಕಲಾವಿದರು. ಇವರಲ್ಲಿ ಒಬ್ಬರಿಗೆ ಟಿಕೆಟ್‌ ಕೊಡಿಸುವ ದೊಡ್ಡ ಜವಾಬ್ದಾರಿ ಸಿದ್ದರಾಮಯ್ಯ, ಧ್ರುವನಾರಾಯಣ ಮತ್ತು ನನ್ನ ಮೇಲಿದೆ ಎಂದರು. ಮೂರು ಮಂದಿ ಪೈಕಿ ಯಾರಿಗೆ ಟಿಕೆಟ್‌ ನೀಡಿದರೂ ಕೆಲಸ ಮಾಡಿ, ಆದರೆ ಕಾಲೆಳೆಯದಿರಿ ಎಂದು ಕಿವಿಮಾತು ಹೇಳಿದರು.

ಮೂರು ಮಂದಿ ಟಿಕೆಟ್‌ ಆಕಾಂಕ್ಷಿಗಳು ಕಾಂಗ್ರೆಸಿಗರೆ ಆಗಿದ್ದಾರೆ ಮಹಾತ್ಮಾ ಗಾಂಧಿ ನಾಯಕತ್ವ ತಂದುಕೊಟ್ಟ ಕಾಂಗ್ರೆಸ್‌ ದೊಡ್ಡ ಪಕ್ಷ ಅಂತಹ ಸಾಲಿನಲ್ಲಿ ರಾಷ್ಟ್ರೀಯ ಅಧ್ಯಕ್ಷರಾಗಿ ಮಲ್ಲಿಕಾಜುನ ಖರ್ಗೆ ಕುಳಿತಿದ್ದಾರೆ, ಅವರ ಕೈಬಲಪಡಿಸಲು ನಾನು, ಧ್ರುವ, ಬಾಲರಾಜು, ಜಯಣ್ಣ, ಕೃಷ್ಣಮೂರ್ತಿ ಎಲ್ಲರೂ ಕೆಲಸ ಮಾಡುತ್ತಿದ್ದೇವೆ, ನಾವು ಈಗಾಗಲೇ ಸರ್ವೆ ಮಾಡಿಸಿದ್ದು. ಏನೇ ಮಾಡಿದರೂ, ತಲೆ, ಮೇಲೆ ಕೆಳಗೆ ಆಡಿಸಿದರೂ ಸಹಾ ಮಹೇಶ್‌ ಗೆಲ್ಲುವುದಾಗಿ ನಲಿದರೂ ಸಹಾ ಕಾಂಗ್ರೆಸ್‌ ಇಲ್ಲಿ ಗೆದ್ದೆ ಗೆಲುತ್ತೆ, ಆದರೆ ಮೂರು ಮಂದಿಯೂ ಒಬ್ಬರ ಕಾಲನ್ನು ಯಾರು ಎಳೆಯಬಾರದು, ಇಬ್ಬರು ತ್ಯಾಗಿಗಳಾಗಬೇಕು, 

ತ್ಯಾಗ ಮಾಡಿದವರಿಗೆ ಸಮಾಜದಲ್ಲಿ ಗೌರವವಿದೆ, ಸಮಾಜ, ಪಕ್ಷದ ಗೌರವಿಸುತ್ತೆ, ತ್ಯಾಗಿಗಾದವರಿಗೆ ಲೋಕಸಭೆ ಕುರ್ಚಿ ಒಬ್ಬರಿಗೆ, ಮತ್ತೊಬ್ಬರಿಗೆ ವಿಧಾನಸಭೆ ಕುರ್ಚಿ, ಇನ್ನೊಂದು ಕುರ್ಚಿ ರೆಡಿ ಮಾಡಬೇಕಿದೆ ಎಂದರು. ಕಳೆದ ಬಾರಿ ಜಯಣ್ಣ ಅವರು ಕೃಷ್ಣಮೂರ್ತಿ ಅವರಿಗೆ ಟಿಕೆಟ್‌ ಬಿಟ್ಟುಕೊಟ್ಟರು, ಜಯಣ್ಣ ತ್ಯಾಗದ ಸಂಸ್ಕೃತಿಯ ನಾಯಕ, ಈಗ ಅವರ ಸಾಲ ತೀರಿಸಬೇಕಿದೆ ಎಂದರು. ಕೊಳ್ಳೇಗಾಲದಲ್ಲಿ ಮೂರು ಗಂಟೆ ತಡವಾಗಿ ಆಗಮಿಸಿದ್ದರೂ ಇಲ್ಲಿನ ಕಾರ್ಯಕರ್ತರು, ಮುಖಂಡರು ಒಳ್ಳೇ ಸಭೆ ಅಯೋಜಿಸಿ ಸಂಘಟನೆ ಮಾಡಿದ್ದಾರೆ, 

ಇದರಲ್ಲಿ ಅನೇಕರ ಶ್ರಮವಿದೆ, 3ಮಂದಿ ಆಕಾಂಕ್ಷಿ ಕ್ಯಾಂಡಿಟೇಟ್‌ ಮಾಡಿದರೆ ಸಾಧನೆಯಾಗದು, ಎಲ್ಲಾ ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂಬ ನನ್ನ ಮಾತಿನಂತೆ ಎಲ್ಲರ ಒಗ್ಗಟ್ಟು ಪ್ರದರ್ಶಿಸಿದ್ದಿರಿ ಎಂದು ಇದೆ ವೇಳೆ ಪ್ರಶಂಸಿಸಿದರು. ಶಾಸಕರಾದ ಆರ್‌. ನರೇಂದ್ರ, ಪುಟ್ಟರಂಗಶೆಟ್ಟಿ, ಮಾಜಿ ಶಾಸಕರಾದ ಎ.ಆರ್‌. ಕೃಷ್ಣಮೂರ್ತಿ, ಎಸ್‌. ಜಯಣ್ಣ, ಎಸ್‌. ಬಾಲರಾಜು, ವಿಧಾನ ಪರಿಷತ್‌ ಸದಸ್ಯ ತಿಮ್ಮಯ್ಯ, ಮರಿಸ್ವಾಮಿ, ಶ್ರೀನಿವಾಸ್‌, ನಳಪಾಡ್‌, ಸಂಗೀತ ನಿರ್ದೇಶಕ ಸಾಧುಕೋಕಿಲ, ಬ್ಲಾಕ್‌ ಅಧ್ಯಕ್ಷ ತೋಟೇಶ್‌, ಕಾರ್ಯದರ್ಶಿ ರವಿ , ನಗರಸಭೆ ಅಧ್ಯಕ್ಷ ರೇಖಾ ರಮೇಶ್‌ ಇನ್ನಿತರರು ಇದ್ದರು.

ಕೊಳ್ಳೇಗಾಲದಲ್ಲಿ ಸಿದ್ದರಾಮಯ್ಯಗೂ ಮೊಳಗಿದ ಜೈಕಾರ: ಪ್ರಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರು ಕಾರ್ಯಕರ್ತರಿಂದ ಬೊಲೊ ಭಾರತ್‌ ಮಾತಾಕಿ ಕಾಂಗ್ರೆಸ್‌ ಪಾರ್ಟಿಗೆ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಮಲ್ಲಿಕಾಜುನ ಖರ್ಗೆ ಅವರಿಗೆ ಹೆಸರೇಳಿ ಜೈಕಾರ ಕೂಗಿಸಿದರು. ಆದರೆ ಸಿದ್ದರಾಮಯ್ಯ ಹೆಸರೇಳಲಿಲ್ಲ, ಈ ಹಿನ್ನೆಲೆ ಕಾಂಗ್ರೆಸ್‌ ಕಾರ್ಯಕರ್ತರೆ ಸಿದ್ದರಾಮಯ್ಯ ಹೆಸರೇಳಿಕೊಂಡು ಸಿದ್ದರಾಮಯ್ಯಕೀ, ಜೈ ಎನ್ನುವ ಮೂಲಕ ಜೈಕಾರ ಮೊಳಗಿಸಿದರು.

ಮೂರು ಟಿಕೆಟ್‌ ಆಕಾಂಕ್ಷಿಗಳೂ ಜನಪ್ರಿಯರೇ: ಹಲವು ಸಮೀಕ್ಷೆಗಳ ಪ್ರಕಾರ ಚಾಮರಾಜನಗರ ಜಿಲ್ಲೆಯಲ್ಲಿ ಕಾಂಗ್ರೆಸ್‌ ಮುಂದಿದೆ. ಹಾಗಾಗಿ 4 ಸ್ಥಾನಗಳಲ್ಲೂ ಗೆಲ್ಲುತ್ತೇವೆ, ಕೊಳ್ಳೇಗಾಲ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದು ಇಲ್ಲಿ ಮೂರು ಮಂದಿ ಜನಪ್ರಿಯ ಮಾಜಿ ಶಾಸಕರು ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ, ಹೈಕಮಾಂಡ್‌ ಯಾರಿಗೆ ಟಿಕೆಟ್‌ ನೀಡಿದರೂ ಕಾಂಗ್ರೆಸ್‌ ಕಾರ್ಯಕರ್ತರು ಒಗ್ಗಟ್ಟು ಪ್ರದರ್ಶಿಸಿ ಶಾಸಕ ಮಹೇಶ್‌ ಸೋಲಿಗೆ ಶಪಥ ಮಾಡಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಸಂದೇಶ ನೀಡಿದರು. ಅವರು ನ್ಯಾಷನಲ್‌ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿ, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌

ಮಹದೇವಪ್ರಸಾದ್‌ ಪುತ್ರ ಗಣೇಶ್‌ ಪ್ರಸಾದ್‌ಗೆ ಗುಂಡ್ಲುಪೇಟೆ ಟಿಕೆಟ್‌

ಭದ್ರಕೋಟೆ, ಮೂರು ಮಂದಿ ಆಕಾಂಕ್ಷಿಗಳು ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ಮೂರು ಮಂದಿ ಅಭಿವೃದ್ಧಿ ಪರ ಹಾಗೂ ಜನಪ್ರಿಯ ವ್ಯಕ್ತಿಗಳೆ ಆಗಿದ್ದಾರೆ, ಜಯಣ್ಣ ಅವರು 2ಬಾರಿ ಶಾಸಕರಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಕೃಷ್ಣಮೂರ್ತಿ ಅವರು ಸಂತೇಮರಳ್ಳಿ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಎಸ್‌. ಬಾಲರಾಜು ಅವರು ಸಹಾ ಪಕ್ಷೇತರ ಶಾಸಕರಾಗಿ ಗೆದ್ದು ಗಮನ ಸೆಳೆದು ಅಭಿವೃದ್ಧಿ ಕಾರ್ಯಗಳಿಗೆ ಕ್ಷೇತ್ರದಲ್ಲಿ ಮುನ್ನುಡಿ ಬರೆದಿದ್ದಾರೆ, ಇವರ ಪೈಕಿ ಯಾರಿಗೆ ಟಿಕೆಟ್‌ ನೀಡಬೇಕು ಎಂಬುದನ್ನ ಹೈಕಮಾಂಡ್‌ ತೀರ್ಮಾನಿಸುತ್ತೆ, ನಾವೆಲ್ಲರೂ ಎನ್‌. ಮಹೇಶ್‌ ಸೋಲಿಸುವ ಶಪಥ ಮಾಡೋಣ.

ಕಾಂಗ್ರೆಸ್‌ ಭದ್ರಕೋಟೆ ಎಂದು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರವನ್ನು ಸಾಬೀತು ಪಡಿಸೋಣ, ಕೊಳ್ಳೇಗಾಲವನ್ನು ಸಿಂಗಾಪುರ ಮಾಡುತ್ತೆನೆಂದ ಶಾಸಕರು, ಅಭಿವೃದ್ಧಿಯನ್ನೆ ಮರೆತರು, ನಮ್ಮ ಭಾಗದಿಂದ ಶಿಕ್ಷಣ ಸಚಿವರಾದ ಇವರು ಶಾಲಾ, ಕಾಲೇಜು, ಶಿಕ್ಷಣ ಸಂಸ್ಥೆ ಮಂಜೂರು ಮಾಡಿಸುವಲ್ಲಿ ವಿಫಲರಾದರು. 20 ವರ್ಷಗಳಿಂದ ತತ್ವ ಸಿದ್ಧಾಂತದಡಿ ಸಾವಿರಾರು ಯುವಕರ ಪಡೆ ಮಹೇಶ್‌ ಅವರಿಗೆ ಬೆಂಬಲ ಸೂಚಿಸಿದ್ದರು, ಅದೆಲ್ಲ ಗಾಳಿಗೆ ತೂರಿ ಸಿದ್ಧಾಂತ ಬಿಟ್ಟು ಬಿಜೆಪಿ ಸೇರಿದ್ದಾರೆ, ಹೋದ ಕಡೆಯಲೆಲ್ಲಾ ಅಂಬೇಡ್ಕರ್‌ ಅನುಯಾಯಿ ಅನಿಸಿಕೊಂಡವರು ನಿಜಕ್ಕೂ ಕೊಳ್ಳೇಗಾಲ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ನೀಡಿದ ಕೊಡುಗೆ ಶೂನ್ಯ ಎಂದು ಟೀಕಿಸಿದರು.