ಮಹದೇವಪ್ರಸಾದ್‌ ಪುತ್ರ ಗಣೇಶ್‌ ಪ್ರಸಾದ್‌ಗೆ ಗುಂಡ್ಲುಪೇಟೆ ಟಿಕೆಟ್‌

ಗುಂಡ್ಲು​ಪೇಟೆ ವಿಧಾ​ನ​ಸಭಾ ಕ್ಷೇತ್ರ​ದಿಂದ ಮುಂದಿನ ವಿಧಾ​ನ​ಸಭಾ ಚುನಾ​ವ​ಣೆಗೆ ಮಾಜಿ ಸಚಿ​ವ ಮಹ​ದೇವ ಪ್ರಸಾದ್‌ ಅವರ ಪುತ್ರ ಗಣೇಶ್‌ ಪ್ರಸಾ​ದ್‌ಗೆ ಟಿಕೆಟ್‌ ಸಿಗು​ವುದು ಪಕ್ಕಾ ಆಗಿದೆ. ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಅವರೇ ಸ್ವತಃ ಗಣೇಶ್‌ ಪ್ರಸಾದ್‌ ಹೆಸರನ್ನು ಬಹಿ​ರಂಗ​ವಾಗಿ ಘೋಷಿ​ಸುವ ಮೂಲಕ ಅಭ್ಯರ್ಥಿ ಕುರಿತ ಗೊಂದ​ಲ​ಗ​ಳಿಗೆ ತೆರೆ ಎಳೆ​ದಿ​ದ್ದಾ​ರೆ. 

Gundlupete Congress Ticket for Mahadev Prasads son Ganesh Prasad gvd

ಗುಂಡ್ಲುಪೇಟೆ (ಚಾ.​ನ​ಗ​ರ​) (ಫೆ.22): ಗುಂಡ್ಲು​ಪೇಟೆ ವಿಧಾ​ನ​ಸಭಾ ಕ್ಷೇತ್ರ​ದಿಂದ ಮುಂದಿನ ವಿಧಾ​ನ​ಸಭಾ ಚುನಾ​ವ​ಣೆಗೆ ಮಾಜಿ ಸಚಿ​ವ ಮಹ​ದೇವ ಪ್ರಸಾದ್‌ ಅವರ ಪುತ್ರ ಗಣೇಶ್‌ ಪ್ರಸಾ​ದ್‌ಗೆ ಟಿಕೆಟ್‌ ಸಿಗು​ವುದು ಪಕ್ಕಾ ಆಗಿದೆ. ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಅವರೇ ಸ್ವತಃ ಗಣೇಶ್‌ ಪ್ರಸಾದ್‌ ಹೆಸರನ್ನು ಬಹಿ​ರಂಗ​ವಾಗಿ ಘೋಷಿ​ಸುವ ಮೂಲಕ ಅಭ್ಯರ್ಥಿ ಕುರಿತ ಗೊಂದ​ಲ​ಗ​ಳಿಗೆ ತೆರೆ ಎಳೆ​ದಿ​ದ್ದಾ​ರೆ. 

ಇಲ್ಲಿ ಮಂಗ​ಳ​ವಾರ ಆಯೋ​ಜಿ​ಸಿದ್ದ ಜನಧ್ವನಿ ಯಾತ್ರೆ ಉದ್ಘಾ​ಟಿಸಿದ ಬಳಿಕ ತಮಗೆ ಜೈಕಾರ ಹಾಕುತ್ತಿದ್ದ ಕಾರ್ಯಕರ್ತರನ್ನು ಉದ್ದೇ​ಶಿಸಿ ಮಾತ​ನಾ​ಡಿ​ದ ಅವರು, ‘ನನಗೆ ಜೈ ಎನ್ನಬೇಕಾದರೆ 25 ಸಾವಿರ ಮತ​ಗಳ ಅಂತರದಲ್ಲಿ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಗಣೇಶ್‌ ಪ್ರಸಾದ್‌ ಗೆಲ್ಲಬೇಕು ಎಂದರು. ಗಣೇಶ್‌ ಪ್ರಸಾದ್‌ ನೋಡಿದರೆ ಖುಷಿಯಾಗುತ್ತಿದೆ. ತಂದೆ, ತಾಯಿ ಮಾಡಿದ ಕೆಲಸವನ್ನು ನೆನಪಿಸಿ ಕಾರ್ಯಕರ್ತರ ಹೃದಯ ಗೆದ್ದಿದ್ದಾರೆ ಎಂದರು.

ಶಾಸಕಿ ಅನಿತಾಗೆ ಕಾಯದೆ ತಾಲೂಕು ಉದ್ಘಾಟನೆ: ಸಚಿವ ಅಶ್ವತ್ಥ್‌ ವಿರುದ್ಧ ಆಕ್ರೋಶ

ಬಿಜೆಪಿ ಶಾಸಕರ ಬಗ್ಗೆ ತಕರಾರಿಲ್ಲ ಆದ್ರೆ: ಶಾಸಕ ನಿರಂಜನ್‌ಕುಮಾರ್‌ ಗೆದ್ದು ಐದು ವರ್ಷ ಆಗಿದೆ. ಬಿಜೆಪಿಯ ಡಬ್ಬಲ್‌ ಎಂಜಿನ್‌ ಸರ್ಕಾರದಲ್ಲಿ ಕೆರೆ ತುಂಬಿಸಿದ್ರಾ. ಕಾರ್ಖಾನೆ ತಂದ್ರಾ, ಆಕ್ಸಿಜನ್‌ ನಲ್ಲಿ ಸತ್ತವರಿಗೆ ಪರಿಹಾರ ಕೊಡಿಸಿದ್ರಾ? ಶಾಸಕನಾಗಿ ಕೇಳಿದ್ರಪ್ಪ ಎಂದು ಚುಚ್ಚಿದರು. ಗಣೇಶ್‌ ಪ್ರಸಾದ್‌ ನೋಡಿದ್ರೆ ಖುಷಿಯಾಗುತ್ತಿದೆ. ತಂದೆ, ತಾಯಿ ಮಾಡಿದ ಕೆಲಸವನ್ನು ನೆನಪಿಸಿ ಕಾರ್ಯಕರ್ತರ ಹೃದಯ ಗೆದ್ದಿದ್ದಾರೆ ಎಂದರು. ಮುಖ್ಯಮಂತ್ರಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸ್ಥಳೀಯ ಶಾಸಕರು ತಮ್ಮ ಅವಧಿಯಲ್ಲಿ ಏನು ಮಾಡಿದ್ದೀರಾ ಎಂದು ಕೇಳಿ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು. ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪಿ.ಮರಿಸ್ವಾಮಿ,ಮಾಜಿ ಸಂಸದ ಎ.ಸಿದ್ದರಾಜು ಮಾತನಾಡಿದರು.

ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ನಳಪಾಡ್‌, ಜಿ.ಎ.ಬಾವಾ,ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಚ್‌.ಸಿ. ಬಸವರಾಜು,ಮಾಜಿ ಶಾಸಕ ಆರ್‌. ಕೃಷ್ಣಮೂರ್ತಿ, ಎಸ್‌.ಬಾಲರಾಜ್‌,ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಲತಾ ಜತ್ತಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಬಿ.ಎಂ.ಮುನಿರಾಜು, ಪಿ.ಬಿ.ರಾಜಶೇಖರ್‌, ಚಾಮುಲ್‌ ಮಾಜಿ ಅಧ್ಯಕ್ಷ ಎಚ್‌.ಎಸ್‌. ನಂಜುಂಡಪ್ರಸಾದ್‌, ಕಾಂಗ್ರೆಸ್‌ ಮುಖಂಡರಾದ ವೈ.ಎನ್‌. ಶಂಕರೇಗೌಡ,ಕೆ.ಎಸ್‌.ಮಹೇಶ್‌, ಜಿ.ಕೆ. ನಾಜೀಮುದ್ದೀನ್‌, ಆಲತ್ತೂರು ಜಯರಾಂ, ಎಸ್‌. ಶಿವನಾಗಪ್ಪ, ಕೆರಹಳ್ಳಿ ನವೀನ್‌, ಹಂಗಳ ನಟೇಶ್‌, ಬೆಟ್ಟಹಳ್ಳಿ ಕೆಂಪರಾಜು, ಮಂಚಹಳ್ಳಿ ಲೋಕೇಶ್‌, ಕಬ್ಬಹಳ್ಳಿ ದೀಪು, ಕಗ್ಗಳದ ಮಾದಪ್ಪ, ಬೇರಂಬಾಡಿ ರಾಜೇಶ್‌, ನೇನೇಕಟ್ಟೆಗಂಗಾಧರಪ್ಪ, ಬಿ.ಕುಮಾರಸ್ವಾಮಿ, ಪಿ.ಸುರೇಂದ್ರ, ಕಾರ್ಗಳ್ಳಿ ಸುರೇಶ್‌, ಲಿಂಗರಾಜು, ಪುರಸಭೆ ಸದಸ್ಯರು, ಎಪಿಎಂಸಿ ಸದಸ್ಯರು ಸೇರಿದಂತೆ, ಇತರರು ಇದ್ದರು.

ಲಾ ಸ್ಕೂಲ್‌ನಲ್ಲಿ ಕನ್ನಡಿಗರ ಮೀಸಲಿಗೆ ಬದ್ಧ: ಸಚಿವ ಮಾಧುಸ್ವಾಮಿ

ಕಾಂಪಿಟೇಶನ್‌ ಇಲ್ಲ ಇಡ್ರೀ ಬೋರ್ಡನಾ!: ಜನಧ್ವನಿ ಯಾತ್ರೆಯಲ್ಲಿ ಗಣೇಶ ಪ್ರಸಾದ್‌ ಬೋರ್ಡ್‌ ಹಿಡಿದು ಕಾರ್ಯಕರ್ತರು ಕೂಗುತ್ತಿದ್ದಾಗ ಕಾಂಪಿಟೇಶನ್‌ ಇಲ್ಲ ಇಡ್ರೀ ಬೋರ್ಡನಾ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು. ಗುಂಡ್ಲುಪೇಟೆಯಲ್ಲಿ ಮಂಗಳವಾರ ನಡೆದ ಜನಧ್ವನಿ ಯಾತ್ರೆಯನ್ನು ನಗಾರಿ ಭಾರಿಸುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಉದ್ಘಾಟಿಸಿದರು. ಯುವ ಮುಖಂಡ ಎಚ್‌.ಎಂ. ಗಣೇಶ್‌ ಪ್ರಸಾದ್‌, ಮಾಜಿ ಸಂಸದರಾದ ಆರ್‌. ಧ್ರುವನಾರಾಯಣ, ಎ. ಸಿದ್ದರಾಜು,ನಂಜಪ್ಪ, ಮಹೇಶ್‌, ನಂಜುಂಡಪ್ರಸಾದ್‌, ಇತರರು ಇದ್ದಾರೆ.

Latest Videos
Follow Us:
Download App:
  • android
  • ios