ಪ್ರತಿ ಹಳ್ಳಿಯ ಟಾಪ್ 10 ಕಾಂಗ್ರೆಸ್ ಕಾರ್ಯಕರ್ತರಿಗೆ ಟಿವಿ ಗಿಫ್ಟ್: ಡಿ.ಕೆ.ಶಿವಕುಮಾರ್
ಮತದಾರರಿಗೆ 200 ಯೂನಿಟ್ ಉಚಿತ ವಿದ್ಯುತ್, ಗೃಹಿಣಿಯರಿಗೆ 2 ಸಾವಿರ ರುಪಾಯಿ ಆರ್ಥಿಕ ನೆರವು, 10 ಕೆ.ಜಿ. ಉಚಿತ ಅಕ್ಕಿ ಘೋಷಿಸಿದ್ದಾಯ್ತು, ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಾರ್ಯಕರ್ತರಿಗೆ ಟಿವಿ ಉಡುಗೊರೆ ಘೋಷಿಸಿದ್ದಾರೆ.
ಚಾಮರಾಜನಗರ (ಫೆ.22): ಮತದಾರರಿಗೆ 200 ಯೂನಿಟ್ ಉಚಿತ ವಿದ್ಯುತ್, ಗೃಹಿಣಿಯರಿಗೆ 2 ಸಾವಿರ ರುಪಾಯಿ ಆರ್ಥಿಕ ನೆರವು, 10 ಕೆ.ಜಿ. ಉಚಿತ ಅಕ್ಕಿ ಘೋಷಿಸಿದ್ದಾಯ್ತು, ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಾರ್ಯಕರ್ತರಿಗೆ ಟಿವಿ ಉಡುಗೊರೆ ಘೋಷಿಸಿದ್ದಾರೆ. ಈ ಮೂಲಕ ಕೆಪಿಸಿಸಿ ಚುನಾವಣಾ ಪ್ರಣಾಳಿಕೆಯನ್ನು ಮನೆ ಮನೆಗೆ ತಲುಪಿಸಲು ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದಾರೆ.
ಹನೂರಿನಲ್ಲಿ ಮಂಗಳವಾರ ಪ್ರಜಾಧ್ವನಿ ಯಾತ್ರೆ ಉದ್ಘಾಟಿಸಿ ಮಾತನಾಡಿ ಕಾಂಗ್ರೆಸ್‌ನ ವಚನವಾದ ಉಚಿತ ವಿದ್ಯುತ್, ಗೃಹಿಣಿಯರಿಗೆ 2 ಸಾವಿರ ಆರ್ಥಿಕ ನೆರವು ನೀಡುವ ಗೃಹಲಕ್ಷ್ಮಿ ಯೋಜನೆ, ಬಡವರಿಗೆ 10 ಕೆ.ಜಿ.ಉಚಿತ ಅಕ್ಕಿ ಗ್ಯಾರಂಟಿ ಚೆಕ್ ಅನ್ನು ಪ್ರತಿ ಮನೆ ಬಾಗಿಲಿಗೆ ತಲುಪಿಸಬೇಕು. ಪಕ್ಷ ಯಾವುದೇ ಇರಲಿ, ಎಲ್ಲರ ಮನೆ ಬಾಗಿಲಿಗೆ ತೆರಳಿ ಕಾಂಗ್ರೆಸ್ ಪ್ರಣಾಳಿಕೆ ತಿಳಿಸಬೇಕು, ಪ್ರತಿ ಗ್ರಾಪಂನಲ್ಲಿ ಅತಿ ಹೆಚ್ಚು ಹೆಸರು ರಿಜಿಸ್ಟರ್ ಮಾಡಿದ 10 ಕಾರ್ಯಕರ್ತರಿಗೆ ಟೀವಿ ಕೊಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಘೋಷಿಸಿದರು.
ಮೀಸಲು ಕ್ಷೇತ್ರ ಸುಳ್ಯದಲ್ಲಿ ಈ ಬಾರಿ ಹೊಸಬರ ದರ್ಬಾರು: ಸಚಿವ ಅಂಗಾರ ಸ್ಪರ್ಧೆ ಡೌಟ್
ದುಡ್ಡು ಇಸ್ಕೊಳಿ-ಓಟ್ ‘ಕೈ’ಗೆ ಹಾಕಿ: ಹೊರಗಿಂದ ಬಂದ ಕೆಲವರು ಕ್ಷೇತ್ರದ ಜನರಿಗೆ ಹಣ ಮತ್ತಿತರ ಆಮಿಷ ತೋರಿಸುತ್ತಿದ್ದಾರೆ ಎಂದು ಶಾಸಕ ನರೇಂದ್ರ ಹೇಳಿದ್ದಾರೆ. ನಾನು ಮತದಾರರಿಗೆ ಹೇಳುವುದಿಷ್ಟೆ. ಬಿಜೆಪಿ ಅವರಾಗಲಿ, ಜೆಡಿಎಸ್‌ನವರಾಗಲಿ, ಮತ್ತೊಬ್ಬರಾಗಲಿ ದುಡ್ಡು ಕೊಟ್ಟರೆ ಸ್ವೀಕರಿಸಿ, ಓಟ್ ಮಾತ್ರ ಕಾಂಗ್ರೆಸ್‌ಗೆ ಹಾಕಿ ಎಂದು ಸಲಹೆ ನೀಡಿದರು. ಈಗಾಗಲೇ 200 ಯೂನಿಟ್ ಉಚಿತ ವಿದ್ಯುತ್, ಮನೆ ಯಜಮಾನಿಗೆ .2000, 10 ಕೆ.ಜಿ. ಉಚಿತ ಅಕ್ಕಿಯನ್ನು ಅಧಿಕೃತವಾಗಿ ಘೋಷಿಸಿದ್ದೇವೆ. ನಾವೇನಾದರೂ ಈ ಭರವಸೆ ಈಡೇರಿಸದಿದ್ದರೆ ಇನ್ನು ಮುಂದೆ ಮತ ಕೇಳಲು ನಿಮ್ಮ ಮುಂದೆ ಬರಲ್ಲ ಎಂದು ಘೋಷಿಸಿದರು.
ಅಶ್ವತ್ಥ ವಿರುದ್ಧ ಕೇಸ್, ಪೊಲೀಸರಿಗೆ ಡಿಕೆಶಿ ಎಚ್ಚರಿಕೆ: ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಎಲ್ಲಿ ಕೊಲೆಗೆ ಪ್ರಚೋದಿಸುವ ಹೇಳಿಕೆ ನೀಡಿದರೋ ಅಲ್ಲೇ ಕೇಸ್ ದಾಖಲಾಗಿ ಅವರನ್ನು ಬಂಧಿಸಬೇಕು. ತಪ್ಪಿದಲ್ಲಿ ಪೊಲೀಸ್ ಅಧಿಕಾರಿಗಳು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಸಿದರು. ಅಶ್ವತ್ಥ ನಾರಾಯಣ ಅವರೊಬ್ಬ ಮಂತ್ರಿಯಾಗಿ ಮಾಜಿ ಮುಖ್ಯಮಂತ್ರಿ ಕೊಲೆಗೆ ಪ್ರಚೋದನೆ ಕೊಟ್ಟಿದ್ದಾರೆ. ಕ್ಷಮಾಪಣೆ ಕೇಳುವುದೆಲ್ಲ ಬೇಡ, ದೇಶದ ಕಾನೂನು ಏನಿದೆ ಅದನ್ನು ರಾಜ್ಯ ಸರ್ಕಾರ ಪಾಲಿಸಲಿ ಎಂದು ಒತ್ತಾಯಿಸಿದರು.
11267 ಕೋಟಿ ಪೂರಕ ಅಂದಾಜು ಮಂಡನೆ: ಸಚಿವ ಜೆ.ಸಿ.ಮಾಧುಸ್ವಾಮಿ
ಅಶ್ವತ್ಥ ನಾರಾಯಣ ಹೇಳಿಕೆಯ ಪರಿಣಾಮ ಮುಂದೆ ಎದುರಿಸಬೇಕಾಗುತ್ತದೆ. ಅವರ ಬಂಧನ ಆಗದಿದ್ದರೆ ಪೊಲೀಸ್ ಅಧಿಕಾರಿಗಳೂ ಹೊಣೆಯಾಗುತ್ತಾರೆ. ಅವರು ನಿವೃತ್ತಿ ಆದರೂ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಟಿಪ್ಪುವನ್ನು ಯಾರೋ ಗೌಡ ಕೊಂದ ಅಂತ ಹೇಳುತ್ತಿದ್ದಾರೆ. ಅವರು ಯಾವ ಇತಿಹಾಸ ಹೇಳುತ್ತಿದ್ದಾರೋ ಗೊತ್ತಿಲ್ಲ ಎಂದು ಬಿಜೆಪಿಗರ ಟಿಪ್ಪು ಕೊಂದ ಹೇಳಿಕೆಗೆ ಕಿಡಿಕಾರಿದರು.