Karnataka Politics: ಚಿಕ್ಕಮಕ್ಕಳಲ್ಲಿ ಕೋಮು ವಿಷಬೀಜ ಬಿತ್ತುತ್ತಿದೆ ಬಿಜೆಪಿ: ಡಿಕೆಶಿ
* ಆಯ್ಕೆಯಾಗಲ್ಲವೆಂದೇ ಹೊಸ ಮುಖಗಳಿಗೆ ಬಿಜೆಪಿ ಅವಕಾಶ
* ಪಠ್ಯಪುಸ್ತಕ ಬದಲಾವಣೆ ಮೂಲಕ ಚಿಕ್ಕಮಕ್ಕಳಲ್ಲಿ ವಿಷಬೀಜ ಬಿತ್ತಲು ಹೊರಟಿದ್ದಾರೆ
* ಎಂ.ಬಿ.ಪಾಟೀಲ್, ನಮ್ಮ ಪಕ್ಷದಲ್ಲಿ ಹೆಣ್ಣು ಮಕ್ಕಳಿಗೆ ಅತೀ ಹೆಚ್ಚು ಗೌರವ ಕೊಡುವವರು
ಬೆಳಗಾವಿ(ಮೇ.26): ಧಾರವಾಡ, ಹಾಸನ, ಮಂಡ್ಯ ಹಾಗೂ ಮೈಸೂರು ಜಿಲ್ಲೆಯಲ್ಲಿ ಅವರ (ಬಿಜೆಪಿ) ಪಕ್ಷದ ನಾಯಕರು ಆಯ್ಕೆಯಾಗುವುದಿಲ್ಲ ಎಂಬ ಆತಂಕದಿಂದಲೇ ಹೊಸಮುಖಗಳಿಗೆ ಅವಕಾಶ ನೀಡಿದ್ದಾರೆ. ಹೀಗಾಗಿ ಹೊರಟ್ಟಿ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.
ನಗರದ ಮರಾಠಾ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಸರ್ಕಾರಿ ಹುದ್ದೆ, ಅಭಿವೃದ್ಧಿ ಕೆಲಸಕ್ಕಾಗಿ ಕಮಿಷನ್ ನೀಡಬೇಕಿದೆ. ಸದ್ಯ ಬಿಜೆಪಿ ಆಡಳಿತದಲ್ಲಿ ಹಣಕ್ಕಾಗಿ ಎಲ್ಲವೂ ನಡೆಯುತ್ತಿದೆ. ಪಿಎಸ್‌ಐ ನೇಮಕಾತಿಯಿಂದ ಹಿಡಿದು ಎಲ್ಲವೂ ಹಣದ ಹೊಳೆ ಹರಿಯುತ್ತಿದೆ. ಇದು ಭ್ರಷ್ಟಾಚಾರದಿಂದ ಸಾಧ್ಯವಾಗುತ್ತಿದೆ ಎಂದು ದೂರಿದರು.
MLC Election: ಕಾಂಗ್ರೆಸ್ ಸಭೆಯಿಂದ ಹೆಬ್ಬಾಳಕರ ದೂರವಾಗಿದ್ದಾದರೂ ಏಕೆ?
ಪಠ್ಯ ಪುಸ್ತಕದಲ್ಲಿ ಬದಲಾವಣೆ ಮಾಡುವ ಮೂಲಕ ಬಿಜೆಪಿ ದೇಶ ಹಾಗೂ ರಾಜ್ಯದ ಚರಿತ್ರೆಯನ್ನು ಬದಲಾವಣೆ ಮಾಡುತ್ತಿದೆ. ಕಳೆದ 45 ವರ್ಷಗಳಿಂದ ಪಠ್ಯ ಪುಸ್ತಕಗಳಲ್ಲಿ ಬಿಜೆಪಿಯ ಜನರನ್ನು ಸೇರಿಸಲು ಹೊರಟಿರುವುದು ದುರಂತ. ಈ ಹಿಂದೆ ಶಿಕ್ಷಣ ಸಚಿವರಾಗಿದ್ದ ವಿಶ್ವನಾಥ ಅವರು ಈಗ ಹಾಲಿ ಬಿಜೆಪಿ ನಾಯಕರು ಅವರು ನೀಡಿರುವ ಹೇಳಿಕೆಗೆ ಬಿಜೆಪಿಯವರು ಉತ್ತರ ನೀಡಲಿ. ನಮ್ಮ ನಿರ್ಧಾರ ಸ್ಪಷ್ಟವಾಗಿದೆ. ಪಠ್ಯ ಪುಸ್ತಕಗಳಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಭಗತ್‌ಸಿಂಗ್, ನಾರಾಯಣಗುರು, ಗಾಂಧಿ ಅವರ ವಿಚಾರ ಯಾವುದು ಕೂಡ ಬದಲಾವಣೆ ಮಾಡಬಾರದು. ಈಗಿರುವವರು ವಿದ್ಯಾವಂತರಾಗಲಿಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚಿಕ್ಕಮಕ್ಕಳಿಗೆ ವಿಷ ಬೀಜ ಬಿತ್ತುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ತಾಂಬೂಲ ಪ್ರಶ್ನೆಗೆ ಅವಕಾಶ ಬೇಡ:
ಪಠ್ಯಪುಸ್ತಕ ಬದಲಾವಣೆ ಕುರಿತಾಗಿ ಬರಗೂರು ರಾಮಚಂದ್ರಪ್ಪ ಅವರು ಈಗ ಅದರ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಈಗ ಆಗುವ ಮುನ್ನ ಅವರು ಭಗತ್ ಸಿಂಗ್ ಅವರ ಹೆಸರು ಬಿಡುವುದು ವಾಪಸ್ ಪಡೆಯುವುದು, ನಾರಾಯಣ ಗುರು ಬಿಡುವುದು ಇತ್ತೀಚೆಗೆ ತೆಗೆದುಕೊಳ್ಳುವುದನ್ನು ಮಾಡುತ್ತಿದ್ದಾರೆ ಎಂದ ಅವರು, ನಮ್ಮದು ನಿರಂತರ ಹೋರಾಟ ಜನರಿಗೆ ಮನದಟ್ಟು ಮಾಡುವ ಕೆಲಸ ಮಾಡುತ್ತೇವೆ ಎಂದರು.
ಬಡವರಿಗೆ, ಯುವಕರಿಗೆ, ವಿದ್ಯಾವಂತರಿಗೆ ನಿರುದ್ಯೋಗದ ಸಮಸ್ಯೆ, ದೇಶದಲ್ಲಿ ಆಗುತ್ತಿರುವ ಸಮಸ್ಯೆ ಬಗ್ಗೆ ಅವರು ಯೋಚನೆ ಮಾಡುತ್ತಿಲ್ಲ. ಆದರೆ ಪಠ್ಯಪುಸ್ತಕ ಬದಲಾವಣೆ ಮಾಡುವ ಮೂಲಕ ಚಿಕ್ಕ ಮಕ್ಕಳಲ್ಲಿ ಕೋಮು ವಿಷ ಬೀಜವನ್ನ ಬಿತ್ತಲು ಹೊರಟಿದ್ದಾರೆ ಎಂದರು. ತಾಂಬೂಲ ಪ್ರಶ್ನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಅವರ ಪರ್ಸನಲ್, ಸರ್ಕಾರ ಇಂತಹದ್ದಕ್ಕೆ ಅವಕಾಶ ನೀಡಬಾರದು. ಇಂತಹ ಪ್ರಶ್ನೆಗಳನ್ನು ನೀವು ಹಾಕೋಬಹುದು ನಾನು ಹಾಕೋಬಹುದು ಎಂದರು.
ಚಿಕ್ಕಮಕ್ಕಳಲ್ಲಿ ವಿಷಬೀಜ ಬಿತ್ತುತ್ತಿದೆ ಬಿಜೆಪಿ: ಡಿಕೆಶಿ
ಬೆಳಗಾವಿ: ಪಠ್ಯ ಪುಸ್ತಕ ಬದಲಾವಣೆ ಮಾಡುವ ಮೂಲಕ ಚಿಕ್ಕ ಮಕ್ಕಳಿಗೆ ಕೋಮು ವಿಷ ಬೀಜವನ್ನು ಬಿತ್ತಲು ಹೊರಟಿದ್ದಾರೆ. ಇದು ಬಿಜೆಪಿಯವರ ಪಾರ್ಟಿ ಅಜೆಂಡಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಕಿಡಿಕಾರಿದರು.
'ತೈಲ ಬೆಲೆ ಏರಿಳಿಸುವುದರಲ್ಲಿ ಮೋದಿ ಮ್ಯಾಜಿಕ್ ಮ್ಯಾನ್'
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅವರು ಬುದ್ಧಿವಂತರಾಗಿದ್ದರೆ ಇದನ್ನು ಸಾರ್ವಜನಿಕ ಚರ್ಚೆಗೆ ಬಿಡಬಾರದಾಗಿತ್ತು. ಬರಗೂರು ರಾಮಚಂದ್ರಪ್ಪ ಅವರು ಈಗ ಅದರ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಈಗ ಆಗುವ ಮುನ್ನ ಅವರು ಭಗತ್ ಸಿಂಗ್ ಅವರ ಹೆಸರು ಬಿಡುವುದು ವಾಪಸ್ ಪಡೆಯುವುದು, ನಾರಾಯಣ ಗುರು ಬಿಡುವುದು ತೆಗೆದುಕೊಳ್ಳುವುದನ್ನು ಮಾಡುತ್ತಿದ್ದಾರೆ ಎಂದರು. ತಾಂಬೂಲ ಪ್ರಶ್ನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಅವರ ಪರ್ಸನಲ್, ಸರ್ಕಾರ ಇಂತಹದ್ದಕ್ಕೆ ಅವಕಾಶ ನೀಡಬಾರದು. ಇಂತಹ ಪ್ರಶ್ನೆಗಳನ್ನು ನೀವು ಹಾಕೋಬಹುದು ನಾನು ಹಾಕೋಬಹುದು ಎಂದರು.
ಚುನಾವಣೆಯಲ್ಲಿ ಕಾಂಗ್ರೆಸ್ ಮಹಿಳೆಯರಿಗೆ ಟಿಕೆಟ್ ನೀಡಲ್ಲ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿ ಎಂ.ಬಿ.ಪಾಟೀಲ್, ನಮ್ಮ ಪಕ್ಷದಲ್ಲಿ ಹೆಣ್ಣು ಮಕ್ಕಳಿಗೆ ಅತೀ ಹೆಚ್ಚು ಗೌರವ ಕೊಡುವವರು, ಲಕ್ಷ್ಮಿ ಹೆಬ್ಬಾಳ್ಕರ ಇಲ್ಲೇ ಇದ್ದಾರೆ ನೋಡಿ ಎಂದರು. ನಂತರ ಮಧ್ಯಪ್ರವೇಶಿಸಿದ ಡಿ.ಕೆ.ಶಿವಕುಮಾರ, ಇವರದ್ದು ಬಿಡಿ ಎಂದ ಅವರು, ಹಿಂದೆ ನಾಲ್ಕು ಜನ ಮಹಿಳೆಯರಿಗೆ ಟಿಕೆಟ್ ಕೊಟ್ಟಿದ್ದೆವೆ. ಈಗಲೂ ಕೊಡುತ್ತೇವೆ. ಸರ್ಕಾರ ತರಬೇಕು ತಂದಾಗ ಅವಕಾಶ ಸಿಗುತ್ತದೆ ಎಂದರು.