Asianet Suvarna News Asianet Suvarna News

ಏನ್‌ ಟೋಪಿ ಹಾಕಿಬಿಟ್ರು ರೀ ನಮ್ಮ ಬಸಣ್ಣ: ಡಿ.ಕೆ.ಶಿವಕುಮಾರ್‌

‘ಒಕ್ಕಲಿಗ ಹಾಗೂ ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಏನ್‌ ಟೋಪಿ ಹಾಕಿಬಿಟ್ರು ರೀ ನಮ್ಮ ಬಸಣ್ಣ. ತುಪ್ಪವನ್ನು ಮೊಣಕೈಗೂ ಸವರಿಲ್ಲ, ಮೂಗಿಗೂ ಸವರಿಲ್ಲ. ತಲೆ ಮೇಲೆ ಸುರಿದು ಬಿಟ್ಟಿದ್ದಾರೆ. ನಾಲಿಗೆ ಹೇಗೆ ಮಾಡಿದರೂ ನಾಲಿಗೆಗೆ ತುಪ್ಪ ಸಿಗುತ್ತಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವ್ಯಂಗ್ಯವಾಗಿ ಹೇಳಿದ್ದಾರೆ.

KPCC President DK Shivakumar Slams On CM Basavaraj Bommai Over Reservation gvd
Author
First Published Jan 2, 2023, 1:30 AM IST

ಬೆಂಗಳೂರು (ಜ.02): ‘ಒಕ್ಕಲಿಗ ಹಾಗೂ ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಏನ್‌ ಟೋಪಿ ಹಾಕಿಬಿಟ್ರು ರೀ ನಮ್ಮ ಬಸಣ್ಣ. ತುಪ್ಪವನ್ನು ಮೊಣಕೈಗೂ ಸವರಿಲ್ಲ, ಮೂಗಿಗೂ ಸವರಿಲ್ಲ. ತಲೆ ಮೇಲೆ ಸುರಿದು ಬಿಟ್ಟಿದ್ದಾರೆ. ನಾಲಿಗೆ ಹೇಗೆ ಮಾಡಿದರೂ ನಾಲಿಗೆಗೆ ತುಪ್ಪ ಸಿಗುತ್ತಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವ್ಯಂಗ್ಯವಾಗಿ ಹೇಳಿದ್ದಾರೆ. ಭಾನುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಿದ ಅವರು, ಒಕ್ಕಲಿಗ ಹಾಗೂ ಪಂಚಮಸಾಲಿಗೆ ಮೀಸಲಾತಿ ನೀಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಕೈಗೊಂಡಿರುವ ತೀರ್ಮಾನದ ಬಗ್ಗೆ ಆಂಗಿಕ ಅಭಿನಯದ ಮೂಲಕ ಲೇವಡಿ ಮಾಡಿದರು. 

ಸಚಿವ ಸಂಪುಟದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಪಂಚಮಸಾಲಿ ಸ್ವಾಮೀಜಿಗಳಿಗೆ ಮೊದಲು ಅಭಿನಂದನೆ ಸಲ್ಲಿಸುತ್ತೇನೆ. ಸರ್ಕಾರ ಮಾಡಿರುವ ದ್ರೋಹಕ್ಕೆ ಪಂಚಮಸಾಲಿ ಶಾಸಕರು, ಸಚಿವರು ರಾಜೀನಾಮೆ ಕೊಡಬೇಕು. ಇನ್ನು ಮಾನ ಮರ್ಯಾದೆ ಇದ್ದರೆ ಕಂದಾಯ ಸಚಿವ ಆರ್‌. ಅಶೋಕ್‌ ಕೂಡ ರಾಜೀನಾಮೆ ಕೊಟ್ಟು ಹೊರಗೆ ಬರಲಿ. ಒಕ್ಕಲಿಗ ಸ್ವಾಮೀಜಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಅಂದು ಸಭೆಯಲ್ಲಿ ಅಶೋಕ್‌ ಇದೇ ಭರವಸೆ ಕೊಟ್ಟು ಹೋಗಿದ್ದರು. ಈಗ ನೋಡಿದರೆ ಸಂಪುಟದಲ್ಲಿ ಪಕ್ಕದಲ್ಲಿ ಕೂತಿದ್ದಾರೆ. ಅವರೂ ಸಹ ರಾಜೀನಾಮೆ ಕೊಟ್ಟು ಮೀಸಲಾತಿ ಕುರಿತು ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂದು ಆಗ್ರಹಿಸಿದರು.

ಕೊರೋನಾ ಹೆಸರಿನಲ್ಲಿ ಭಯದ ವಾತಾವರಣ: ಡಿ.ಕೆ.ಶಿವಕುಮಾರ್‌

ಕೆಎಂಎಫ್‌-ಅಮುಲ್‌ ವಿಲೀನ, ಸಿಎಂಗೆ ಡಿಕೆಶಿ ಸವಾಲು: ‘ಅಮಿತ್‌ ಶಾ ಕೆಎಂಎಫ್‌ ಅಮುಲ್‌ ಜತೆಗೂಡಬೇಕು ಎಂದಿದ್ದಾರೆ. ನಮ್ಮ ಸಂಸ್ಥೆಯನ್ನು ಯಾವ ರಾಜ್ಯದ ಹಾಲಿನ ಒಕ್ಕೂಟದ ಜತೆಯೂ ವಿಲೀನ ಮಾಡುವ ಅಗತ್ಯವಿಲ್ಲ. ಹಾಲು, ನೀರು, ಜನ ಇದು ನಮ್ಮ ಹಕ್ಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ನಿರ್ಣಯ ಮಾಡಲಿ ನೋಡೋಣ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸವಾಲು ಹಾಕಿದ್ದಾರೆ. ಇದು ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ಅಮುಲ್‌ ಉತ್ತಮ ಸಂಸ್ಥೆಯಾಗಿರಬಹುದು. 

ಡಿಕೆಶಿ ಕುಕ್ಕರ್‌ ಬಾಂಬ್‌ ಹೇಳಿಕೆ ಬಗ್ಗೆ ರವಿ ಪ್ರಸ್ತಾಪದಿಂದ ಗದ್ದಲ

ಆದರೆ, ಅದಕ್ಕೆ ಪ್ರಬಲ ಸ್ಪರ್ಧೆಯೊಡ್ಡಬಲ್ಲ ಎಲ್ಲಾ ಸಾಮರ್ಥ್ಯ ಕೆಎಂಎಫ್‌ ಸಂಸ್ಥೆಗೆ ಇದೆ. ನಮ್ಮ ಹಾಲು, ನಮ್ಮ ನೀರು, ನಮ್ಮ ಜನ, ನಮ್ಮ ಹಕ್ಕು. ಶಾ ಅವರು ಹೇಳಿರುವ ಮಾತನ್ನು ರಾಜ್ಯ ಸಹಕಾರ ಸಚಿವ ಸೋಮಶೇಖರ್‌ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಅವರು ನಿರ್ಣಯದ ಮೂಲಕ ಪ್ರಸ್ತಾಪಿಸಲಿ ಎಂದರು. ನಮ್ಮ ಕನಕಪುರದಲ್ಲಿ ಅಮೂಲ್‌ ಕಂಪನಿಗಿಂತ ದೊಡ್ಡ ಹಾಲು ಉತ್ಪಾದನೆ ಘಟಕ ಇದೆ. ನಮ್ಮ ಸಂಸ್ಥೆ ಲಾಭದಲ್ಲಿ ನಡೆಯುತ್ತಿದೆ. ನಮ್ಮ ರೈತರನ್ನು ಶಕ್ತಿಶಾಲಿ ಮಾಡಬೇಕೆ ಹೊರತು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.

Follow Us:
Download App:
  • android
  • ios