ಅಘೋಷಿತ ಲಾಕ್ಡೌನ್ ಮಾಡಿಸಿರುವುದಕ್ಕೆ ಡಿಕೆಶಿ ಫುಲ್ ಗರಂ
ರಾಜ್ಯದಲ್ಲಿ ಅಘೋಷಿತ ಲಾಕ್ಡೌನ್ ಮಾಡಿಸಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರು, (ಏ.23): ನಿನ್ನೆ (ಏ.22)ಒತ್ತಾಯ ಪೂರ್ವಕವಾಗಿ ಬಂದ್ ಮಾಡಿಸಿದ್ದು, ವರ್ತಕ ಸಮುದಾಯದಲ್ಲಿ ಆತಂಕ ಮೂಡುವಂತೆ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏ.22ರಂದು ರಾಜ್ಯದಲ್ಲಿ ಅಘೋಷಿತ ಲಾಕ್ಡೌನ್ ಮಾಡಿಸಿರುವುದಕ್ಕೆ ಇಂದು (ಶುಕ್ರವಾರ) ಕೆಪಿಸಿಸಿ ಕಾರ್ಯಾಧ್ಯಕ್ಷರ ಜೊತೆ ಡಿ.ಕೆ. ಶಿವಕುಮಾರ್ ಸಭೆ ನಡೆಸಿದರು. ಈ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಧ್ರುವನಾರಾಯಣ್ ಹಾಗೂ ಕುಣಿಗಲ್ ಶಾಸಕ ಡಾ. ರಂಗನಾಥ್ ಭಾಗಿಯಾಗಿದ್ದರು.
ಕೊರೋನಾ ಸಂಕಷ್ಟದಲ್ಲಿರೋ ಜನರಿಗೆ ನೆರವಾಗಿ: ತಮ್ಮ ಶಾಸಕರಿಗೆ ಸಿದ್ದು ಮನವಿ
ಈ ಸಭೆಯ ನಂತರ ಮಾತನಾಡಿದ ಡಿ.ಕೆ. ಶಿವಕುಮಾರ್ ನಿನ್ನೆ (ಏ.22) ಅಘೋಷಿತವಾಗಿ ಅಂಗಡಿಗಳನ್ನ ಬಂದ್ ಮಾಡಿಸಿದ್ದಾರೆ. ಮೊನ್ನೆ ಮುಖ್ಯ ಕಾರ್ಯದರ್ಶಿ ಹೇಳಿದ್ದೇನು? ನಿನ್ನೆ ಮಾಡಿದ್ದೇನು..? ಎಂದು ಪ್ರಶ್ನಿಸಿದರು.
ಸರ್ಕಾರ ಸಾಮಾನ್ಯ ಜನರನ್ನ ತಪ್ಪು ದಾರಿಗೆ ಎಳೀತಿದೆ, ಅವರ ಆರೋಗ್ಯದ ಬಗ್ಗೆ ಯೋಚನೆ ಮಾಡುತ್ತಿಲ್ಲ, ಅವರ ಆರ್ಥಿಕ ಸ್ಥಿತಿಗತಿ ಬಗ್ಗೆಯೂ ಯೋಚನೆ ಮಾಡುತ್ತಿಲ್ಲ. ನೀವು ಲಾಕ್ಡೌನ್ ಅನೌನ್ಸ್ ಮಾಡಿಲ್ಲ, ಆದರೆ ಏಕಾಏಕಿ ಬಂದ್ ಮಾಡಿಸುತ್ತಿದ್ದೀರಿ ಎಂದು ಸರ್ಕಾರದ ನಡೆಗೆ ಕಿಡಿಕಾರಿದರು.