ಮತ್ತೆ ರಾಜ್ಯ ರಾಜ್ಯಕಾರಣದಲ್ಲಿ ಸದ್ದು ಮಾಡಿದ ಫೋನ್ ಟ್ಯಾಪ್
ರಾಜ್ಯದಲ್ಲಿ ಮತ್ತೆ ಫೋನ್ ಟ್ಯಾಪಿಂಗ್ ಸದ್ದು ಮಾಡಿದ್ದು, ರಾಜ್ಯ ರಾಜಕಾರಣಲ್ಲಿ ಸಂಚಲನ ಮೂಡಿಸಿದೆ.
ಬೆಂಗಳೂರು, (ಆ.21): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಫೋನ್ ಟ್ಯಾಪ್ ಆಗಿದೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.
"
ಇಂದು (ಶುಕ್ರವಾರ) ಮಾತನಾಡಿರುವ ಅವರು, ನನ್ನ ಫೋನ್ ಟ್ಯಾಪ್ ಆಗಿದೆ. ಟ್ಯಾಪ್ ಮಾಡಿರುವ ಬಗ್ಗೆ ದೂರು ದಾಖಲಿಸುತ್ತೇನೆ. ನಿನ್ನೆಯಿಂದ ಕರೆಗಳೇ ಬರುತ್ತಿಲ್ಲ, ಹೋಗುತ್ತಿಲ್ಲ. ಶೇಕಡ 100 ರಷ್ಟು ಫೋನ್ ಟ್ಯಾಪ್ ಆಗಿದೆ ಎಂದು ಆರೋಪಿಸಿದರು.
ನಿರ್ಮಲಾನಂದ ಸ್ವಾಮೀಜಿಯ ಫೋನ್ ಟ್ಯಾಪ್: ಅಶೋಕ್ ಕ್ಷಮೆ ಪ್ರಶ್ನಿಸಿದ ಕುಮಾರಸ್ವಾಮಿ
ನಮ್ಮ ಸುದರ್ಶನ್ 25 ಕಾಲ್ ಮಾಡಿದ್ದಾರೆ, ಆದರೆ ಒಮ್ಮೆಯೂ ನನಗೆ ಕಾಲ್ ಬಂದಿಲ್ಲ. ಪಾಪ ಏನು ಬೇಕೋ ಅವರು ಮಾಡಿಕೊಳ್ಳಲಿ. ಆದರೆ ನನ್ನ ಫೋನ್ ಟ್ಯಾಪಿಂಗ್ ಆಗುತ್ತಿರುವುದು ನಿಜ. ಹಿಂದೆಯೂ ಆಗುತ್ತಿತ್ತು,ಈಗ ಮತ್ತೆ ಆಗುತ್ತಿದೆ ಎಂದರು.
ಡಿಕೆಶಿ ಅವರ ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್. ಅಶೋಕ್, ಫೋನ್ ಟ್ಯಾಪ್ ಮಾಡುವ ಅಭ್ಯಾಸ, ಅವಶ್ಯಕತೆ ನಮ್ಮ ಸರ್ಕಾರಕ್ಕಿಲ್ಲ ಎಂದು ತಿರುಗೇಟು ನೀಡಿದರು.
ಹಿಂದೆ ಅವರದೇ ಸರ್ಕಾರ ಇದ್ದಾಗ ಫೋನ್ ಟ್ಯಾಪ್ ಆಗಿದ್ದು ಗೊತ್ತಿದೆ. ಹಿಂದಿನ ಸರ್ಕಾರದ ಫೋನ್ ಟ್ಯಾಪ್ ತನಿಖೆ ಒಂದು ಹಂತಕ್ಕೆ ಬರುತ್ತಿದೆ.
ಯಾರಿಗೆ ಫೋನ್ ಟ್ಯಾಪ್ ಮಾಡಿ ಅನುಭವ ಇದೆಯೋ, ಯಾವ ಸರ್ಕಾರ ಹಿಂದೆ ಫೋನ್ ಟ್ಯಾಪ್ ಮಾಡಿತ್ತೋ ಅವರೇ ಈಗ ಟ್ಯಾಪಿಂಗ್ ಬಗ್ಗೆ ಮಾತಾಡುತ್ತಿರೋದು ಆಶ್ಚರ್ಯವಾಗಿದ್ದು, ಭೂತದ ಬಾಯಲ್ಲಿ ಭಗದ್ಗೀತೆ ಹೇಳಿದಂತೆ ಕಾಣಿಸುತ್ತಿದೆ ಎಂದು ವ್ಯಂಗ್ಯವಾಡಿದರು.