ಕೊಳ್ಳೇಗಾಲ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ, ಶಾಸಕ ಎನ್ ಮಹೇಶ್ ವಿರುದ್ಧ ಮಾಜಿ ಶಾಸಕ ಗರಂ
2023 ರ ಚುನಾವಣಾ ಕಾವು ರಾಜ್ಯಾದ್ಯಂತ ಜೋರಾಗಿದೆ. ಈಗಾಗಲೆ ಗಡಿಜಿಲ್ಲೆ ಚಾಮರಾಜನಗರದಲ್ಲೂ ರಾಜಕೀಯ ಆಟ ಶುರುವಾಗಿದ್ದು ಕೊಳ್ಳೆಗಾಲ ನಗರಸಭೆ ಉಪಚುನಾವಣೆ ರಿಸಲ್ಟ್ ಹಾಲಿ ಮತ್ತು ಮಾಜಿ ಶಾಸಕರ ಮುಸುಕಿನ ಗುದ್ದಾಟಕ್ಕೆ ಎಡೆ ಮಾಡಿಕೊಟ್ಟಿದೆ.
ವರದಿ - ಪುಟ್ಟರಾಜು. ಆರ್.ಸಿ. ಏಷಿಯಾನೆಟ್ ಸುವರ್ಣ ನ್ಯೂಸ್
ಚಾಮರಾಜನಗರ (ನ.11): 2023 ರ ಚುನಾವಣಾ ಕಾವು ರಾಜ್ಯಾದ್ಯಂತ ಜೋರಾಗಿದೆ. ಈಗಾಗಲೆ ಗಡಿಜಿಲ್ಲೆ ಚಾಮರಾಜನಗರದಲ್ಲೂ ರಾಜಕೀಯ ಆಟ ಶುರುವಾಗಿದ್ದು ಕೊಳ್ಳೆಗಾಲ ನಗರಸಭೆ ಉಪಚುನಾವಣೆ ರಿಸಲ್ಟ್ ಹಾಲಿ ಮತ್ತು ಮಾಜಿ ಶಾಸಕರ ಮುಸುಕಿನ ಗುದ್ದಾಟಕ್ಕೆ ಎಡೆ ಮಾಡಿಕೊಟ್ಟಿದೆ. ಈ ಮೂಲಕ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಬಿಎಸ್ಪಿಯಿಂದ ಉಚ್ಚಾಟನೆಗೊಂಡು ಇದೀಗ ಕೇಸರಿ ಪಡೆ ಸೇರಿರುವ ಕೊಳ್ಳೇಗಾಲ ಶಾಸಕ ಎನ್. ಮಹೇಶ್ ವಿರುದ್ಧ ಸ್ವಪಕ್ಷದಲ್ಲೇ ವಿರೋಧಿಗಳು ಹೆಚ್ಚಾಗಿದ್ದಾರೆ. ಇದಕ್ಕೆ ಕಾರಣ ಕೊಳ್ಳೇಗಾಲ ನಗರಸಭೆ ಉಪಚುನಾವಣೆ. ಬಿಎಸ್ಪಿ ತ್ಯಜಿಸಿ ಬಂದು ಕಮಲ ಹಿಡಿದಿದ್ದ ಏಳು ಸದಸ್ಯರಿಗೆ ಬಿಎಸ್ಪಿ ಪಕ್ಷ ನಮ್ಮ ಚಿನ್ಹೆಯಾದಂತಹ ಆನೆ ಗುರುತಿನಿಂದ ಆಯ್ಕೆಯಾಗಿದ್ದಾರೆ ಹಾಗಾಗಿ ಇವರ ನಗರಸಭಾ ಸದಸ್ಯತ್ವ ರದ್ದುಗೊಳಿಸಬೇಕೆಂದು ಕೋರ್ಟ ಮೊರೆ ಹೋಗಿದ್ದರು ಜಿಲ್ಲಾ ನ್ಯಾಯಾಲಯ ಬಿಜೆಪಿ ಸೇರಿದ್ದ ಆರು ಜನರ ನಗರಸಭಾ ಸದಸ್ಯತ್ವವನ್ನು ರದ್ದುಗೊಳಿಸಿ ಆದೇಶಿಸಿತು ನಂತರ ಸದಸ್ಯತ್ವ ರದ್ದಗೊಳಿಸಿದ ಏಳು ಜನರಿಗೆ ಬಿಜೆಪಿಯಿಂದ ಮತ್ತೆ ಟಿಕೆಟ್ ತರುವಲ್ಲಿ ಎನ್.ಮಹೇಶ್ ಯಶಸ್ವಿಯಾಗಿದ್ದರು. ನಂತರ ನಡೆದ ಕೊಳ್ಳೇಗಾಲ ನಗರಸಭೆಯ ಏಳು ವಾರ್ಡಗಳಿಗೆ ನಡೆದ ಉಪಚುನಾವಣೆಯಲ್ಲಿ ಆರು ವಾರ್ಡಗಳಲ್ಲಿ ಬಿಜಿಪಿ ಜಯಭೇರಿ ಬಾರಿಸುವಲ್ಲಿ ಎನ್.ಮಹೇಶ್ ಪ್ರಮುಖ ಪಾತ್ರವಹಿಸಿದರು. ಇತ್ತ ಆರು ಬಾರಿ ಚುನಾವಣೆ ಎದುರಿಸಿ ಎರಡು ಬಾರಿ ಶಾಸಕರಾಗಿರುವ ಜಿ.ಎನ್. ನಂಜುಂಡಸ್ವಾಮಿ ತಾವೇ ಅಭ್ಯರ್ಥಿ ಎಂಬ ಉಮೇದಿನಲ್ಲಿದ್ದರು.
ಆದರೆ ಉಪಚುನಾವಣೆಯ ಗೆಲುವು ಶಾಸಕ ಮಹೇಶ್ ಪಾಲಿಗೆ ವರವಾಗಿದೆ. ಜೊತೆಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗು ಸಚಿವ ಸೋಮಣ್ಣ ಅವರು ಸಭೆ ಸಮಾರಂಭಗಳಲ್ಲಿ ಎನ್.ಮಹೇಶ್ ಅವರನ್ನು ಗೆಲ್ಲಿಸಬೇಕೆಂದು ಬಹಿರಂಗ ಹೇಳಿಕೆ ನೀಡಿರುವುದು ನಂಜುಂಡಸ್ವಾಮಿ ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಹೀಗಾಗಿ ಅವರು ಎನ್. ಮಹೇಶ್ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಯಲ್ಲಿ ಯಾರಿಗೂ ಟಿಕೆಟ್ ಘೋಷಣೆಯಾಗಿಲ್ಲ. ನಾನು ಕೂಡ ಪ್ರಬಲ ಆಕಾಂಕ್ಷಿ ಅಂತಿದ್ದಾರೆ.
Chamarajanagar: 7 ವಾರ್ಡ್‌ಗಳಲ್ಲೂ ಜಯ ನಮ್ಮದೆ: ಶಾಸಕ ಮಹೇಶ್ ವಿಶ್ವಾಸ
ಬಿಎಸ್ಪಿ ತ್ಯಜಿಸಿ ಬಿಜೆಪಿ ಸೇರಿರುವ ಎನ್. ಮಹೇಶ್ 2023ರ ಅದೃಷ್ಟ ಪರೀಕ್ಷೆಗೆ ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ. ನಗರಸಭೆ ಉಪಚುನಾವಣೆ ಫಲಿತಾಂಶ ಬಿಜೆಪಿ ಪರ ಬಂದಿರುವುದು ಮಾತ್ರವಲ್ಲದೆ ರಾಜ್ಯ ಮಟ್ಟದ ನಾಯಕರು ಹೋದಲ್ಲಿ ಬಂದಲ್ಲಿ ಕೊಳ್ಳೆಗಾಲ ನಗರಸಭೆ ಚುನಾವಣೆ ಗೆಲುವನ್ನು ಪುನರುಚ್ಛರಿಸುತ್ತಿರುವುದು ಮಹೇಶ್ ಸಂತಸಕ್ಕೆ ಕಾರಣವಾಗಿದೆ. ಹೀಗಾಗಿ ಕ್ಷೇತ್ರದಲ್ಲಿ ಎದ್ದಿರುವ ಭಿನ್ನಮತವನ್ನು ಅವರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಸೇರಿದ್ದೇನೆ. ಚುನಾವಣೆಯಲ್ಲಿ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ ಇಲ್ಲವಾದರೆ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ. ಇದರ ಜೊತೆಗೆ ತಾನು ಹಾಲಿ ಶಾಸಕನಾಗಿರುವುದರಿಂದ ನಾನು ಸಹ ಟಿಕೆಟ್ ಆಕಾಂಕ್ಷಿ ಎಂದು ಜಾಣ್ಮೆಯ ನಡೆ ಅನುಸರಿಸ್ತಿದ್ದಾರೆ.
ಎನ್ ಮಹೇಶ್ ರನ್ನು ಇನ್ನೊಮ್ಮೆ ಗೆಲ್ಲಿಸಿ, ಅವರನ್ನೆ ಮಂತ್ರಿ ಮಾಡೋಣ : ಸಚಿವ ಸೋಮಣ್ಣ
ಸದ್ಯ ಗಡಿಜಿಲ್ಲೆಯ ಬಿಜೆಪಿಯಲ್ಲಿ ನಡೆಯುತ್ತಿರುವ ಈ ಕಚ್ಚಾಟ ಆಂತರಿಕವಾಗಿರಬಹುದು ಆದರೆ ಮುಂದಿನ ದಿನಗಳಲ್ಲಿ ಬಹಿರಂಗವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಬಿಜೆಪಿ ಹೈಕಮಾಂಡ್ ಈಗಲೇ ನೋವಿಗೆ ಮುಲಾಮು ಹಚ್ಚುವ ಕೆಲಸ ಮಾಡದಿದ್ರೆ ಮುಂದೆ ಬಂಡಾಯ ಸ್ಪೋಟವಾಗುವ ಸಾಧ್ಯತೆಯೇ ಹೆಚ್ಚಿದೆ.