Asianet Suvarna News Asianet Suvarna News

Chamarajanagar: 7 ವಾರ್ಡ್‌ಗಳಲ್ಲೂ ಜಯ ನಮ್ಮದೆ: ಶಾಸಕ ಮಹೇಶ್‌ ವಿಶ್ವಾಸ

ನಗರಸಭೆಯ 7 ವಾರ್ಡ್‌ಗಳಿಗೂ ಶುಕ್ರವಾರ ನಡೆಯುವ ಚುನಾವಣೆ ವೇಳೆ ಮತದಾರ ಪ್ರಭುಗಳು ಬಿಜೆಪಿ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಲಿದ್ದಾರೆ. ಹಾಗಾಗಿ, 7ವಾರ್ಡ್‌ನಲ್ಲೂ ಗೆಲುವು ನಮ್ಮದೆ ಎಂದು ಶಾಸಕ ಎನ್‌.ಮಹೇಶ್ ಹೇಳಿದರು. 

MLA N Mahesh Talks Over Kollagal CMC By Election gvd
Author
First Published Oct 28, 2022, 10:04 PM IST

ಕೊಳ್ಳೇಗಾಲ (ಅ.28): ನಗರಸಭೆಯ 7 ವಾರ್ಡ್‌ಗಳಿಗೂ ಶುಕ್ರವಾರ ನಡೆಯುವ ಚುನಾವಣೆ ವೇಳೆ ಮತದಾರ ಪ್ರಭುಗಳು ಬಿಜೆಪಿ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಲಿದ್ದಾರೆ. ಹಾಗಾಗಿ, 7ವಾರ್ಡ್‌ನಲ್ಲೂ ಗೆಲುವು ನಮ್ಮದೆ ಎಂದು ಶಾಸಕ ಎನ್‌.ಮಹೇಶ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಪಚುನಾವಣೆಯಲ್ಲಿ 7ವಾರ್ಡ್‌ಗಳಲ್ಲೂ ಉತ್ತಮ ರೀತಿಯಲ್ಲಿ ಪ್ರಚಾರ ಮಾಡಲಾಗಿದೆ. ಪ್ರಚಾರಕ್ಕೆ ತೆರಳಿದ ವೇಳೆ ಅಲ್ಲಿನ ವಾರ್ಡ್‌ ನಿವಾಸಿಗಳು, ಮತದಾರರು ಅಭೂತಪೂರ್ವ ಸ್ವಾಗತ ಕೋರಿದ್ದಾರೆ, ಅತ್ಯಧಿಕ ಮತಗಳನ್ನು ನಮ್ಮ ಪಕ್ಷದ 7ಅಭ್ಯರ್ಥಿಗಳಿಗೆ ಅತ್ಯಧಿಕ ಮತ ನೀಡಿ ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕೆಲವು ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಅಪಪ್ರಚಾರ ನಡೆಸಿದೆ. ಆದರೆ, ಮತದಾರರು ಯಾವುದೆ ಅಪಪ್ರಚಾರಕ್ಕೂ ಕಿವಿಗೊಡಲ್ಲ, ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡಲಿದ್ದಾರೆ ಎಂದರು.

ಕಾಂಗ್ರೆಸ್‌ ಪಕ್ಷದಲ್ಲಿ ಮೋಡ ಕವಿದ ವಾತಾವರಣ: ಕಾಂಗ್ರೆಸ್‌ ಪಕ್ಷದಲ್ಲಿ ಮೋಡ ಕವಿದ ವಾತಾವರಣವಿದ್ದು 3 ಗುಂಪುಗಳಿವೆ. ಈಗ ಹಿರಿಯರು, ಆರೋಗ್ಯದ ಸಮಸ್ಯೆ ಇರುವ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಯಾವ ರೀತಿ ಕಾಂಗ್ರೆಸ್‌ ಪಕ್ಷ ಸಂಘಟಿಸಲಿದ್ದಾರೆ, ಗುಂಪುಗಳನ್ನು ಜೋಡಿಸಲಿದ್ದಾರೆ ಎಂಬುದನ್ನ ಕಾದು ನೋಡಬೇಕಿದೆ ಎಂದು ಮಾಜಿ ಶಾಸಕ ಎಂ.ಡಿ. ಲಕ್ಷ್ಮಿನಾರಾಯಣ ಹೇಳಿದರು. ಸುದ್ದಿಗೋಷ್ಠಿಯನ್ನುದ್ದೆಶಿಸಿ ಮಾತನಾಡಿದ ಅವರು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರ ವಿರೋಧಿ, 2009ರ ಚುನಾವಣೆಯಿಂದ ಇಲ್ಲಿ ತನಕ ರಾಜ್ಯಸಭೆ ಸದಸ್ಯರಾಗಲು ಅಂದೇ ವಿರೋಧಿಸಿದರು.

Chamarajanagar: ಕರ್ನಾಟಕದ ಗಡಿ ಗ್ರಾಮ ಗುಮಟಪುರದಲ್ಲಿ ಗೊರೆ ಹಬ್ಬ ಸಂಭ್ರಮ

ಗುಲಾಂ ನಬಿ ಅಜಾದ್‌ ಸಮಕಾಲಿನರೆಲ್ಲರೂ ಪಕ್ಷ ಬಿಟ್ಟಿದ್ದಾರೆ . ಖರ್ಗೆ ಇಂತಹ ಸಂದರ್ಭದಲ್ಲಿ ಯಾವ ರೀತಿ ಪಕ್ಷ ಕಟ್ಟುತ್ತಾರೆ, ವಯಸ್ಸು, ಆರೋಗ್ಯ ಸಮಸ್ಯೆ ಮುಂದಿಟ್ಟುಕೊಂಡು ಎಷ್ಟರಮಟ್ಟಿಗೆ ಕಾಂಗ್ರೆಸ್‌ ಬಲಿಷ್ಠಗೊಳಿಸಲಿದ್ದಾರೆ ಕಾದು ನೋಡಬೇಕಿದೆ, ಕೈ ಪಾಳೆಯದಲ್ಲಿ ಕೆಪಿಸಿಸಿ ಅಧ್ಯಕ್ಷರು ಗುಂಪು, ವಿಪಕ್ಷ ನಾಯಕರ ಗುಂಪು, ಎಐಸಿಸಿ ಗುಂಪು ಹೋಗಿ ನಾನಾ ಗುಂಪುಗಳಿಗೆ ನೂತನ ಅಧ್ಯಕ್ಷರಾದ ಖರ್ಗೆ ಅವರು ತಮ್ಮ ಗುಂಪಿನ ಸಮೇತ ಯಾವ ರೀತಿ ಪಕ್ಷ ನಿಭಾಯಿಸಲಿದ್ದಾರೆ ನೋಡಬೇಕಿದೆ. ರಾಜ್ಯದಲ್ಲಿ ಕೈ ಪಾಳೇಯ ಜೋಡಿಸುವ ರಾಹುಲ್ ಕನಸ್ಸು ನನಸಾಗಿಲ್ಲ ಎಂದು ಟೀಕಿಸಿದರು.

ಶಾಸಕ ಮಹೇಶ್‌ ಅವರು ಮುಖ್ಯಮಂತ್ರಿಗಳು, ಸಚಿವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸಜ್ಜನ ಹಾಗೂ ಅಭಿವೃದ್ಧಿಗೆ ಸ್ಪಂದಿಸುವ ವ್ಯಕ್ತಿತ್ವ ಅವರದ್ದು. ಹಾಗಾಗಿ, ಶಾಸಕ ಮಹೇಶ್‌ ಕೈ ಬಲಪಡಿಸುವ ಹಿನ್ನೆಲೆ ನಗರಸಭೆ ಉಪಚುನಾವಣೆಯಲ್ಲಿ 7ಮಂದಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಈಗಾಗಲೇ ನಾನು 13ನೇ ವಾರ್ಡ್‌ ಮಂಜುನಾಥ್‌ ನಗರದ 21ನೇ ವಾರ್ಡ್‌ನಲ್ಲೂ ಪ್ರಚಾರ ನಡೆಸಿದ್ದೇನೆ, ಅಲ್ಲಿನ ನೇಕಾರರ ಸಮಸ್ಯೆ ಬಗ್ಗೆ ಮಾಹಿತಿ ಪಡೆದಿದ್ದು, ಕೆಲ ಸಮಸ್ಯೆ ಬಗೆಹರಿಸಲಾಗಿದ್ದು, ಈ ಬಾರಿ ನೇಕಾರ ಬಂಧುಗಳು ಹೆಚ್ಚಿನ ಮತಗಳನ್ನು ಬಿಜೆಪಿಗೆ ನೀಡಲಿದ್ದಾರೆ. ಈ ನಿಟ್ಟಿನಲ್ಲಿ ನೇಕಾರರ ಮನವೊಲಿಸಲಾಗಿದೆ. 

Chamarajanagar: ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ: ವಿಜೃಂಭಣೆಯಿಂದ ಜರುಗಿದ ರಥೋತ್ಸವ

ಸರ್ಕಾರ ಇದ್ದಾಗ ಕೆಲಸ ಕಾರ್ಯ ಮಾಡಿಸಿಕೊಳ್ಳಲು ಸುಲಭ ಮಾರ್ಗೋಪಾಯ ಎಂದರೆ ಬಿಜೆಪಿ ಗೆಲ್ಲಿಸುವುದಾಗಿದೆ. ಹಾಗಾಗಿ, ಮತದಾರು 7ಮಂದಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ನಮ್ಮ ಶಾಸಕ ಮಹೇಶ್‌ ಅವರ ಕೈ ಬಲಪಡಿಸಬೇಕು, ಕ್ಷೇತ್ರ ಹಾಗೂ ನಗರದ ಅಭಿವೃದ್ಧಿಗೆ ಮತದಾರರು ಸಹಕರಿಸಬೇಕು ಎಂದು ಮನವಿ ಮಾಡಿದರು. ಕೇಂದ್ರದಲ್ಲಿ ನರೇಂದ್ರಮೋದಿ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ, ಬೊಮ್ಮಾಯಿ ಅವರ ನೇತತ್ವದಲ್ಲಿ ಈಗಾಗಲೇ ಬಿಜೆಪಿ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ ಎಂದರು.

Follow Us:
Download App:
  • android
  • ios