ಗ್ಯಾರಂಟಿ ಯೋಜನೆ ಲೋಕಸಭಾ ಚುನಾವಣೆಯಲ್ಲಿ ವರ್ಕ್ ಆಗಿದ್ಯಾ?: ಕಾಂಗ್ರೆಸ್ ಶಾಸಕ ಕೃಷ್ಣಮೂರ್ತಿ ಪ್ರತಿಕ್ರಿಯೆ
ಪ್ರಧಾನಿ ನರೇಂದ್ರ ಮೋದಿ ಅವರು ಅದಾನಿ, ಅಂಬಾನಿ ಅಂತಹವರಿಗಷ್ಟೇ ಅನುಕೂಲ ಮಾಡಿಕೊಟ್ಟಿದ್ದಾರೆ. ಸಾಮಾಜಿಕ ನೆಲೆಗಟ್ಟಿನ ಮೇಲೆ 5 ಗ್ಯಾರಂಟಿಗಳಿಂದ ಜನರಿಗೆ ಅನುಕೂಲವಾಗಿದೆ. ವೈಯಕ್ತಿಕವಾಗಿ ಹೇಳೋದಾದ್ರೆ ಚುನಾವಣೆ ವೇಳೆ ಗ್ಯಾರಂಟಿ ವರ್ಕ್ ಆಗಿದೆ: ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ
ಚಾಮರಾಜನಗರ(ಜೂ.07): ನಾವು ಚುನಾವಣೆ ಪ್ರಚಾರಕ್ಕೆ ಹೋದ ಕಡೆಯೆಲ್ಲ ಮಹಿಳೆಯರು ಕೈ ಮುಗಿಯುತ್ತಿದ್ದರು. ಒಳ್ಳೆಯ ಗ್ಯಾರಂಟಿ ಯೋಜನೆ ಕೊಟ್ಟಿದ್ದೀರಾ ಅಂತಿದ್ದರು. ಎಲ್ಲಾ ಧರ್ಮ, ಜಾತಿಯವರು ಕೂಡ ಗ್ಯಾರಂಟಿ ಯೋಜನೆ ಫಲ ಪಡೆದಿದ್ದಾರೆ ಎಂದು ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದ್ದಾರೆ.
ಗ್ಯಾರಂಟಿ ಯೋಜನೆ ಲೋಕಸಭಾ ಚುನಾವಣೆಯಲ್ಲಿ ವರ್ಕ್ ಆಗಿದ್ಯಾ?, ಅಥವಾ ಇಲ್ವಾ? ಅನ್ನೋ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು, ಪ್ರಚಾರಕ್ಕೆ ಹೋದಾಗ ಬಿಜೆಪಿ ತಾಯಂದಿರು ಕೂಡ ಮತ ಕೊಡ್ತೀವಿ ಎಂದು ಹೇಳಿದ್ದರು. ಬಿಜೆಪಿಯವರು ಧರ್ಮದ ವಿಚಾರವನ್ನು ಮಾತನಾಡಿದರು. ಎಲ್ಲೂ ಕೂಡ ಅಭಿವೃದ್ಧಿ ಬಗ್ಗೆ ಮಾತನಾಡಿಲ್ಲ ಎಂದು ಹೇಳಿದ್ದಾರೆ.
ಲೋಕಸಭೆ ಫಲಿತಾಂಶ: ಮಲ್ಲಿಕಾರ್ಜುನ ಖರ್ಗೆಗೆ ಲಕ್, ಡಿ.ಕೆ. ಬ್ರದರ್ಸ್‌ಗೆ ಪವರ್ ಬ್ರೇಕ್; ಸಿದ್ದು ಗದ್ದುಗೆ ಡೋಂಟ್ ಶೇಕ್
ಪ್ರಧಾನಿ ನರೇಂದ್ರ ಮೋದಿ ಅವರು ಅದಾನಿ, ಅಂಬಾನಿ ಅಂತಹವರಿಗಷ್ಟೇ ಅನುಕೂಲ ಮಾಡಿಕೊಟ್ಟಿದ್ದಾರೆ. ಸಾಮಾಜಿಕ ನೆಲೆಗಟ್ಟಿನ ಮೇಲೆ 5 ಗ್ಯಾರಂಟಿಗಳಿಂದ ಜನರಿಗೆ ಅನುಕೂಲವಾಗಿದೆ. ವೈಯಕ್ತಿಕವಾಗಿ ಹೇಳೋದಾದ್ರೆ ಚುನಾವಣೆ ವೇಳೆ ಗ್ಯಾರಂಟಿ ವರ್ಕ್ ಆಗಿದೆ ಶಾಸಕ ಕೃಷ್ಣಮೂರ್ತಿ ತಿಳಿಸಿದ್ದಾರೆ.