Asianet Suvarna News Asianet Suvarna News

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ ಮೊಟಕು ಸಾಧ್ಯತೆ: ಸಚಿವ ಗೋಪಾಲಯ್ಯ

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ ಡಿ.30ಕ್ಕೆ ಮು​ಗಿ​ಯ​ಬೇ​ಕಿದ್ದು, ಹ​ಲ​ವಾರು ಕಾ​ರ​ಣ​ಗ​ಳಿಂದಾಗಿ ನಾಳೆ ಅ​ಥವಾ ನಾ​ಳಿದ್ದು ಅ​ಧಿ​ವೇ​ಶನ ಮು​ಗಿ​ಯುವ ಸಂಭ​ವ​ವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

Belagavi Session is likely to end says Minister K Gopalaiah gvd
Author
First Published Dec 28, 2022, 9:07 AM IST

ಮಂಡ್ಯ (ಡಿ.28): ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ ಡಿ.30ಕ್ಕೆ ಮು​ಗಿ​ಯ​ಬೇ​ಕಿದ್ದು, ಹ​ಲ​ವಾರು ಕಾ​ರ​ಣ​ಗ​ಳಿಂದಾಗಿ ನಾಳೆ ಅ​ಥವಾ ನಾ​ಳಿದ್ದು ಅ​ಧಿ​ವೇ​ಶನ ಮು​ಗಿ​ಯುವ ಸಂಭ​ವ​ವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಅ​ಧಿ​ವೇ​ಶ​ನ​ದಲ್ಲಿ ಹ​ಲ​ವಾರು ವಿ​ಚಾ​ರ​ಗಳು ಚರ್ಚೆಯಾ​ಗಿವೆ. ಸರ್ಕಾರವೂ ಸ​ಮರ್ಪಕ​ವಾಗಿ ಉ​ತ್ತರ ನೀ​ಡಿದೆ. ಮು​ಖ್ಯ​ಮಂತ್ರಿ​ಗಳೂ ಸ​ದ​ನ​ದಲ್ಲಿ ಪ್ರ​ಸ್ತಾ​ಪಿಸಿ ಮೊ​ಟ​ಕು​ಗೊ​ಳಿ​ಸುವ ಸಾ​ಧ್ಯ​ತೆ​ಗ​ಳಿವೆ ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಡಿ.30ರಂದು ಮಂಡ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಾನು ಮ​ತ್ತು ಸ​ಚಿವ ನಾ​ರಾ​ಯ​ಣ​ಗೌ​ಡರು ಬೆ​ಳ​ಗಾ​ವಿ​ಯಲ್ಲಿ ನ​ಡೆ​ಯು​ತ್ತಿದ್ದ ಅ​ಧಿವೇ​ಶ​ನ​ ಬಿಟ್ಟು ಕಾ​ರ‍್ಯ​ಕ್ರಮ ಯ​ಶ​ಸ್ಸಿ​ಗಾಗಿ ಬಂದಿ​ದ್ದೇವೆ. ಇಲ್ಲೇ ವಾ​ಸ್ತವ್ಯ ಹೂಡಿ ಕಾ​ರ‍್ಯ​ಕ್ರ​ಮದ ಸಿ​ದ್ಧತೆ ನ​ಡೆ​ಸುವುದಾಗಿ ಹೇಳಿದರು. ಅಂದು ಅ​ಮಿತ್‌ ಶಾ ಅ​ವರು ಮ​ದ್ದೂ​ರಿನ ಗೆ​ಜ್ಜ​ಲ​ಗೆ​ರೆ​ಯ​ ಮಂಡ್ಯ ಹಾಲು ಒ​ಕ್ಕೂ​ಟದ ಆ​ವ​ರ​ಣ​ದಲ್ಲಿ ನಿರ್ಮಿಸ​ಲಾ​ಗಿ​ರುವ ಮೆಗಾ ಡೈ​ರಿ​ಯನ್ನು ಉ​ದ್ಘಾ​ಟಿ​ಸು​ವರು. ಬ​ಳಿಕ ಮಂಡ್ಯ​ದ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆಯಲಿರುವ ಸಾರ್ವಜ​ನಿಕ ಸ​ಭೆ​ಯಲ್ಲಿ ಭಾ​ಗ​ವ​ಹಿ​ಸುವರು. 

ಜೆಡಿ​ಎಸ್‌ ಅಧಿ​ಕಾ​ರಕ್ಕೆ ಬಂದಲ್ಲಿ ಪಂಚ​ರತ್ನ ಜಾರಿಗೆ: ನಿಖಿಲ್‌ ಕುಮಾ​ರ​ಸ್ವಾ​ಮಿ

ಮು​ಖ್ಯ​ಮಂತ್ರಿ ಬ​ಸ​ವ​ರಾಜ ಬೊ​ಮ್ಮಾಯಿ, ಮಾಜಿ ಮು​ಖ್ಯ​ಮಂತ್ರಿ ಬಿ.​ಎಸ್‌.ಯ​ಡಿ​ಯೂ​ರಪ್ಪ, ಬಿ​ಜೆಪಿ ರಾ​ಜ್ಯಾ​ಧ್ಯಕ್ಷ ನ​ಳೀನ್‌ಕು​ಮಾರ್‌ ಕ​ಟೀಲು ಸೇರಿದಂತೆ ಸಂಪು​ಟದ ಎಲ್ಲ ಸ​ಚಿ​ವರು ಕಾ​ರ‍್ಯ​ಕ್ರ​ಮ​ದಲ್ಲಿ ಭಾ​ಗ​ವ​ಹಿ​ಸ​ಲಿ​ದ್ದಾರೆ ಎಂದು ನುಡಿದರು. ಮು​ಖ್ಯ​ಮಂತ್ರಿ ಬ​ಸ​ವ​ರಾಜ ಬೊ​ಮ್ಮಾಯಿ ನೇ​ತೃ​ತ್ವ​ದ​ಲ್ಲಿ ಈ​ಗಾ​ಗಲೇ ಪಾಂಡ​ವ​ಪುರ ಮತ್ತು ಮ​ದ್ದೂ​ರಿ​ನಲ್ಲಿ ಜ​ನ​ಸಂಕಲ್ಪ ಯಾತ್ರೆ ನ​ಡೆ​ಸಿದ್ದೇವೆ. ಮುಂಬರುವ ವಿ​ಧಾನಸಭಾ ಚು​ನಾ​ವ​ಣೆ​ಯನ್ನು ದೃ​ಷ್ಟಿ​ಯ​ಲ್ಲಿ​ಟ್ಟು​ಕೊಂಡು ಪಕ್ಷ ಸಂಘ​ಟ​ನೆಗಾಗಿ ಕಾ​ರ‍್ಯ​ಕ್ರಮ ಹ​ಮ್ಮಿ​ಕೊ​ಳ್ಳ​ಲಾ​ಗಿದೆ ಎಂ​ದರು.

ರೈ​ತರ ಮ​ನ​ವೊ​ಲಿ​ಕೆಗೆ ಯತ್ನ: ಕೃಷಿ ಉ​ತ್ಪ​ನ್ನ​ಗ​ಳಿಗೆ ವೈ​ಜ್ಞಾ​ನಿಕ ದರ ನೀ​ಡು​ವಂತೆ ಒ​ತ್ತಾ​ಯಿಸಿ ರೈ​ತರು 51 ದಿ​ನ​ಗ​ಳಿಂದಲೂ ಚ​ಳ​ವಳಿ ನ​ಡೆ​ಸು​ತ್ತಿ​ದ್ದಾರೆ. ನಾನು ಮತ್ತು ಸ​ಚಿವ ನಾ​ರಾ​ಯ​ಣ​ಗೌಡ ಅ​ವರು ರೈ​ತರ ಧ​ರ​ಣಿ ನ​ಡೆ​ಸು​ತ್ತಿ​ರುವ ಸ್ಥ​ಳಕ್ಕೆ ಭೇಟಿ ನೀಡಿ ರೈ​ತರ ಮ​ನ​ವೊ​ಲಿ​ಸು​ವು​ದಾಗಿ ತಿ​ಳಿ​ಸಿ​ದರು. ಕೇಂದ್ರ ಸರ್ಕಾರ ಎಫ್‌ಆರ್‌ಪಿ ನಿ​ಗದಿ ಮಾ​ಡಿಲ್ಲ. ರಾಜ್ಯ ಸರ್ಕಾರ 50 ರು. ಪ್ರೋತ್ಸಾಹಧನ ಹೆ​ಚ್ಚಳ ಮಾ​ಡಿದೆ. ರೈ​ತರ ಬೇ​ಡಿ​ಕೆ​ಗಳ ಕು​ರಿ​ತಂತೆ ಮು​ಖ್ಯ​ಮಂತ್ರಿ​ಗಳ ಗ​ಮ​ನಕ್ಕೆ ತಂದು ಸ​ಮಸ್ಯೆ ಬ​ಗೆ​ಹ​ರಿ​ಸ​ಲಾ​ಗು​ವುದು ಎಂದರು. ಜಿ​ಲ್ಲೆ​ಯಲ್ಲಿ ರಸ್ತೆ ಗುಂಡಿ​ ಮು​ಚ್ಚುವ ಕಾ​ಮ​ಗಾರಿ ಆ​ರಂಭ​ವಾ​ಗಿದೆ. ಈ​ಗಾ​ಗಲೇ ಸರ್ಕಾರ 15 ಕೋಟಿ ರು. ಅ​ನು​ದಾನ ಬಿ​ಡು​ಗಡೆ ಮಾ​ಡಿದೆ. ಶೀ​ಘ್ರ​ದಲ್ಲೇ ಎಲ್ಲಾ ರ​ಸ್ತೆ​ಗ​ಳ​ಲ್ಲಿ​ರುವ ಗುಂಡಿ​ಗ​ಳನ್ನು ಮುಚ್ಚಿ ಸು​ಗಮ ಸಂಚಾ​ರಕ್ಕೆ ಅ​ನುವು ಮಾ​ಡಿ​ಕೊ​ಡ​ಲಾ​ಗು​ವುದು ಎಂದು ಪ್ರ​ಶ್ನೆ​ಯೊಂದಕ್ಕೆ ಉ​ತ್ತ​ರಿ​ಸಿ​ದರು.

ಫ್ಲೈಓವರ್ ಕಾಮಗಾರಿ ವೇಳೆ ನಡೆದ ಅವಘಡ: ಯುವಕನ ಎದೆ ಸೀಳಿದ ಕಬ್ಬಿಣದ ರಾಡು

ಮುಂಜಾ​ಗ್ರತಾ ಕ್ರಮ: ಕೊರೋನಾ ಸೋಂಕು ಹೆ​ಚ್ಚ​ಳ​ವಾ​ಗು​ತ್ತಿರುವ ಕಾ​ರಣ ಸರ್ಕಾರ ಅ​ದ​ಕ್ಕಾಗಿ ಮಾರ್ಗಸೂ​ಚಿ​ ಬಿ​ಡು​ಗಡೆ ಮಾ​ಡಿದೆ. ಕೋ​ವಿಡ್‌ ಪ್ರ​ಕ​ರ​ಣ​ಗಳು ಹೆ​ಚ್ಚ​ದಂತೆ ಅ​ಗತ್ಯ ಕ್ರ​ಮ ಕೈ​ಗೊ​ಳ್ಳ​ಲಾ​ಗು​ವುದು. ಆ​ಸ್ಪ​ತ್ರೆ​ಗ​ಳಿಗೂ ಭೇಟಿ ನೀಡಿ ಪ​ರಿ​ಶೀ​ಲನೆ ನ​ಡೆ​ಸು​ತ್ತೇವೆ. ಅ​ಗತ್ಯ ಔ​ಷ​ಧೋ​ಪ​ಚಾ​ರಕ್ಕೆ ಅ​ಧಿಕಾ​ರಿ​ಗ​ಳಿಗೆ ಸೂ​ಚನೆ ನೀ​ಡ​ಲಾ​ಗಿದೆ ಎಂ​ದರು. ಸ​ಚಿವ ಕೆ.ಸಿ. ನಾ​ರಾ​ಯ​ಣ​ಗೌಡ, ಬಿ​ಜೆಪಿ ಜಿ​ಲ್ಲಾ​ಧ್ಯಕ್ಷ ಸಿ.ಪಿ. ಉ​ಮೇಶ್‌, ರಾಜ್ಯ ಕಾ​ರ‍್ಯ​ಕಾ​ರಿಣಿ ಸದಸ್ಯ ಡಾ.ಸಿ​ದ್ದ​ರಾ​ಮಯ್ಯ, ಮುಡ ಅ​ಧ್ಯಕ್ಷ ಕೆ. ಶ್ರೀ​ನಿ​ವಾಸ್‌, ಮು​ಖಂಡ​ರಾದ ಎಸ್‌. ಸ​ಚ್ಚಿ​ದಾ​ನಂದ, ಅ​ಶೋಕ್‌ ಜ​ಯರಾಂ ಗೋ​ಷ್ಠಿ​ಯ​ಲ್ಲಿ​ದ್ದರು.

Follow Us:
Download App:
  • android
  • ios