100 ಜನ ಒಂದಾದ್ರೂ ಮೋದಿ ಸೋಲಿಸಲು ಆಗಲ್ಲ: ಸಂಸದ ಮುನಿಸ್ವಾಮಿ
ಕಾಂಗ್ರೆಸ್‌ನವರು ಅಲಿಬಾಬಾ ಮತ್ತು ನಲವತ್ತು ಜನ ಕಳ್ಳರು ಎಂಬಂತೆ ಇಂಡಿಯಾ ಎಂಬ ತಂಡ ಮಾಡಿಕೊಂಡು ಮೋದಿ ವಿರುದ್ಧ ಸೆಣಸಲು ಹೊರಟಿದ್ದಾರೆ. ಆದರೆ, ನಲವತ್ತಲ್ಲ, ನೂರು ಜನ ಒಂದಾದರೂ ಮೋದಿಯನ್ನು ಮಣಿಸಲು ಆಗಲ್ಲ ಎಂದು ಸಂಸದ ಮುನಿಸ್ವಾಮಿ ಟೀಕಿಸಿದರು.
ಕೋಲಾರ (ಸೆ.18): ಕಾಂಗ್ರೆಸ್‌ನವರು ಅಲಿಬಾಬಾ ಮತ್ತು ನಲವತ್ತು ಜನ ಕಳ್ಳರು ಎಂಬಂತೆ ಇಂಡಿಯಾ ಎಂಬ ತಂಡ ಮಾಡಿಕೊಂಡು ಮೋದಿ ವಿರುದ್ಧ ಸೆಣಸಲು ಹೊರಟಿದ್ದಾರೆ. ಆದರೆ, ನಲವತ್ತಲ್ಲ, ನೂರು ಜನ ಒಂದಾದರೂ ಮೋದಿಯನ್ನು ಮಣಿಸಲು ಆಗಲ್ಲ ಎಂದು ಸಂಸದ ಮುನಿಸ್ವಾಮಿ ಟೀಕಿಸಿದರು. ಮುಳಬಾಗಿಲು ತಾಲೂಕಿನ ಕುರುಡುಮಲೆ ಶ್ರೀ ಗಣಪತಿ ದೇವಾಲಯದ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ನಲವತ್ತಲ್ಲ, ನೂರು ಜನ ಒಂದಾದರೂ ಮೋದಿಯವರನ್ನು ಮಣಿಸಲು ಆಗಲ್ಲ, ನೀವು ಬಡವರಿಗೆ ಅಕ್ಕಿ ಕೊಡುತ್ತೀವಿ ಅಂತ ಹೇಳಿ ಈಗ ಕೇಂದ್ರದ ಕಡೆ ಕೈ ತೋರಿಸ್ತಾ ಇದೀರಾ. ಎಲ್ಲಾ ಫ್ರೀ ಕೊಡ್ತೀನಿ ಅಂತ ಹೇಳಿ ಬೆಲೆಗಳನ್ನು ದುಪ್ಪಟ್ಟು ಮಾಡಿದ್ದೀರಾ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು. ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಪ್ರವಾಸ ಮಾಡಿ ಲೋಕಸಭೆಯಲ್ಲಿ ಇಪ್ಪತ್ತೆಂಟು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದರು.
ರಾಜ್ಯದಲ್ಲಿ ಬರಗಾಲ ಕಾಡಲು ಸಿದ್ದರಾಮಯ್ಯ ಕಾಲ್ಗುಣ ಕಾರಣ: ಸಿ.ಟಿ.ರವಿ
ನನಗೆ ಗುಂಡಿಕ್ಕಿದರೂ ರೈತರ ಪರ ಹೋರಾಡುವೆ: ಸರ್ಕಾರ ಮತ್ತು ಅರಣ್ಯ ಇಲಾಖೆ ಶ್ರೀನಿವಾಸಪುರದಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ರೈತ ಮಹಿಳೆಯರಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರ ಶಾಪ ಸರ್ಕಾರಕ್ಕೆ ತಟ್ಟದೆ ಬಿಡುವುದಿಲ್ಲ. ರೈತರ ಪರವಾಗಿ ನನ್ನ ಹೋರಾಟ ಮುಂದುವರೆಯುತ್ತದೆ. ನನ್ನನ್ನು ಜೈಲಿಗೆ ಹಾಕಲಿ ಅಥವಾ ಗುಂಡಿಕ್ಕಿ ಕೊಲ್ಲಲ್ಲಿ ರೈತರ ಪರವಾಗಿ ನಿಲ್ಲುತ್ತೇನೆಂದು ಸಂಸದ ಮುನಿಸ್ವಾಮಿ ಹೇಳಿದರು.
ಅರಣ್ಯ ಇಲಾಖೆಯವರು ಒತ್ತುವರಿ ನೆಪದಲ್ಲಿ ಪಾಳ್ಯ ಗ್ರಾಮದ ರೈತ ಮಹಿಳೆಯರ ಜಮೀನಿನಲ್ಲಿ ಬೆಳೆ ನಾಶ ಪಡಿಸಿದ್ದಲ್ಲದೆ ಅವರ ವಿರುದ್ಧವೇ ಸುಳ್ಳು ಪ್ರಕರಣಗಳನ್ನು ದಾಖಲು ಮಾಡಿರುವುದರಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ದಾಖಲಾಗಿರುವ ಶಾಮಲ ಗೋಪಾಲರೆಡ್ಡಿ ಮತ್ತು ಲಕ್ಷ್ಮೀದೇವಮ್ಮ ರವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದರು.
ದೇಶದಲ್ಲಿ ಸಂವಿಧಾನಕ್ಕಿಂತ ಬೇರೆ ಯಾವ ಧರ್ಮವು ದೊಡ್ಡದಲ್ಲ: ಸಚಿವ ಮಹದೇವಪ್ಪ
ಕೊಟ್ಯಂತರ ಮೌಲ್ಯದ ಬೆಳೆ ನಾಶ: ಕಳೆದ 20 ದಿನಗಳಿಂದ ಶ್ರೀನಿವಾಸಪುರದಲ್ಲಿ ಅರಣ್ಯ ಇಲಾಖೆಯವರು ರೈತರ ಜಮೀನುಗಳ ಒತ್ತುವರಿಯನ್ನು ತೆರವು ಮಾಡುವ ನೆಪದಲ್ಲಿ ಕೋಟ್ಯತರ ಬೆಲೆ ಬಾಳುವ ತರಕಾರಿ ಬೆಳೆಗಳನ್ನು ಹಾಗೂ 40-50 ವರ್ಷಗಳ ಮಾವಿನ ಮರಗಳನ್ನು ನಾಶ ಮಾಡುತ್ತಿದ್ದಾರೆ. ಸರ್ಕಾರ ಇವರಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು. ಅರಣ್ಯ ಇಲಾಖೆಯವರು ನೂರು ಕೇಸು ಹಾಕಿದರೂ ನಾನು ಹೆದರುವುದಿಲ್ಲ. ರಾಜ್ಯ ಮಟ್ಟದಲ್ಲಿ ನಮ್ಮ ನಾಯಕರ ಗಮನಕ್ಕೆ ತಂದಿದ್ದೇನೆ. ರಾತ್ರಿ ವೇಳೆ ಜೆಸಿಬಿ ಡ್ರೈವರುಗಳಿಗೆ ಕುಡಿಸಿ ಅರಣ್ಯ ಇಲಾಖೆಯವರು ರೈತರ ಮೇಲೆ ದಬ್ಬಾಳಿಕೆ ಮಾಡಿಸುತ್ತಿದ್ದಾರೆ. ತೆರವು ಕಾರ್ಯಾಚರಣೆ ನಿಲ್ಲುವ ತನಕ ನನ್ನ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದರು.