ಸಿದ್ದುಗೆ ಕ್ಷೇತ್ರ ಬಿಟ್ಟುಕೊಡಲು ಯಾವುದೇ ಷರತ್ತು ವಿಧಿಸಿಲ್ಲ: ಶಾಸಕ ಶ್ರೀನಿವಾಸಗೌಡ
ಜಿಲ್ಲೆಯಿಂದ ರಾಜ್ಯಕ್ಕೆ ಎರಡನೇ ಮುಖ್ಯಮಂತ್ರಿ ಕೊಡುಗೆ ನೀಡುವ ದೆಸೆಯಿಂದ ಸಿದ್ದರಾಮಯ್ಯರಿಗೆ ಅವಕಾಶ ಕಲ್ಪಿಸಲು ಕೋಲಾರ ವಿಧಾನ ಸಭಾ ಕ್ಷೇತ್ರವನ್ನು ಬಿಟ್ಟು ಕೊಟ್ಟಿದ್ದೇನೆ ಹೊರತಾಗಿ ನಾನು ಯಾವುದೇ ರೀತಿ ಕರಾರು ಮಾಡಿಕೊಂಡು ಸಿದ್ದರಾಮಯ್ಯರನ್ನು ಆಹ್ವಾನಿಸಿಲ್ಲ ಎಂದು ಶಾಸಕ ಕೆ.ಶ್ರೀನಿವಾಸಗೌಡ ಸ್ವಷ್ಟಪಡಿಸಿದರು.
ಕೋಲಾರ (ಜ.12): ಜಿಲ್ಲೆಯಿಂದ ರಾಜ್ಯಕ್ಕೆ ಎರಡನೇ ಮುಖ್ಯಮಂತ್ರಿ ಕೊಡುಗೆ ನೀಡುವ ದೆಸೆಯಿಂದ ಸಿದ್ದರಾಮಯ್ಯರಿಗೆ ಅವಕಾಶ ಕಲ್ಪಿಸಲು ಕೋಲಾರ ವಿಧಾನ ಸಭಾ ಕ್ಷೇತ್ರವನ್ನು ಬಿಟ್ಟು ಕೊಟ್ಟಿದ್ದೇನೆ ಹೊರತಾಗಿ ನಾನು ಯಾವುದೇ ರೀತಿ ಕರಾರು ಮಾಡಿಕೊಂಡು ಸಿದ್ದರಾಮಯ್ಯರನ್ನು ಆಹ್ವಾನಿಸಿಲ್ಲ ಎಂದು ಶಾಸಕ ಕೆ.ಶ್ರೀನಿವಾಸಗೌಡ ಸ್ವಷ್ಟಪಡಿಸಿದರು. ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಕ್ಕೆ ಮೊದಲೇ ಮುಖ್ಯ ಮಂತ್ರಿಯಾಗಿ ಕೆ.ಸಿ.ರೆಡ್ಡಿರನ್ನು ನೀಡಿದ್ದೇವೆ, ಎರಡನೇ ಮುಖ್ಯ ಮಂತ್ರಿಯಾಗಿ ಸಿದ್ದರಾಮಯ್ಯರಿಗೆ ಅವಕಾಶ ಇರುವುದರಿಂದ ಅವರನ್ನು ಆಹ್ವಾನಿಸಿದೆ, ಜೊತೆಗೆ ಕೋಲಾರ ಜಿಲ್ಲೆ ಸಾಕಷ್ಟು ಅಭಿವೃದ್ಧಿಯಾಗಬೇಕಿದೆ.
ಪ್ರಸ್ತುತ ಚುನಾವಣೆ ಎದುರಿಸುವುದು ನಿರೀಕ್ಷೆಯಷ್ಟು ಸುಲಭವಾಗಿಲ್ಲ ಎಂದರು. ಸಿದ್ದರಾಮಯ್ಯಗೆ ಅನುಭವ ಇದೆ: ಸಿದ್ದರಾಮಯ್ಯರನ್ನು ಮುಂದಿನ ಮುಖ್ಯ ಮಂತ್ರಿ ಎಂದು ಕಾಂಗ್ರೆಸ್ ಪಕ್ಷವು ಘೋಷಿಸಿಲ್ಲ ನಿಜ, ಆದರೆ ಮುಖ್ಯ ಮಂತ್ರಿಯಾಗಿದ್ದ ಅನುಭವಿಗಳು ಆಡಳಿತ ನಡೆಸುವ ಅರ್ಹತೆ ಇರುವವರು ಹಾಗಾಗಿ ನಾವು ಭಾವಿ ಮುಖ್ಯ ಮಂತ್ರಿ ಎಂದು ಆಶಯ ವ್ಯಕ್ತಪಡಿಸುವುದರಲ್ಲಿ ತಪ್ಪೇನೂ ಇಲ್ಲ. ಈಗಾಗಲೇ ಜನತೆ ಬಿಜೆಪಿ ವಿರುದ್ಧ ಬೇಸತ್ತಿದ್ದಾರೆ. ಬದಲಾವಣೆ ಬಯಸಿದ್ದಾರೆ. ಮುಂದೆ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರುವ ವಿಶ್ವಾಸವಿದೆ ಎಂದು ಹೇಳಿದರು.
ಸುಳ್ಳುಗಳನ್ನು ತಯಾರು ಮಾಡುವ ಫ್ಯಾಕ್ಟರಿ ಬಿಜೆಪಿ: ಸಿದ್ದರಾಮಯ್ಯ
ಎಂಎಲ್ಸಿ ಮಾಡುವುದ ಪಕ್ಷಕ್ಕೆ ಬಿಟ್ಟ ವಿಚಾರ: ನನಗೂ 76 ವರ್ಷ ವಯಸ್ಸಾಗಿದೆ ಚುನಾವಣೆಗಳನ್ನು ನಿಭಾಯಿಸುವ ಶಕ್ತಿ ಜೊತೆಗೆ ಜ್ಞಾಪಕ ಶಕ್ತಿಯು ಕುಂದಿದೆ. ಪಕ್ಷದಲ್ಲಿ ಸ್ಥಾನಮಾನಗಳ ಅವಕಾಶ ಬಯಸುವುದು ತಪ್ಪಲ್ಲ. ಅಕಾಶವಿದ್ದಲ್ಲಿ ನನ್ನನ್ನು ಎಂಎಲ್‌ಸಿ ಮಾಡುವುದು ಬಿಡುವುದು, ಪಕ್ಷದ ತೀರ್ಮಾನಕ್ಕೆ ಬಿಟ್ಟಿದ್ದು, ಇದಕ್ಕೆ ನನ್ನದು ಯಾವುದೇ ಕರಾರು ಹಾಕಿಲ್ಲ. ಮುಂದಿನ ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಹೋಳೂರು ಕ್ಷೇತ್ರಕ್ಕೆ ನನ್ನ ಮಗ ಮಂಜುನಾಥ್‌ಗೆ ಅವಕಾಶ ನೀಡಬೇಕೆಂದು ತಿಳಿಸಿದ್ದೇವೆ. ಪಕ್ಷದ ವರಿಷ್ಠರು ಸಹ ಭರವಸೆ ನೀಡಿದ್ದಾರೆ ಎಂಬುವುದು ಸತ್ಯ ಎಂದರು.
ಕೆ.ಹೆಚ್.ಮುನಿಯಪ್ಪ 7 ಭಾರಿ ಲೋಕಸಭಾ ಸದಸ್ಯರಾಗಿದ್ದಾರೆ. ಕೇಂದ್ರದ ಸಚಿವರು ಆಗಿದ್ದವರು. ವ್ಯಕ್ತಿಗತವಾಗಿ ಗೌರವಾನ್ವಿತರು ಅವರ ಬಗ್ಗೆ ನನಗೆ ಗೌರವಿದೆ. ಈ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಮತ್ತು ಶಾಸಕ ರಮೇಶ್ ಕುಮಾರ್ ನೇತೃತ್ವದಲ್ಲಿ ಸಿದ್ದರಾಮಯ್ಯ ಬಹುಮತದಿಂದ ಆಯ್ಕೆಯಾಗುವುದರಲ್ಲಿ ಯಾವುದೇ ಸಂಶವಿಲ್ಲ ಎಂದರು.
ಮತ ಹಾಕುವವರು ಕ್ಷೇತ್ರದ ಜನತೆ: ಬಿಜೆಪಿ ಪರವಾಗಿ ಪ್ರಚಾರಕ್ಕಾಗಿ 17 ಮಂದಿ ಸಚಿವರು ಅಲ್ಲ 50 ಮಂದಿ ಬಂದರೂ ಮತ ಹಾಕುವವರು ಕ್ಷೇತ್ರದ ಜನತೆಯೇ ಹೊರತು ದಾರಿಯಲ್ಲಿ ಹೋಗುವ ದಾಸಯ್ಯ ಅಲ್ಲ. ಇಂತಹ ಮಾತುಗಳನ್ನು ವೈಭವೀಕರಿಸುವುದು ಬೇಡ. ಯಾವೂದೇ ಪುಡಿ ಕಾಸು ಸಿಕ್ಕಿದ್ದಕ್ಕೆ 2 ಬಾರಿ ಶಾಸಕರಾಗಿ ಬಾಯಿಗೆ ಬಂದಂತೆ ಮಾತನಾಡುವುದಲ್ಲ. ಸಿದ್ದರಾಮಯ್ಯ ಅವರಂತಹವರ ಬಗ್ಗೆ ಮಾತನಾಡಲು ಯೋಗ್ಯತೆ, ಅರ್ಹತೆಗಳು ಇರಬೇಕು. ಅತನ ವಿಷಯಗಳು ನನ್ನ ಬಳಿ ಪ್ರಸ್ತಾಪಿಸ ಬೇಡಿ ಎಂದು ಪರೋಕ್ಷವಾಗಿ ವರ್ತೂರು ಪ್ರಕಾಶ್ ವಿರುದ್ಧ ಹರಿಹಾಯ್ದರು.
ಸಿದ್ದು, ಡಿಕೆಶಿ ಬಸ್ ಯಾತ್ರೆ ಭರ್ಜರಿ ಆರಂಭ: ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್
ಮುಳಬಾಗಿಲು ಕ್ಷೇತ್ರದಲ್ಲಿ ಕೊತ್ತೂರು ಮಂಜುನಾಥ್‌ರಿಗೆ ಹೈಕೋರ್ಟ್‌ನಲ್ಲಿದ್ದ ವಿಚಾರಣೆ ಮುಗಿದು ಅನುಕೂಲಕರವಾಗಿ ಬಂದಲ್ಲಿ ಮಂಜುನಾಥ್ ಆಯ್ಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ, ಮಾಲೂರಿನಲ್ಲಿ ನಂಜೇಗೌಡರು ಸಾಕಷ್ಟುಅಭಿವೃದ್ಧಿಪಡಿಸಿರುವವರು ಹಾಗೂ ಸ್ಥಳೀಯರು ಆಗಿದ್ದಾರೆ ಹಾಗಾಗಿ ಅವರು ಸಹ ಚುನಾವಣೆಯಲ್ಲಿ ಮೇಲುಗೈ ಸಾಧಿಸುವಂತ ಅವಕಾಶಗಳಿವೆ ಎಂದು ಅಭಿಪ್ರಾಯ ಪಟ್ಟರು.