ಕಾಂಗ್ರೆಸ್‌ನಲ್ಲಿ ಎರಡು ಮೂರು ಗುಂಪುಗಳಾಗಿವೆ, ಬಿಜೆಪಿ ಕಡೆ ಅವರೆಲ್ಲರು ಎದುರು ನೋಡುತ್ತಿದ್ದಾರೆ, ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ: ಸಂಸದ ಎಸ್‌.ಮುನಿಸ್ವಾಮಿ 

ಕೋಲಾರ(ಜು.16):  ಕಾಂಗ್ರೆಸ್‌ ಸರ್ಕಾರಕ್ಕೆ ಆಯ್ಯುಷ ಇಲ್ಲ, ಡಿಸೆಂಬರ್‌, ಜನವರಿಗೆ ಸರ್ಕಾರ ಬೀಳುವುದು ಖಚಿತ ಎಂದು ಸಂಸದ ಎಸ್‌.ಮುನಿಸ್ವಾಮಿ ಭವಿಷ್ಯ ನುಡಿದರು. 

ಮಾಲೂರಿನಲ್ಲಿ ತಾಲ್ಲೂಕು ಆಡಳಿತದಿಂದ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಸಮಾವೇಶದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದೆ ಎಂದೆಗೂ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೆ ಕಾಂಗ್ರೆಸ್‌ ಸರ್ಕಾರಕ್ಕೆ ಭವಿಷ್ಯ ಇಲ್ಲ ಎಂದು ಕಾಂಗ್ರೆಸಿಗರಿಗೆ ಗೊತ್ತಿದೆ ಎಂದು ಹೇಳಿದರು. 

ಕಾಟಾಚಾರದ ಉಸ್ತುವಾರಿ ಸಚಿವ ನಾನಲ್ಲ: ಭೈರತಿ ಸುರೇಶ್‌

ಕಾಂಗ್ರೆಸ್‌ನಲ್ಲಿ ಎರಡು ಮೂರು ಗುಂಪುಗಳಾಗಿವೆ, ಬಿಜೆಪಿ ಕಡೆ ಅವರೆಲ್ಲರು ಎದುರು ನೋಡುತ್ತಿದ್ದಾರೆ, ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂದರು. 

ಕೇಂದ್ರ ಸರ್ಕಾರ ಜನ ಕೊಟ್ಟಿರುವ ಯೋಜನೆಗಳನ್ನು ನೋಡಿ ಹಲವಾರು ಪಕ್ಷಗಳು ಬೆಂಬಲ ನೀಡುತ್ತಿವೆ, ಕಾನೂನು ಸಿವಿಲ್‌ ಕೋಡ್‌ ಬಗ್ಗೆ ಆಮ್‌ ಆದ್ಮಿ ಪಕ್ಷ ಸಹ ಬೆಂಬಲ ವ್ಯಕ್ತಪಡಿಸಿದೆ ಎಂದರಲ್ಲದೆ, ಮಹಾರಾಷ್ಟ್ರ, ಬಿಹಾರ, ಗೋವಾ ರಾಜ್ಯಗಳಲ್ಲಿ ಸಹ ಅನೇಕ ಪಕ್ಷಗಳು ಎನ್‌ಡಿಎ ಜೊತೆ ಸೇರಿಕೊಂಡಿವೆ. ದೇಶದಲ್ಲಿ ಮತ್ತೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.