ಕೇರಳ ಸಚಿವ ವಿವಾದಿತ ಹೇಳಿಕೆಗೆ ಬಾರಿ ವಿರೋಧ ಕೇರಳ ಸರ್ಕಾರದ ಮೇಲೆ ತೀವ್ರ ಒತ್ತಡ, ಪಿಣರಾಯಿಗೆ ಮತ್ತೆ ಹಿನ್ನಡೆ ಮೀನುಗಾರಿಗೆ ಹಾಗೂ ಸಂಸ್ಕೃತಿ ಸಚಿವ ರಾಜೀನಾಮೆ
ಕೇರಳ(ಜು.06): ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರ ಮತ್ತೊಂದು ಹಿನ್ನಡೆ ಅನುಭವಿಸಿದೆ. ಚಿನ್ನ ಕಳ್ಳಸಾಗಾಣೆ ಪ್ರಕರಣದಲ್ಲಿ ಸಿಲುಕಿ ನರಳಾಡುತ್ತಿರುವ ಕೇರಳ ಸರ್ಕಾರ ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ. ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಕೇರಳದ ಮೀನುಗಾರಿಗೆ ಹಾಗೂ ಸಂಸ್ಕೃತಿ ಸಾಜಿ ಚೆರಿಯನ್ ರಾಜೀನಾಮೆ ನೀಡಿದ್ದಾರೆ.
ಸಿಎಂ ಪಿಣರಾಯಿ ವಿಜಯನ್‌ಗೆ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಸಾಜಿ ಚೆರಿಯನ್ , ಇದು ನನ್ನ ವೈಯುಕ್ತಿ ನಿರ್ಧಾರವಾಗಿದೆ. ಸಂವಿಧಾನವನ್ನು ಗೇಲಿ ಮಾಡುವುದಾಗಲಿ, ಅವಹೇಳನ ಮಾಡುವುದಾಗಲಿ ನನ್ನ ಉದ್ದೇಶ ಆಗಿರಲಿಲ್ಲ. ಭಾರತದ ಸಂವಿಧಾನ ಬಗ್ಗೆ ಅಪಾರ ಗೌರವವಿದೆ ಎಂದು ಸಾಜಿ ಚೆರಿಯನ್ ಹೇಳಿದ್ದಾರೆ.
ರುಂಡ ಕತ್ತರಿಸುವ ಮದರಸಾ ಶಿಕ್ಷಣಕ್ಕಿಂತ ಮುಸ್ಲಿಮ್ ಮಕ್ಕಳಿಗೆ ಆಧುನಿಕ ಶಿಕ್ಷಣ ಬೇಕು, ಆರೀಫ್ ಖಾನ್!
ಆಲಪುಝದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಭಾಷಣ ಮಾಡಿದ್ದ ಸಾಜಿ ಚೆರಿಯನ್ ಸಂವಿಧಾನ ಸಾರ್ವಜನಿಕರ ಲೂಟಿ ಮಾಡಲು ನೆರವು ನೀಡುತ್ತಿದೆ ಎಂದಿದ್ದರು. ಇಷ್ಟೇಕ್ಕೆ ಮಾತು ನಿಲ್ಲಿಸದ ಸಾಜಿ ಚೆರಿಯನ್ ನಮ್ಮ ಸಂವಿಧಾನ ಕಾರ್ಮಿಕರಿಗೆ ಯಾವುದೇ ರಕ್ಷಣೆ ನೀಡುತ್ತಿಲ್ಲ. ಈ ಸಂವಿಧಾನ ಕಾರ್ಮಿಕರ ಶೋಷಣೆ ಮಾಡುತ್ತಿದೆ ಎಂದು ಆರೋಪಿಸಿದರು. ಇನ್ನು ಜಾತ್ಯಾತೀತೆ, ಪ್ರಜಾಪ್ರುಭತ್ವದ ಕುರಿತು ಸ್ಪಷ್ಟ ನಿಲುವಿಲ್ಲ ಎಂದಿದ್ದಾರೆ.
ಬ್ರಿಟೀಷರ ಸಂವಿಧಾನವನ್ನೇ ಭಾರತದಲ್ಲಿ ಅಂಗೀಕರಿಸಲಾಗಿದೆ. ಸ್ವತಂತ್ರ ಭಾರತದಲ್ಲಿ ಅದೇ ಬ್ರಿಟೀಷರ ಸಂವಿಧಾನವನ್ನು ಪಾಲಿಸಿಕೊಂಡು ಬರುತ್ತಿದೆ. ಇಂತಹ ಸಂವಿಧಾನದಲ್ಲಿ ಕಾರ್ಮಿಕರ ಶೋಷಣೆ ನಡೆಯುತ್ತಿದೆ. ಈ ಸಂವಿಧಾನ ಅಂಬಾನಿ, ಅದಾನಿಯನ್ನು ಪೋಷಿಸುತ್ತಿದೆ. ಇದರಿಂದ ಅವರ ಶ್ರೀಮಂತಿಕೆ ಹೆಚ್ಚಾಗುತ್ತಿದೆ ಎಂದು ಸಾಜಿ ಚೆರಿಯನ್ ಹೇಳಿದ್ದಾರೆ.
ಈ ಭಾಷಣ ಮುಗಿಸಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ವಿಡಿಯೋ ವೈರಲ್ ಆಗಿದೆ. ದೇಶದ ಸಂವಿಧಾನ ಕುರಿತು ಇಲ್ಲ ಸಲ್ಲದ ಆರೋಪ ಮಾಡಿದ ಸಾಜಿ ಚೆರಿಯನ್ ಮಂತ್ರಿ ಸ್ಥಾನದಿಂದ ವಜಾ ಮಾಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿತ್ತು. ವಿಧಾನಸಭೆಯಲ್ಲಿ ಯುಡಿಎಫ್-ಕಾಂಗ್ರೆಸ್ ಪ್ರತಿಭಟನೆ ನಡೆಸಿತು.
ಭಾರತದ ಸಂವಿಧಾನ ಶೋಷಣೆ, ಲೂಟಿಕೋರರ ಪರ: ಕೇರಳ ಸಚಿವ
ನಾವೆಲ್ಲರೂ ಭಾರತೀಯ ಸಂವಿಧಾನವನ್ನು ಸುಂದರವಾಗಿ ರಚಿಸಲಾಗಿದೆ ಎಂದು ಹೇಳುತ್ತೇವೆ. ಆದರೆ, ನನ್ನ ಅಭಿಪ್ರಾಯದಲ್ಲಿ ಈ ಸುಂದರ ಸಂವಿಧಾನ ಬಹಳಷ್ಟುಜನರನ್ನು ಲೂಟಿ ಮಾಡಲು ನೆರವಾಗಬಲ್ಲದಷ್ಟೇ. 75 ವರ್ಷಗಳಿಂದ ದೇಶದಲ್ಲಿ ಜಾರಿಯಲ್ಲಿರುವ ಈ ಸಂವಿಧಾನವನ್ನು ಕ್ರೋಡೀಕರಿಸಿದ್ದು ಬ್ರಿಟೀಷರು. ಆದರೆ ಇದನ್ನು ಭಾರತೀಯರು ಬರೆದಂತೆ ಬಿಂಬಿಸಲಾಗಿದೆ’ ಎಂದು ಸಾಜಿ ಚೆರಿಯನ್ ಹೇಳಿದ್ದಾರೆ.
‘ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವ ಹಾಗೂ ಸುತ್ತಿಗೆ ಮತ್ತು ಚಕ್ರವನ್ನು ಸುಮ್ಮನೆ ಅದರ ಬದಿಯಲ್ಲಿ ಸೇರಿಸಲಾಗಿದೆ. ನಮ್ಮ ದೇಶದ ಕಾರ್ಮಿಕರ ಹೋರಾಟವನ್ನು ಒಪ್ಪಿಕೊಳ್ಳುವುದಿಲ್ಲ, ಭಾರತೀಯ ಸಂವಿಧಾನ ಶೋಷಣೆಯನ್ನು (ಕಾರ್ಮಿಕರ ಶೋಷಣೆಯನ್ನು) ಮನ್ನಿಸುತ್ತದೆ. ಈ ಕಾರಣಕ್ಕಾಗಿಯೇ ದೇಶದ ಕಾರ್ಪೊರೆಟ್ ವಲಯದಲ್ಲಿನ ಕೆಲ ಕೋಟ್ಯಾಧೀಶರು ಮತ್ತಷ್ಟುಸಿರಿವಂತರಾಗಿದ್ದಾರೆ’ ಎಂದು ಹೇಳಿದ್ದಾರೆ.
ಲೈಂಗಿಕ ದೌರ್ಜನ್ಯ: ಕೇರಳದ ಹಿರಿಯ ರಾಜಕಾರಣಿ ಪಿ.ಸಿ. ಜಾಜ್‌ರ್ ಬಂಧನ
ಕೇರಳದ ಮಾಜಿ ಶಾಸಕ ಹಾಗೂ ಹಿರಿಯ ರಾಜಕಾರಣಿ ಪಿ.ಸಿ. ಜಾಜ್‌ರ್ ಅವರನ್ನು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.ಸೌರ ಪ್ಯಾನೆಲ್ ಪ್ರಕರಣದಲ್ಲಿ ಆರೋಪಿಯಾಗಿರುವ ಮಹಿಳೆಯೊಬ್ಬಳು ಜಾಜ್‌ರ್ ಫೆ.10 ರಂದು ಥೈಕಾಡ್‌ನಲ್ಲಿರುವ ಅತಿಥಿ ಗೃಹಕ್ಕೆ ಕರೆದಿದ್ದು, ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾಳೆ. ಅಲ್ಲದೇ ಈ ಘಟನೆಯ ಬಳಿಕವೂ ಜಾಜ್‌ರ್ ತಮಗೆ ಅಶ್ಲೀಲ ಸಂದೇಶ ರವಾನಿಸುತ್ತಿದ್ದರು ಎಂದು ಮಹಿಳೆ ದೂರು ದಾಖಲಿಸಿದ್ದಾಳೆ.
