Asianet Suvarna News Asianet Suvarna News

ರಾಹುಲ್‌ ಗಾಂಧಿ ವಯನಾಡ್‌ ಭೂಕುಸಿತ ಬಗ್ಗೆ ಮಾತೇ ಆಡಿಲ್ಲ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಿಡಿ

ಕೇರಳದ ವಯನಾಡು ತೀವ್ರ ಭೂಕುಸಿತದ ಸಮಸ್ಯೆ ಎದುರಿಸುತ್ತಿದ್ದರೂ ಅಲ್ಲಿನ ಸಂಸದರಾಗಿದ್ದ ರಾಹುಲ್‌ ಗಾಂಧಿ ಒಮ್ಮೆಯೂ ಅದರ ಬಗ್ಗೆ ಮಾತೇ ಆಡಿಲ್ಲ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದ್ದಾರೆ. 

Keral wayanad landslide issue bengaluru south mp tejasvi surya slams against rahul gandhi rav
Author
First Published Aug 1, 2024, 9:38 AM IST | Last Updated Aug 1, 2024, 1:28 PM IST

ಪಿಟಿಐ ನವದೆಹಲಿ (ಆ.1): ಕೇರಳದ ವಯನಾಡು ತೀವ್ರ ಭೂಕುಸಿತದ ಸಮಸ್ಯೆ ಎದುರಿಸುತ್ತಿದ್ದರೂ ಅಲ್ಲಿನ ಸಂಸದರಾಗಿದ್ದ ರಾಹುಲ್‌ ಗಾಂಧಿ ಒಮ್ಮೆಯೂ ಅದರ ಬಗ್ಗೆ ಮಾತೇ ಆಡಿಲ್ಲ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದ್ದಾರೆ. ಇದು ಲೋಕಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಗಿ, ಕಲಾಪವನ್ನು ಕೆಲ ಕಾಲ ಮುಂದೂಡಲಾಗಿತ್ತು.

ದೇಶದ ವಿವಿಧೆಡೆಗಳಲ್ಲಿ ಪ್ರವಾಹ ಹಾಗೂ ಭೂಕುಸಿತದಿಂದ ಉಂಟಾದ ಹಾನಿಯ ಬಗ್ಗೆ ಬುಧವಾರ ಗಮನ ಸೆಳೆಯುವ ಸೂಚನೆಯ ಮೇಲೆ ಮಾತನಾಡಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ(Tejasvi Surya Bengaluru south mp), ‘ವಯನಾಡ್‌ ಸಂಸದರಾಗಿದ್ದಾಗ ರಾಹುಲ್‌ ಗಾಂಧಿ(Rahul gandhdi) ಒಮ್ಮೆಯೂ ಸಂಸತ್ತಿನಲ್ಲಿ ಭೂಕುಸಿತದ ಬಗ್ಗೆ ಮಾತನಾಡಲಿಲ್ಲ.

Paris Olympics 2024: ಬ್ಯಾಡ್ಮಿಂಟನ್ ಕ್ವಾರ್ಟರ್‌ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಚಿರಾಗ್-ಸಾತ್ವಿಕ್ ಜೋಡಿ..!

ಕೇರಳದ ವಿಪತ್ತು ಪರಿಹಾರ ಏಜೆನ್ಸಿಗಳು ವಯನಾಡಿನಲ್ಲಿ ಅಕ್ರಮ ಅರಣ್ಯ ಒತ್ತುವರಿಗಳನ್ನು ಧಾರ್ಮಿಕ ಸಂಸ್ಥೆಗಳ ಒತ್ತಡದಿಂದಾಗಿ ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದವು. ಇದನ್ನೇ ಅಲ್ಲಿನ ಅರಣ್ಯ ಸಚಿವರೂ ಸದನಕ್ಕೆ ತಿಳಿಸಿದ್ದರು’ ಎಂದು ಆಕ್ಷೇಪಿಸಿದರು. ಅವರ ಮಾತಿಗೆ ಕಾಂಗ್ರೆಸ್‌ ಸಂಸದರು ಪ್ರತಿಭಟನೆ ಆರಂಭಿಸಿದರು. ಹೀಗಾಗಿ ಲೋಕಸಭೆಯ ಕಲಾಪವನ್ನು ಸಂಜೆ 4 ಗಂಟೆಯವರೆಗೆ ಕೆಲ ಕಾಲ ಮುಂದೂಡಲಾಗಿತ್ತು

ರಾಹುಲ್, ಪ್ರಿಯಾಂಕಾ ಕೇರಳ ಸಿಎಂ ಭೇಟಿ;

ಭೂಕುಸಿತ ದುರಂತ ಸಂಭವಿಸಿರುವ ಕೇರಳದ ವಯನಾಡಿಗೆ, ಕ್ಷೇತ್ರದ ಹಿಂದಿನ ಸಂಸದ, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ವಯನಾಡು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಗುರುವಾರ ಭೇಟಿ ನೀಡಲಿದ್ದಾರೆ.

ಪ್ರತಿ​ಕೂಲ ಹವಾ​ಮಾನ ಕಾರಣ ಹೆಲಿ​ಕಾ​ಪ್ಟರ್‌ ಲ್ಯಾಂಡಿಂಗ್‌ ಅಸಾಧ್ಯ ಎಂದು ಕೇರ​ಳದ ಅಧಿ​ಕಾ​ರಿ​ಗಳು ತಿಳಿ​ಸಿ​ರುವ ಕಾರಣ ಬುಧವಾರ ತಮ್ಮ ಭೇಟಿಯನ್ನು ಮುಂದೂಡಿದ್ದರು.

 

ರಾಹುಲ್‌ ಗಾಂಧಿ ಜಾತಿ ಕೆದಕಿ ವಿವಾದ ಸೃಷ್ಟಿಸಿದ ಅನುರಾಗ್‌ ಠಾಕೂರ್‌, ಇದು ನಿಂದನೆ ಎಂದ ಕಾಂಗ್ರೆಸ್‌ ನಾಯಕ!

ದೇಶದ ವಿವಿಧ ಭಾಗಗಳಲ್ಲಿ ಭೂಕುಸಿತ ಮತ್ತು ಪ್ರವಾಹದಿಂದಾಗಿ ಜೀವ ಮತ್ತು ಆಸ್ತಿ ನಷ್ಟದ ಕುರಿತು ಲೋಕಸಭೆಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ಸಂತ್ರಸ್ತರಾದ ಜನರಿಗೆ ಎಲ್ಲಾ ರೀತಿಯಲ್ಲೂ ಕೇಂದ್ರ ಸರ್ಕಾರ ಸಹಾಯ ಮಾಡಬೇಕು. ಅಲ್ಲಿನ ಪರಿಸರ ಸಮಸ್ಯೆಗಳನ್ನು ಪರಿಶೀಲಿಸಬೇಕೆಂದು ಒತ್ತಾಯಿಸಿದರು.

Latest Videos
Follow Us:
Download App:
  • android
  • ios