Jan Swaraj Yatra| ಕಾಂಗ್ರೆಸ್‌ನವರು ಹಾನಗಲ್ಲ ಗೆದ್ದು ಕೋತಿಯಂತೆ ಆಡುತ್ತಿದ್ದಾರೆ: ಶ್ರೀರಾಮುಲು
* ಜನಸ್ವರಾಜ್ ಸಮಾವೇಶದಲ್ಲಿ ಸಚಿವ ಬಿ. ಶ್ರೀರಾಮುಲು ವಾಗ್ದಾಳಿ
* ದೇಶಕ್ಕಾಗಿ ಹಗಲಿರುಳು ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ
* ಕಾಂಗ್ರೆಸ್‌ನವರಿಗೆ ತಾಕತ್ತಿದ್ದರೆ 2023ರ ಚುನಾವಣೆ ಬೇಡ, ವಿಪ ಚುನಾವಣೆಯಲ್ಲಿ ಗೆದ್ದು ತೋರಿಸಿ
ಬ್ಯಾಡಗಿ(ನ.19): ಹಾನಗಲ್ಲ(Hanagal) ಕ್ಷೇತ್ರದಲ್ಲಿ ನಾವು ಗೆದ್ದಿದ್ದರೆ ಕಾಂಗ್ರೆಸ್ಸಿಗೆ(Congress) ಮಾತಾಡಲು ಬಾಯಿ ಇರುತ್ತಿರಲಿಲ್ಲ. ಕಾಂಗ್ರೆಸ್ ನಾಯಕರು ಒಂದು ಕ್ಷೇತ್ರದಲ್ಲಿ ಗೆದ್ದು ಕೋತಿಗಳಂತೆ(Monkey) ಜಿಗಿದಾಡುತ್ತಿದ್ದಾರೆ ಎಂದು ಸಚಿವ ಬಿ. ಶ್ರೀರಾಮುಲು(B Sriramulu) ಲೇವಡಿ ಮಾಡಿದರು.
ತಾಲೂಕಿನ ಕಾಗಿನೆಲೆಯ ಕನಕ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ಜನಸ್ವರಾಜ್(JanSwaraj) ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಹಾನಗಲ್ಲ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿರುವುದರಿಂದ ಹುಚ್ಚನ ಕೈಯಲ್ಲಿ ಕಲ್ಲು ಕೊಟ್ಟಂತಾಗಿದೆ.
ಹಾನಗಲ್ಲನಲ್ಲಿ ನಾವು ಗೆದ್ದಿದ್ದರೆ ಮೂಲೆಯಲ್ಲಿ ಕೈಕಟ್ಟಿಕೊಂಡು ನಿಲ್ಲುತ್ತಿದ್ದರು. ಸಿಂದಗಿಯಂತೆ(Sindagi) ಹಾನಗಲ್ಲ ಜನರು ಶಿವರಾಜ ಸಜ್ಜನರನ್ನು ಗೆಲ್ಲಿಸಿದ್ದರೆ ಅವರಿಗೆ ಮಾತನಾಡಲು ಬಾಯಿಯೇ ಇರುತ್ತಿರಲಿಲ್ಲ. ಕಾಂಗ್ರೆಸ್ ಒಂದು ಕ್ಷೇತ್ರ ಗೆದ್ದಾಕ್ಷಣ ನಾನು ಮುಖ್ಯಮಂತ್ರಿಯಾಗಬೇಕು(Chief Minister) ಎಂದು ಮುಗಿಬಿದ್ದಿದ್ದಾರೆ ಎಂದರು.
Karnataka Politics| ಕಾಂಗ್ರೆಸ್ ಬ್ರಿಟಿಷರಿಗೆ ಹುಟ್ಟಿದ ಪಕ್ಷ, ಅದರ ಕ್ಯಾಪ್ಟನ್ ಯಾರು?: ಪ್ರತಾಪ್
ಕಾಂಗ್ರೆಸ್‌ನಲ್ಲಿರುವ ಜೋಡೆತ್ತುಗಳು ಕುರ್ಚಿಗಾಗಿ ಈಗಲೇ ಬಡಿದಾಡುತ್ತಿರುವುದನ್ನು ಮೊನ್ನೆಯ ಒಂದು ಕಾರ್ಯಕ್ರಮದಲ್ಲಿ ನೋಡಿದ್ದೇವೆ. ಇವೆರಡು ಜೋಡೆತ್ತುಗಳಲ್ಲ, ಕಳ್ಳೆತ್ತುಗಳು. ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಈಗಲೇ ಕಚ್ಚಾಟ ಆರಂಭವಾಗಿದೆ. ಗಂಡ, ಹೆಂಡತಿ ಜಗಳದ ಮಧ್ಯೆ ಹಾನಗಲ್ಲನಲ್ಲಿ ಗೆದ್ದಿರುವ ಕಾಂಗ್ರೆಸ್‌ನ ಕೂಸು ಬಡವಾಗುತ್ತಿದೆ. ರಾಜ್ಯದಲ್ಲಿ(Karnataka) ಬಿಜೆಪಿ ಸರ್ಕಾರ(BJP Government) ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಬಂದಿದೆ. ಕಾಂಗ್ರೆಸ್‌ನವರ ಸುಳ್ಳುಗಳನ್ನು ನೀವು ಕೇಳಬೇಡಿ. ಹಾನಗಲ್ಲ ಕ್ಷೇತ್ರದಲ್ಲಿ ಸುಳ್ಳುಗಳನ್ನೇ ಹೇಳಿ ಗೆಲುವು ಸಾಧಿಸಿದರು ಎಂದರು.
ರಾಹುಲ್ ಪಾರ್ಟ್ ಟೈಂ ಲೀಡರ್
ರಾಹುಲ್ ಗಾಂಧಿ(Rahul Gandhi) ಚುನಾವಣೆ(Election) ಬಂದಾಗ ಬರ್ತಾರೆ, ಮತ್ತೆ ಹೋಗ್ತಾರೆ. ಅವರು ಎಲ್ಲಿ ಹೋಗ್ತಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಅವರು ಪಾರ್ಟ್ ಟೈಂ ಲೀಡರ್(Part Time Leader). ಆದರೆ, ನರೇಂದ್ರ ಮೋದಿ(Narendra Modi) ದೇಶಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ತಾಕತ್ತಿದ್ದರೆ 2023ರ ಚುನಾವಣೆ ಬೇಡ, ವಿಪ ಚುನಾವಣೆಯಲ್ಲಿ(Vidhan Parishat Election) ಗೆದ್ದು ತೋರಿಸಿ. ವಿಪ ಚುನಾವಣೆಯಲ್ಲಿ ನಾವು 15ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೃಷಿ ಸಚಿವ ಬಿ.ಸಿ. ಪಾಟೀ(BC Patil) ಮಾತನಾಡಿ, ಕೇಂದ್ರ, ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಗ್ರಾಮ ಸ್ವರಾಜ್ ವ್ಯವಸ್ಥೆಯನ್ನು ಬಲಪಡಿಸುವ ಕೆಲಸವನ್ನು ಮಾಡಬೇಕಿದೆ. ನರೇಗಾ(NAREGA) ಯೋಜನೆಯಿಂದ ಗ್ರಾಮ ಪಂಚಾಯಿತಿ ಸದಸ್ಯರಿಗೆ ಗೌರವ ಹೆಚ್ಚಾಗಿದೆ. ಇಲ್ಲದಿದ್ದರೆ ಕೆಲಸಕ್ಕಾಗಿ ಸುತ್ತಾಡಬೇಕಿತ್ತು. ಈಗ ಗ್ರಾಮಕ್ಕೆ ಏನು ಕೆಲಸ ಆಗಬೇಕು ಎಂಬುದನ್ನು ನಿರ್ಧರಿಸಿ ನೀವೇ ಕೆಲಸ ಮಾಡಿ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲು ಅವಕಾಶ ಕೊಟ್ಟಿರೋದು ಪ್ರಧಾನಿ ನರೇಂದ್ರ ಮೋದಿ ಎಂದರು.
Bitcoin Scam| 'ಪ್ರಿಯಾಂಕ್ ಖರ್ಗೆ ದೊಡ್ಡ ಹಾಸ್ಯನಟ'
ಸಂಸದ ಶಿವಕುಮಾರ ಉದಾಸಿ(Shivkumar Udasi) ಮಾತನಾಡಿ, ಬದ್ಧತೆ ಇದ್ದವರಿಗೆ ಅಧಿಕಾರ ಕೊಟ್ಟರೆ ಏನು ಸುಧಾರಣೆ ಮಾಡುತ್ತಾರೆ ಎಂಬುದಕ್ಕೆ ಯಡಿಯೂರಪ್ಪ(BS Yediyurappa) ಅವರು ಉದಾಹರಣೆಯಾಗಿದ್ದಾರೆ. ಸುವರ್ಣ ಗ್ರಾಮ ಯೋಜನೆ ಕೊಟ್ಟವರು ಯಡಿಯೂರಪ್ಪನವರು. ಜಲಜೀವನ ಮಿಶನ್ ಅಡಿ ಎರಡು ವರ್ಷ ದಲ್ಲಿ ಐದು ಕೋಟಿ ಜನರಿಗೆ ನಲ್ಲಿ ನೀರು ಸಿಗುತ್ತಿದೆ. ಹಾವೇರಿ(Haveri) ಜಿಲ್ಲೆಯಲ್ಲಿ 494 ಕೋಟಿ ರು. ವೆಚ್ಚದಲ್ಲಿ ನೀರು ಕೊಡುವ ಕಾರ್ಯ ನಡೆಯುತ್ತಿದೆ. ಈಗಾಗಲೇ 80 ಕೋಟಿ ರು. ಮೊತ್ತದ ಕಾಮಗಾರಿ ಆಗಿದೆ. ಪಾರದರ್ಶಕವಾಗಿ ಕೆಲಸ ಮಾಡಿಸುತ್ತಿದ್ದೇವೆ. ಆಸ್ತಿ ಡಿಜಿಟಲೈಸೇಶನ್ ಮಾಡುವ ಕಾರ್ಯ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ 15 ಹಾಗೂ 16ನೇ ಹಣಕಾಸು ಅನುದಾನವನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಯಾವ ಪಕ್ಷ ನಿಮ್ಮ ಪರವಾಗಿದೆ ಎಂಬುದನ್ನು ನೋಡಿ ಬೆಂಬಲ ಕೊಡಿ ಎಂದು ಮನವಿ ಮಾಡಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ 4 ಕೋಟಿ ರು. ಅನುದಾನ ಬರುತ್ತಿದ್ದು, ಗೌರವ ಧನ ಹೆಚ್ಚಿಸಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಗ್ರಾಪಂಗಳು ಇನ್ನಷ್ಟು ಸುಧಾರಣೆ ಆಗಲಿವೆ ಎಂದರು.
ಶಾಸಕ ನೆಹರು ಓಲೇಕಾರ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೇಂದ್ರದ ಯೋಜನೆಗಳು ಗ್ರಾಮಕ್ಕೆ ಬರುತ್ತಲೇ ಇರಲಿಲ್ಲ. ಮೋದಿ ಪ್ರಧಾನಿಯಾದ ಬಳಿಕ ಒಂದೊಂದು ಕ್ಷೇತ್ರಕ್ಕೆ ಎರಡು ನೂರು, ಮುನ್ನೂರು ಕೋಟಿ ರು. ಬರುತ್ತಿದೆ ಎಂದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಶಾಸಕ ಅರುಣಕುಮಾರ ಪೂಜಾರ, ವಿಪ ಸದಸ್ಯ ಪ್ರದೀಪ ಶೆಟ್ಟರ್, ಎಸ್.ವಿ. ಸಂಕನೂರ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಮಾಜಿ ಶಾಸಕ ಶಿವರಾಜ ಸಜ್ಜನರ, ಸುರೇಶಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಇತರರು ಇದ್ದರು.