Asianet Suvarna News Asianet Suvarna News

ಸಿಎಂ ಈ ನಡೆ ನೋವು ತಂದಿದೆ; ಹೈಕಮಾಂಡ್‌ಗೆ ಈಶ್ವರಪ್ಪ ದೂರು

ಯಡಿಯೂರಪ್ಪ ವಿರುದ್ಧ ಪಕ್ಷದ ಉಸ್ತುವಾರಿ ಅರುಣ್ ಸಿಂಗ್ ಗೆ ದೂರು ನೀಡಿದ ಕೆಎಸ್ ಈಶ್ವರಪ್ಪ/ ಕಳೆದ ಒಂದುವರೆ ವರ್ಷದಿಂದ ನಾನು ಗ್ರಾಮೀಣಾಭಿವೃದ್ಧಿ ಮಂತ್ರಿ ಆಗಿ ಕೆಲಸ ಮಾಡುತ್ತಿದ್ದೇನೆ/ ಒಂದೂವರೆ ವರ್ಷದಿಂದಲೂ ಮುಖ್ಯಮಂತ್ರಿಗಳೇ ನನ್ನ ಗಮನಕ್ಕೆ ತರದೆ, ಇಲಾಖೆಯ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ

Karnataka Rural development minister KS Eshwarappa complaint against CM BS Yediyurappa mah
Author
Bengaluru, First Published Mar 31, 2021, 4:57 PM IST

ಬೆಂಗಳೂರು(ಮಾ.  31)  ಸಚಿವ ಸ್ಥಾನ ಹಂಚಿಕೆ ವೇಳೆ, ಸಂಪುಟ ವಿಸ್ತರಣೆ ವೇಳೆ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿತ್ತು. ಒದೀಗ ಹಿರಿಯ ಸಚಿವರೊಬ್ಬರು ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧವೇ ಹೈಕಮಾಂಡ್ ಗೆ ದೂರು ಸಲ್ಲಿಸಿರುವ ಸುದ್ದಿ ಸ್ಫೋಟವಾಗಿದೆ.

ಯಡಿಯೂರಪ್ಪ ವಿರುದ್ಧ ಪಕ್ಷದ ಉಸ್ತುವಾರಿ ಅರುಣ್ ಸಿಂಗ್ ಗೆ ಸಚಿವ ಕೆಎಸ್ ಈಶ್ವರಪ್ಪದೂರು ನೀಡಿದ್ದಾರೆ.  ಕಳೆದ ಒಂದೂವರೆ ವರ್ಷದಿಂದ ನಾನು ಗ್ರಾಮೀಣಾಭಿವೃದ್ಧಿ ಮಂತ್ರಿ ಆಗಿ ಕೆಲಸ ಮಾಡುತ್ತಿದ್ದೇನೆ. ಒಂದೂವರೆ ವರ್ಷದಿಂದಲೂ ಮುಖ್ಯಮಂತ್ರಿಗಳೇ ನನ್ನ ಗಮನಕ್ಕೆ ತರದೆ, ಇಲಾಖೆಯ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು   ಈಶ್ವರಪ್ಪ ಉಲ್ಲೇಖಿಸಿದ್ದಾರೆ.

ಜಾರಕಿಹೊಳಿ ಪ್ರಕರಣದಲ್ಲಿ ಅಂತರ ಕಾಯ್ದುಕೊಂಡ ಬಿಜೆಪಿ ನಾಯಕರು

ಬಿಜೆಪಿಯ ಹಿರಿಯ ಸಚಿವನಾಗಿ ಇದು ನನಗೆ ನೋವಾಗಿದೆ. ಪಕ್ಷದ ಶಿಸ್ತು ಮತ್ತು ಹಿತದೃಷ್ಟಿ ಕಾರಣದಿಂದ ನಿಮ್ಮ ಗಮನಕ್ಕೆ ತರುತ್ತಿದ್ದೇನೆ ಎಂದು ಅರುಣ್ ಸಿಂಗ್ ಗೆ ತಿಳಿಸಿದ್ದಾರೆ.

  ಒಂದು ಕಡೆ ರಮೇಶ್  ಜಾರಕಿಹೊಳಿ  ಪ್ರಕರಣ,    ಇನ್ನೊಂದು ಕಡೆ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗಳು ಪಕ್ಷಕ್ಕೆ ಮುಜುಗರ ತರುವಂಥ ಸನ್ನಿವೇಶ ನಿರ್ಮಾಣ ಮಾಡಿದ್ದವು. ಶಾಸಕರ ತಂಡವೊಂದು ಸಿಎಂ ಭೇಟಿ ಮಾಡಿ ಯತ್ನಾಳ್ ವಿರುದ್ಧ  ದೂರು ದಾಖಲಿಸಿದ್ದು ವರದಿಯಾಗಿತ್ತು. ಈ ನಡುವೆ ಈಶ್ವರಪ್ಪ ಸಹ ಈ ರೀತಿ ಪತ್ರ ಬರೆದಿರುವುದು ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ .

"

Karnataka Rural development minister KS Eshwarappa complaint against CM BS Yediyurappa mah

 

Karnataka Rural development minister KS Eshwarappa complaint against CM BS Yediyurappa mah

Follow Us:
Download App:
  • android
  • ios